ಮೈಸೂರು,ಏ.27(ಎಂಟಿವೈ)- ಲಾಕ್ ಡೌನ್‍ನಿಂದಾದ ಸಂತ್ರಸ್ತರಿಗೆ ಆಹಾರ ಹಾಗೂ ಅನಾರೋಗ್ಯಪೀಡಿತರಿಗೆ ಔಷಧ ಪೂರೈ ಸುತ್ತಿದ್ದ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ಕಾರ್ಯಕರ್ತರು ಕುಕ್ಕರಹಳ್ಳಿ ಕೆರೆ ಬಳಿಯಿರುವ ಟಾಂಗಾ ನಿಲ್ದಾಣದಲ್ಲಿದ್ದ ಕುದುರೆಗಳಿಗೆ ಮೇವು ವಿತರಿಸಿ, ಕೆಲ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ನೀಡಿದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಿವಿಧ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಜಯೇಂದ್ರ ಅಭಿ ಮಾನಿಗಳು ಲಾಕ್‍ಡೌನ್‍ನಿಂದ ಪ್ರಯಾ ಣಿಕರಿಲ್ಲದ ಕಾರಣ, ದಿನದ ಸಂಪಾದನೆ ಯಿಲ್ಲದೆ ಕಂಗೆಟ್ಟಿರುವ ಟಾಂಗಾವಾಲಾ ಗಳ ನೆರವಿಗೆ ಮುಂದಾದರು. ಕುಕ್ಕರಹಳ್ಳಿ ಕೆರೆ ಸಮೀಪವಿರುವ ಟಾಂಗಾ ನಿಲ್ದಾಣಕ್ಕೆ ಆಗಮಿಸಿ ಅಲ್ಲಿನ ಕುದುರೆಗಳಿಗೆ ಹುಲ್ಲು, ಹುರುಳಿ ಹಾಗೂ ಮೇವನ್ನು ನೀಡಿದರು. ಬಳಿಕ ವಿವಿಧೆಡೆ ಕೂಲಿಯನ್ನೇ ಅವಲಂಬಿ ಸಿದ್ದ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕ ರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಪ್ರದರ್ಶಿಸಿದರು.
ಇದೇ ವೇಳೆ ತಾ.ಪಂ. ಮಾಜಿ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ ಮಾತನಾಡಿ, ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಪ್ರತಿದಿನ ದುಡಿಮೆ ಮಾಡಿ ಜೀವನ ಸಾಗಿಸುವಂತಹ ಕೂಲಿ ಕಾರ್ಮಿಕರ ಸ್ಥಿತಿ ಹೇಳತೀರದ್ದಾಗಿದೆ. ಕಳೆದ ಮೂವತ್ತು ದಿನಗಳಿಂದಲೂ ವಿಜ ಯೇಂದ್ರ ಅಭಿಮಾನಿ ಬಳಗದಿಂದ ಬಡವ ರಿಗೆ, ಕೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಹಾರ ಪೂರೈಸುತ್ತಾ ಬಂದಿದ್ದೇವೆ. ಇಂದು ಕುದುರೆಗಳಿಗೆ ಮೇವು ಪೂರೈಸುವುದ ರೊಂದಿಗೆ ಟಾಂಗಾವಾಲಾಗಳಿಗೆ ದಿನಸಿ ಕಿಟ್ ವಿತರಿಸಿದ್ದೇವೆ ಎಂದರು.
ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮಿ ದೇವಿ ಮಾತನಾಡಿ, ಕೊರೊನಾ ಸಂಕಷ್ಟಕ್ಕೀ ಡಾದವರಿಗಾಗಿ ಆಹಾರ ಪೂರೈಸುವ ಮಹ ತ್ತರ ಸೇವೆಯನ್ನು ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ ನೆರವೇರಿಸುತ್ತಾ ಬಂದಿದೆ. ಅನಾರೋಗ್ಯ ಪೀಡಿತ ನೂರಾರು ಮಂದಿಗೆ ಔಷಧ ನೀಡುವ ಮೂಲಕ ನೆರವಾಗಿತ್ತು. ಮೂಕ ಪ್ರಾಣಿ-ಪಕ್ಷಿಗಳ ಹಿತ ಕಾಪಾಡುವ ಕೆಲಸಕ್ಕೆ ಮುಂದಾಗುವ ಮೂಲಕ ಮಾನ ವೀಯತೆ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸು ತ್ತಿದ್ದಾರೆ. ಆಹಾರವಿಲ್ಲದೆ ಮೂಕ ಪ್ರಾಣಿ ಗಳ ರೋದನೆಯನ್ನು ಗಮನಿಸುವ ಮೂಲಕ ಎಲ್ಲರೂ ತಮ್ಮ ಶಕ್ತಿಯನುಸಾರ ಪ್ರಾಣಿ-ಪಕ್ಷಿಗಳ ರಕ್ಷಣೆ ಹಾಗೂ ಪೆÇೀಷ ಣೆಗೆ ನೀರು, ಆಹಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅಭಿಮಾನಿ ಬಳಗದ ಆನಂದ್, ವಕೀಲ ಪ್ರಸನ್ನ, ನಿಖಿಲ್, ಜಸ್ವಂತ್, ವಿಕ್ರಂ ಅಯ್ಯಂಗಾರ್, ಅಶೋಕ್, ಸತೀಶ್, ಅರಸೀಕೆರೆ ಉಮೇಶ್, ಹರೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.