ದೇಶ ಕಾಪಾಡಲು ಗಾಂಧಿಯೇ ಬರಬೇಕು ಗಾಂಧಿ ಜಯಂತಿ ವೇಳೆ ಕಾಂಗ್ರೆಸ್‌ನಿAದ ಮೌನ ಪ್ರತಿಭಟನೆ

ಮೈಸೂರು, ಅ.೨(ಎಂಟಿವೈ)- ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮತ್ತು ದೇಶದ ರಕ್ಷಣೆಗೆ ಮಹಾತ್ಮಗಾಂಧೀಜಿಯೇ ಬರಬೇಕು. ಆಗಲೇ ಈ ದೇಶ ಉಳಿ ಯಲು ಸಾಧ್ಯ ಎಂದು ಕಾಂಗ್ರೆಸ್ ಕಾರ್ಯ ಕರ್ತರು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೌನ ಪ್ರತಿ ಭಟನೆ ನಡೆಸಿದರು.
ಮೈಸೂರಿನ ನ್ಯಾಯಾ ಲಯದ ಮುಂಭಾಗವಿರುವ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ವೌನವಾಗಿ ಪ್ರತಿಭಟಿಸಿದರು.

ಈ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಗಾಂಧೀಜಿಯವರು ತಮ್ಮ ಶಾಂತಿಯುತ ಪ್ರತಿಭಟನೆಗಳ ಮೂಲಕ ದೇಶದ ಸ್ವಾತಂತ್ರö್ಯಕ್ಕಾಗಿ ಶ್ರಮಿಸಿದ್ದರು. ಆದರೆ ಇಂದು ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ತಮ್ಮ ಆಡಳಿತಾ ವಧಿಯಲ್ಲಿ ಪ್ರಜೆಗಳ ಸ್ವಾತಂತ್ರ÷್ಯ ಹರಣ ಮಾಡುತ್ತಿರುವುದು ದುರದೃಷ್ಟವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು. ದೇಶದಲ್ಲಿ ಸರ್ವರನ್ನೂ ಸಮಾನರಾಗಿ ಬದುಕಬೇಕು. ಸಂಪತ್ತಿನ ಹಂಚಿಕೆಯಾಗಬೇಕು ಎಂಬ ಪರಿಕಲ್ಪನೆಗಳನ್ನು ಧಿಕ್ಕರಿಸಿ ಪ್ರಜಾಪ್ರಭುತ್ವದ ವೌಲ್ಯಗಳು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಏಕಚಕ್ರಾಧಿಪತ್ಯವನ್ನು ಮೆರೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ದೇಶದ ಸ್ವಾತಂತ್ರ÷್ಯ, ಸಂಪತ್ತು ಉಳ್ಳವರ ಪಾಲಾಗಿ ಬಡವರು, ಮಧ್ಯಮ ವರ್ಗದ ಜನರು ಬೀದಿಗೆ ಬೀಳುವಂತಾಗಿದೆ ಎಂದರು. ಪಾಲಿಕೆ ಸದಸ್ಯ ಜೆ.ಗೋಪಿ, ಮಾಜಿ ಸದಸ್ಯ ಎಂ.ಸುನೀಲ್, ಕಾಂಗ್ರೆಸ್ ಮುಖಂಡರಾದ ಜಿ.ಸೋಮಶೇಖರ್, ಶ್ರೀಧರ್, ವೀಣಾ, ಲತಾ ಮೋಹನ್, ಪುಟ್ಟಸ್ವಾಮಿ, ಕೆ.ಎಸ್.ಶಿವರಾಮು, ಕೆಪಿಸಿಸಿ ಲೀಗಲ್ ಸೆಲ್ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ, ವಿಜಯ್ ಕುಮಾರ್, ಮಹೇಶ್, ಶಿವಶಂಕರ್, ಎಂ.ಕೆ.ಅಶೋಕ್, ನಾಸೀರ್, ವಿನಯ್ ಕುಮಾರ್, ಗುಣಶೇಖರ್, ರಾಜೇಶ್ ರಾಜಾ, ರಜತ್, ವೆಂಕಟೇಶ್, ಲೀಲಾ ಪಂಪಾಪತಿ, ಭವ್ಯ, ಪಳನಿಸ್ವಾಮಿ, ಲೋಕೇಶ್, ಯೋಗೇಶ್, ಚಿಕ್ಕಲಿಂಗು ಇನ್ನಿತರರು ಪಾಲ್ಗೊಂಡಿದ್ದರು.