ಮೊದಲು ಮಂತ್ರಿ ಸ್ಥಾನ, ನಂತರ ವಿಧಾನಸೌಧ 3ನೇ ಮಹಡಿ ಕಚೇರಿ, ಸರ್ಕಾರಿ ಮನೆ ಕೇಳುತ್ತಾರೆ…

ಬೆಂಗಳೂರು: ಸಚಿವ ರಾಗಿ ಸೇವೆ ಸಲ್ಲಿಸಲು ಉನ್ನತ ಶಿಕ್ಷಣ, ನೀರಾವರಿಗಿಂತ ಉತ್ತಮ ಖಾತೆಗಳು ಬೇಕೇ ಎಂದು ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ತಮ್ಮ ಪಕ್ಷದ ಸಚಿವರನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ.

ಜನರಿಗೆ ಸಮೀಪವಾಗಿರುವ ಇಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿ ತಮ್ಮ ಸಾಮಥ್ರ್ಯವನ್ನು ತೋರಿಸಬೇಕು, ಇಲ್ಲವೇ ತಮಗೆ ಹಣಕಾಸು, ಇಂಧನ, ಸಾರಿಗೆ ಯಂತಹ ಇಲಾಖೆಗಳೇಬೇಕೆಂದು ಕೇಳ ಬೇಕು. ಮೊದಲು ಮಂತ್ರಿ ಸ್ಥಾನ ಕೇಳು ತ್ತಾರೆ, ಆನಂತರ ವಿಧಾನ ಸೌಧದಲ್ಲಿ ಮೂರನೇ ಮಹಡಿಯ ಕಚೇರಿ ಕೇಳು ತ್ತಾರೆ. ಆನಂತರ ಸರ್ಕಾರಿ ಮನೆ ಕೇಳುತ್ತಾರೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾ ಗಿದ್ದು, ಯಾರೂ ಕೂಡ ಅಸಮಾಧಾನಗೊಂಡಿಲ್ಲ. ತಮ್ಮ ಬಳಿ ಯಾರೂ ಕೂಡ ಅಸಮಾಧಾನವನ್ನು ತೋಡಿ ಕೊಂಡಿಲ್ಲ. ಅಲ್ಲದೆ, ಇಂತಹ ಖಾತೆಯೇ ಬೇಕು ಎಂದು ಯಾರೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಾಗುವುದು, ಇದಕ್ಕೂ ಮುನ್ನ ವಿಧಾನಮಂಡಲದ ಜಂಟಿ ಅಧಿವೇಶನ ಕರೆಯ ಲಾಗು ವುದು ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. 5 ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿ ರುತ್ತದೆ. ಈಗಿರುವ ಕೆಲವೊಂದು ಸಮಸ್ಯೆ ಗಳು ಇನ್ನೊಂದು ವಾರದಲ್ಲಿ ಬಗೆಹರಿ ಯಲಿವೆ. ಸರ್ಕಾರ ಬೀಳುತ್ತೆ ಎಂದು ಹಗಲು ಗನಸು ಕಾಣುವವರು ಕಾಣುತ್ತಿರಲಿ. ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ. ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಯಾಗಿದ್ದಾಗ ಎಂದಾದರೂ ರೈತರ ಸಾಲ ಮನ್ನಾ ಮಾಡಿದ್ದರೆ ಎಂದು ಪ್ರಶ್ನಿಸಿದರು. ಸಾಲ ಮನ್ನಾ ಮಾಡುವ ವಿಚಾರದಲ್ಲಿ ಏನು ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಅಂಥವರಿಂದ ಪಾಠ ಕಲಿಯಬೇಕಿಲ್ಲ. ರೈತರ ಸಾಲ ಮನ್ನಾ ಮಾಡುವುದಷ್ಟೇ ಅಲ್ಲ, ಮತ್ತೆ ಸಾಲಗಾರ ರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಅಥಣ ಕ್ಷೇತ್ರದ ಜನರೇ ಶಾಪ ಹಾಕಿ ಕೂರಿ ಸಿದ್ದಾರೆ. ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನಹರಿಸಲಿ ಎಂದರು.