ಶುಕ್ರವಾರ ದೇವರಾಜ ಮಾರುಕಟ್ಟೆಯಲ್ಲೇ ಹೂ ಮಾರಾಟಕ್ಕೆ ಅವಕಾಶ

ಮೈಸೂರು, ಅ.22(ಪಿಎಂ)- ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಖರೀದಿ ವೇಳೆ ದೇವರಾಜ ಮಾರುಕಟ್ಟೆಯಲ್ಲಿ ಜನದಟ್ಟಣೆಯಾಗಿ ಕೊರೊನಾ ಸೋಂಕು ಹರಡುವ ಅಪಾಯ ಇರುವುದರಿಂದ ಅ.23ರಿಂದ 25ರವರೆಗೆ (3 ದಿನ) ಹೂ ವ್ಯಾಪಾರ ಮಳಿಗೆಗಳನ್ನು ಎಂದಿನಂತೆ ಜೆಕೆ ಮೈದಾನಕ್ಕೆ ಸ್ಥಳಾಂತರ ಮಾಡಿದ್ದ ಮಹಾನಗರ ಪಾಲಿಕೆ, ಈಗ ಹೂ ವ್ಯಾಪಾರಿಗಳ ಮನವಿ ಮೇರೆಗೆ ಶುಕ್ರವಾರ ಒಂದು ದಿನ ಸ್ಥಳಾಂತರಕ್ಕೆ ವಿನಾಯಿತಿ ನೀಡಿದೆ. ಹಾಗಾಗಿ ಅ.24 ಮತ್ತು 25 ರಂದು ಮಾತ್ರ ಹೂವಿನ ಮಾರುಕಟ್ಟೆ ಜೆಕೆ ಮೈದಾನಕ್ಕೆ ಸ್ಥಳಾಂತರಗೊಳ್ಳಲಿದೆ.

ಬುಧವಾರ ಪಾಲಿಕೆಗೆ ಭೇಟಿ ನೀಡಿದ್ದ ಹೂ ವ್ಯಾಪಾರಿಗಳು, ಆಯುಕ್ತರ ಅನುಪಸ್ಥಿತಿ ಯಲ್ಲಿ ಅವರ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ ತೆರಳಿದ್ದರು. ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ ಹಬ್ಬದಲ್ಲಿ ಜೆಕೆ ಮೈದಾ ನಕ್ಕೆ ಹೂ ಮಳಿಗೆಗಳು ಸ್ಥಳಾಂತರ ಗೊಂಡಾಗ ಸರಿಯಾದ ಮೂಲ ಸೌಲಭ್ಯ ಗಳಿಲ್ಲದೆ ಸಮಸ್ಯೆ ಎದುರಿಸಬೇಕಾಯಿತು. ವ್ಯಾಪಾರಸ್ಥರೇ ಸ್ವಂತ ಹಣ ವೆಚ್ಚ ಮಾಡಿ ಶಾಮಿಯಾನ, ವಿದ್ಯುತ್ ಸಂಪರ್ಕ ಸೇರಿ ದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕಾ ಯಿತು. ಅಲ್ಲದೇ, 2 ಬಾರಿ ಸ್ಥಳಾಂತರ ಸಂದರ್ಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ವಾಗದೇ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಹಾಗಾಗಿ, ಹಬ್ಬಗಳ ಸಂದರ್ಭ ದೇವರಾಜ ಮಾರುಕಟ್ಟೆಯಲ್ಲೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸ ಬೇಕು, ಸ್ಥಳಾಂತರ ಆದೇಶ ಹಿಂಪಡೆಯ ಬೇಕು ಎಂದು ಕೋರಿಕೊಂಡಿದ್ದರು.

ಈ ಸಂಬಂಧ ಪಾಲಿಕೆಯ ಆಯುಕ್ತ ರನ್ನು ಗುರುವಾರ ಭೇಟಿ ಮಾಡಿದ ಹೂವಿನ ವ್ಯಾಪಾರಿಗಳ ಸಂಘದ ಸದಸ್ಯರಾದ ಬಿ.ಆರ್. ಯತಿರಾಜ್ ಹಾಗೂ ಎನ್.ಮಂಜುನಾಥ್ ಮತ್ತಿತರ ವರ್ತಕರು ಸಮಸ್ಯೆಗಳನ್ನು ಹೇಳಿ ಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಗುರುದತ್ತ ಹೆಗಡೆ, ಕೊರೊನಾ ಹಾವಳಿಯ ಸನ್ನಿವೇಶ ಅರ್ಥ ಮಾಡಿಕೊಂಡು ಸಹಕರಿಸಿ. ಹಬ್ಬಗಳ ಸಂದರ್ಭ ಹೂ ಮಾರುಕಟ್ಟೆಯಲ್ಲಿ ಜನದಟ್ಟಣೆ ತಪ್ಪಿಸಲು ಸ್ಥಳಾಂತರ ಬಿಟ್ಟರೆ ಬೇರೆ ದಾರಿ ಇಲ್ಲ. ಮೈಸೂರಿನ ನಾಗರಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಮನದಟ್ಟು ಮಾಡಿ ಕೊಟ್ಟರು. ಕೊನೆಗೆ, ಶುಕ್ರವಾರ 1 ದಿನ ವಿನಾ ಯಿತಿ ನೀಡುವುದಾಗಿ ತಿಳಿಸಿದರು. ಆಯುಕ್ತರ ಮಾತಿಗೆ ಹೂ ವ್ಯಾಪಾರಸ್ಥರೂ ಒಪ್ಪಿಕೊಂಡರು.