‘ಲಾಕ್‍ಡೌನ್’ನಲ್ಲೂ ಕೃಷಿಗೆ ಅವಕಾಶ ಆಹಾರ ಉತ್ಪಾದನೆ ಕೊರತೆಯಾಗದು: ಸಿಎಂ ಬಿಎಸ್‍ವೈ ಸ್ಪಷ್ಟನೆ

ಬೆಂಗಳೂರು,ಏ.22(ಕೆಎಂಶಿ)- ಲಾಕ್ ಡೌನ್ ಸಂದರ್ಭದಲ್ಲೂ ಕೃಷಿ ಚಟುವಟಿಕೆ ನಡೆ ಯುತ್ತಿರುವುದರಿಂದ ರಾಜ್ಯ ದಲ್ಲಿ ಆಹಾರ ಉತ್ಪಾದನೆ ಯಲ್ಲಿ ಕೊರತೆಯಾಗದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸಂಕಷ್ಟದಲ್ಲೂ ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘ ನೀಯ. ಅವರ ಬೆವರ ಹನಿಗೆ ಎಷ್ಟು ಕೃತ ಜ್ಞತೆ ಸಲ್ಲಿಸಿದರೂ ಸಾಲದು ಎಂದು ಸರಣಿ ಟ್ವೀಟ್‍ನಲ್ಲಿ ಹೇಳಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲೂ ಕೃಷಿ ಚಟುವಟಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅವರು, ಬೆಳೆದ ಕಾಯಿಪಲ್ಲೆಗಳನ್ನು ರಾಜ್ಯದ ಯಾವುದೇ ಭಾಗ ದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸ ಲಾಗಿದೆ. ಮುಂದಿನ ದಿನಗಳಲ್ಲಿ ಅವರ ಮನೆ ಬಾಗಿಲಲ್ಲೇ ಅವರು ಬೆಳೆದ ಹಣ್ಣು, ತರಕಾರಿ, ಹೂವುಗಳನ್ನು ಖರೀದಿಸಿ, ಸರ್ಕಾರವೇ ಮಾರಾಟ ಮಾಡಲು ಯೋಜನೆ ರೂಪಿಸುತ್ತಿದೆ ಎಂದಿದ್ದಾರೆ.