ಮೈಸೂರಲ್ಲಿ ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ದಾಳಿ

ಮೈಸೂರು,ಮೇ 16(ಜಿಎ)-ಮೈಸೂ ರಿನಲ್ಲಿ ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿ ಗಳ ತಂಡ ದಾಳಿ ನಡೆಸಿ ನಕಲಿ ರಸಗೊಬ್ಬರ ಹಾಗೂ ತಯಾರಿಕೆಗೆ ಬಳಸುತ್ತಿದ್ದ ಉಪ ಕರಣಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಮೈಸೂರಿನ ಮೇಟಗಳ್ಳಿಯ ಸ್ಮಶಾನದ ಎದುರಿನ ಕೋಳಿ ಫಾರಂನಲ್ಲಿ ನಕಲಿ ರಸ ಗೊಬ್ಬರ ತಯಾರಿಸಲಾಗುತ್ತಿದೆ ಎಂಬ ನಿಖರ ಮಾಹಿತಿ ಮೇರೆಗೆ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಸಂಬಂಧ ಮೇಟ ಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ರಸಗೊಬ್ಬರ ತಯಾ ರಿಕಾ ಘಟಕವನ್ನು ಕೆ.ಎನ್.ಮಹೇಶ್ ಎಂಬಾತ ನಡೆಸುತ್ತಿದ್ದು, ಈತನ ವಿರುದ್ಧ ಈಗಾಗಲೇ ಮೈಸೂರಿನ ವಿವಿಧ ಠಾಣೆಗಳಲ್ಲಿ ನಕಲಿ ರಸಗೊಬ್ಬರ ತಯಾರಿಕೆ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮೇಟಗಳ್ಳಿಯ ಸ್ಮಶಾನದ ಎದುರಿನ ಕೋಳಿ ಫಾರಂನಲ್ಲಿ ಮ್ಯೂರಿಯೇಟ್ ಆಫ್ ಪೆÇಟಾಷ್ (ಎಂಒಪಿ) ಎಂಬ ರಸಗೊಬ್ಬರವನ್ನು ನಕಲು ಮಾಡು ತ್ತಿದ್ದು, ಇದಕ್ಕಾಗಿ ಉಪ್ಪು, ನಾನಾ ಬಣ್ಣಗಳು, ಪ್ರಖ್ಯಾತ ರಸಗೊಬ್ಬರಗಳ ಚೀಲ ಹಾಗೂ ಅವುಗಳನ್ನು ಹೊಲಿಯುವ ಯಂತ್ರವನ್ನು ಬಳಸಿಕೊಳ್ಳುತ್ತಿದ್ದುದು ದಾಳಿ ವೇಳೆ ಬೆಳಕಿಗೆ ಬಂದಿದ್ದು, ಇವುಗಳನ್ನು ಕೃಷಿ ಅಧಿಕಾರಿ ಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ನಕಲಿ ಗೊಬ್ಬರವನ್ನು ಪರೀಕ್ಷಿಸಲು ಲ್ಯಾಬ್‍ಗೆ ಸ್ಯಾಂಪಲ್ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು. ಮೈಸೂರಿನ ಹೊರವಲಯ ದಲ್ಲಿರುವ ಹಳೆ ಕಟ್ಟಡಗಳನ್ನು ಗುರುತಿಸಿ ಅಲ್ಲಿಗೆ ನಮ್ಮ ತಂಡ ತೆರಳಿ ಯಾವುದಾದರೂ ಕೃಷಿಗೆ ಸಂಬಂಧಿಸಿದಂತೆ ಅಕ್ರಮ ನಡೆಯುತ್ತಿದೆಯೇ ಎಂದು ಪರಿಶೀಲನೆ ನಡೆಸುತ್ತಿರುತ್ತಾರೆ. ಹಾಗೇ ಈ ಸ್ಥಳದಲ್ಲಿ ನಕಲಿ ರಸಗೊಬ್ಬರ ತಯಾರಿಸಲಾಗುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾಗ ಇಲ್ಲಿ ಮ್ಯೂರಿಯೇಟ್ ಆಫ್ ಪೆÇಟಾಷ್ ಅನ್ನು ನಕಲಿ ಮಾಡುತ್ತಿರುವುದು ಕಂಡು ಬಂದಿತು ಎಂದು ಅವರು ಹೇಳಿದರು.

ದಾಳಿಯ ವಿಚಾರ ತಿಳಿದು ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೇಟಗಳ್ಳಿ ಪೊಲೀಸರು ತಿಳಿಸಿದ್ದಾರೆ. ನಕಲಿ ಮ್ಯೂರಿಯೇಟ್ ಆಫ್ ಪೆÇಟಾಷ್‍ನ್ನು ಮೈಸೂರಿನಲ್ಲಿ ತಯಾರಿಸಿ, ಕೊಡಗು, ಸಕಲೇಶಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಈ ತಂಡ ಹೊಂದಿತ್ತು. ಈ ಅಕ್ರಮದಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ನಕಲಿ ರಸಗೊಬ್ಬರ ತಯಾರಿಕೆ ಕುರಿತು ಮೂರು ಎಫ್‍ಐಆರ್‍ಗಳು ದಾಖಲಾಗಿದೆ. ಈತನ ಮೇಲೆ ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ. ನಗರದಲ್ಲಿ ನಕಲಿ ರಸಗೊಬ್ಬರ ತಯಾರಿಕೆ ವಿಚಾರವಾಗಿ 9 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ 7 ಪ್ರಕರಣಗಳಲ್ಲಿ ಎಫ್‍ಐಆರ್ ಆಗಿದೆ. ಎರಡು ಪ್ರಕರಣಗಳ ಸ್ಯಾಂಪಲ್‍ಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದರು. ಕಾರ್ಯಾಚರಣೆಯಲ್ಲಿ ಉಪ ಕೃಷಿ ನಿರ್ದೇಶಕ ಧನಂಜಯ್, ಸಹಾಯಕ ಕೃಷಿ ನಿರ್ದೆಶಕ ಜಾರಿ ದಳದ ಕೃಷ್ಣ, ಸಹಾಯಕ ಕೃಷಿ ನಿರ್ದೆಶಕಿ ಮಧು ಲತಾ ಹಾಗೂ ಕೃಷಿ ಅಧಿಕಾರಿಗಳಾದ ಜೀವನ್ ಮತ್ತು ಕಾರ್ತಿಕ್ ಪಾಲ್ಗೊಂಡಿದ್ದರು.