ಎನ್‌ಟಿಎಂ ಶಾಲೆ ಉಳಿಸಲು ಆಗ್ರಹಿಸಿ ನ್ಯಾಯಾಲಯದ ಎದುರು ಹೋರಾಟ ನ್ಯಾಯಾಂಗದ ತೀರ್ಪು ನಾವು ಒಪ್ಪುವುದಿಲ್ಲ: ಪ.ಮಲ್ಲೇಶ್

ಮೈಸೂರು, ಸೆ.೨೪(ಆರ್‌ಕೆಬಿ)- ಮಹಾರಾಣ ಎನ್‌ಟಿಎಂ ಶಾಲೆ ಉಳಿ ಯಲಿ, ಸ್ವಾಮಿ ವಿವೇಕಾನಂದರ ಆಶಯ ಶಾಲೆಯನ್ನು ಕಟ್ಟುವ ಕಡೆಗೆ ಹೊರತು ಕೆಡವುವ ಕಡೆಗಲ್ಲ, ಮುಖ್ಯಮಂತ್ರಿಗಳ ಮಾತು ಉಳಿಯಲಿ, ಸರ್ಕಾರದ ಆದೇಶದಂತೆ ಐತಿಹಾಸಿಕ ಪ್ರಥಮ ಬಾಲಕಿಯರ ಶಾಲೆ ಉಳಿಯಲಿ.
ಈ ಘೋಷಣೆಗಳನ್ನು ಮುಂದಿಟ್ಟು ಕೊಂಡು ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಮುಖಂಡರು ಮೈಸೂರಿನ ನ್ಯಾಯಾಲ ಯದ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮುಖ್ಯಸ್ಥ, ಪ್ರಗತಿಪರ ಚಿಂತಕ ಪ.ಮಲ್ಲೇಶ್, ನ್ಯಾಯಾಂಗದ ತೀರ್ಪು ನಾವು ಒಪ್ಪುವುದಿಲ್ಲ ಎಂದು ಘೋಷಿ ಸಲು ಸಿದ್ಧರಿದ್ದೇವೆ. ನ್ಯಾಯಾಂಗ ಕನ್ನಡದ ವಿರುದ್ಧ ತೀರ್ಮಾನ ಕೊಟ್ಟಿದೆ. ನ್ಯಾಯಾಂಗದ ಬಗ್ಗೆ ನಮಗೆ ಗೌರವವಿದೆ. ಆದರೆ ಕೊಟ್ಟಿರುವ ತೀರ್ಪನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.
ಮುಂದೆ ನಮ್ಮ ಹೋರಾಟ ದ್ವಿಗುಣ ಗೊಳ್ಳಲಿದೆ. ಹೋರಾಟವನ್ನು ಗೋಕಾಕ್ ಚಳವಳಿ ಮಾದರಿಯಲ್ಲಿ ರಾಜ್ಯಕ್ಕೆ ಕೊಂಡೊಯ್ಯಲಿದ್ದೇವೆ. ಕನ್ನಡ ಜನರ ಅಸ್ಮಿತೆಯನ್ನು, ಕನ್ನಡದ ಸಾರ್ವಭೌಮತೆ ಯನ್ನು, ಕನ್ನಡದ ಪ್ರೀತಿಯನ್ನು ಯಾವ ಸರ್ಕಾರವಾಗಲೀ, ನ್ಯಾಯಾಲಯವಾ ಗಲೀ ಹತ್ತಿಕ್ಕಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾಷೆ ಉಳಿದರೆ ನಾವು ಉಳಿಯುತ್ತೇವೆ. ಭಾಷೆ ನಮ್ಮ ಬದುಕು. ಬಹಳ ಸಹನೆಯಿಂದಿರುವ ಕನ್ನಡಿಗರು ಮೇಲೆದ್ದರೆ ಯಾರೂ ಹಿಡಿ ಯಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ೧೫ ದಿನಗಳ ಹಿಂದೆ ಮುಖ್ಯಮಂತ್ರಿ ನೀಡಿದ ಭರವಸೆ ಈಡೇರಿಲ್ಲ. ನ್ಯಾಯಾಲಯ ತೀರ್ಪು ಕೊಟ್ಟ ಮಾತ್ರಕ್ಕೆ ಎನ್‌ಟಿಎಂ ಶಾಲೆಯ ಒಂದಿAಚು ಭೂಮಿಯನ್ನೂ ಆಶ್ರಮಕ್ಕೆ ಬಿಡುವುದಿಲ್ಲ. ಎಂತಹ ಸಂದರ್ಭ ಬಂದರೂ ಹೋರಾಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಗಳ ಮುಖಂಡರಾದ ಮಾಜಿ ಮೇಯರ್ ಪುರುಷೋತ್ತಮ್, ಸ.ರ.ಸುದರ್ಶನ್, ಮೋಹನ್‌ಕುಮಾರ್ ಗೌಡ, ನಾ.ದಿವಾ ಕರ್, ಎಸ್.ಬಾಲಕೃಷ್ಣ, ಬನ್ನೂರು ಕೆ.ರಾಜು, ಹೊಸಕೋಟೆ ಬಸವರಾಜು, ಮಾಳವಿಕಾ ಗುಬ್ಬಿವಾಣ , ಸೋಸಲೆ ಸಿದ್ದರಾಜು, ಪುಟ್ಟನಂಜಯ್ಯ ದೇವ ನೂರು, ಉಗ್ರನರಸಿಂಹೇಗೌಡ, ಪಾಲಹಳ್ಳಿ ರಾಮಕೃಷ್ಣ, ಡೈರಿ ವೆಂಕಟೇಶ್, ಡಾ. ಚನ್ನಕೇಶವಮೂರ್ತಿ, ಭಾನುಮೋಹನ್ ಇನ್ನಿತರರು ಭಾಗವಹಿಸಿದ್ದರು.