ರೋಟರಿ ಐವರಿ ಸಿಟಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು: ನಗರದ ರೋಟರಿ ಐವರಿ ಸಿಟಿ, ರೋಟರಿ ಕ್ಲಬ್ ಬೆಂಗಳೂರು, ರೋಟರಿ ಕ್ಲಬ್ ಕೋರಮಂಗಲ, ಬೆಂಗಳೂರು, ಮೆಡಿ ಕಲ್ ಅಂಡ್ ಆಪ್ಟಿಕಲ್ ಏಡ್, ಉಷಾಕಿರಣ ಕಣ್ಣಿನ ಆಸ್ಪತ್ರೆ ಮತ್ತು ಕಾಮಾಕ್ಷಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿ ರವು ಯಶಸ್ವಿಯಾಗಿ ನಡೆಯಿತು.

ನಗರದ ಜಯಲಕ್ಷ್ಮಿಪುರಂ ನಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಶಾಲೆಯಲ್ಲಿ ನಡೆದ 4 ದಿನದ ಶಿಬಿರದಲ್ಲಿ ಒಟ್ಟು 1776 ಮಂದಿ ರೋಗಿಗಳು ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂ ಡಿದ್ದು, 1,050ಕ್ಕೂ ಅಧಿಕ ನೇತ್ರ ತಪಾಸಣೆ ಯೊಂದಿಗೆ ಉಚಿತ ಕನ್ನಡಕವನ್ನೂ ವಿತರಿಸ ಲಾಯಿತು. ಜೊತೆಗೆ 1,350 ಮಂದಿಗೆ ಸಾಮಾನ್ಯ ರೋಗಗಳ ಪರೀಕ್ಷೆ ನಡೆಸಿ ಅದಕ್ಕೆ ಬೇಕಾದ ಉಚಿತ ಔಷಧಿಗಳನ್ನು ವಿತರಿಸಲಾಯಿತು.

ಲಂಡನ್‍ನ ಕಣ್ಣಿನ ತಜ್ಞ ಡಾ.ಕಾಂತಿಲಾಲ್ ಮಿಸ್ತ್ರಿ ನೇತೃತ್ವದಲ್ಲಿ ಹತ್ತು ಜನರ ಕಣ್ಣಿನ ತಜ್ಞರ ತಂಡ ಭಾಗಿಯಾಗಿತ್ತು. ಡಾ.ರಮಣ ಅವರ ನೇತೃತ್ವದಲ್ಲಿ ಸಾಮಾನ್ಯ ರೋಗಗಳ ತಪಾಸಣೆ ಯನ್ನು ಸುಮಾರು 20 ನುರಿತ ವೈದ್ಯರ ತಂಡ ನಡೆಸಿತು. ಕಾರ್ಯಕ್ರಮದಲ್ಲಿ ರೋಟರಿ ಸಹಾ ಯಕ ರಾಜ್ಯಪಾಲ ರೊ.ರಾಘವೇಂದ್ರ, ರೋಟರಿ ಐವರಿ ಸಿಟಿ ಅಧ್ಯಕ್ಷ ರೊ.ಬಾಲಚಂದರ್, ಕಾರ್ಯ ದರ್ಶಿ ರೊ.ಪೂಜಾ ಬಾಳಿಗಾ, ಉಷಾಕಿರಣ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ.ರವಿಶಂಕರ್, ರೊ.ಸುನಿಲ್ ಎಲ್.ಬಾಳಿಗಾ, ರೊ.ಪ್ರಸಾದ್, ಡಾ.ಸಚ್ಚಿದಾನಂದ ಹಾಗೂ ರೋಟರಿ ಐವರಿ ಸಿಟಿಯ ಸದಸ್ಯರುಗಳು ಭಾಗಿಯಾಗಿದ್ದರು.