ಗಣಪತಿ ಸಚ್ಚಿದಾನಂದ ಶ್ರೀಗಳ ಕೋಟಿ ಜಪ, ಲಕ್ಷಕ್ಕೂ ಹೆಚ್ಚು ಮಹಾಲಕ್ಷ್ಮಿಮಂತ್ರರಾಜ್ಯದ ಶ್ರೇಯೋಭಿವೃದ್ಧಿಗೆ ಪೂರಕ: ಸಿಎಂ

ಮೈಸೂರು, ಜೂ. 8(ಆರ್‍ಕೆಬಿ)- ಮೈಸೂರಿನ ಅವಧೂತ ದತ್ತಪೀಠದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಲೋಕಕಲ್ಯಾಣಕ್ಕಾಗಿ 1 ಕೋಟಿ ಜಪ, 1 ಲಕ್ಷಕ್ಕೂ ಹೆಚ್ಚು ಮಹಾಲಕ್ಷ್ಮೀ ಮಂತ್ರ ಜಪ ನಡೆಸಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇತ್ತೀಚೆಗೆ ದತ್ತಪೀಠದಲ್ಲಿ ನಡೆದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80ನೇ ಜನ್ಮ ದಿನಾಚರಣೆಗೆ ಮುಖ್ಯಮಂತ್ರಿ ಗಳು ಬರಬೇಕಿತ್ತು. ಆದರೆ ಕಾರಣಾಂತರ ದಿಂದ ಬರಲಾಗಿರಲಿಲ್ಲ. ಹಾಗಾಗಿ ಬುಧವಾರ ಆಶ್ರಮಕ್ಕೆ ಭೇಟಿ ನೀಡಿದ್ದ ಅವರು ಶ್ರೀ ಗಳಿಂದ ಆಶೀರ್ವಚನ ಸ್ವೀಕರಿಸಿ, ಬಳಿಕ ಮಾತನಾಡಿದರು. ಲೋಕಕಲ್ಯಾಣಕ್ಕಾಗಿ, ಶ್ರೀಗಳು ಕೈಗೊಂಡಿರುವ ಯಜ್ಞ, ಯಾಗಾದಿ, ಮಂತ್ರ, ಜಪಗಳು ನಮ್ಮ ರಾಜ್ಯದ ಅಭಿ ವೃದ್ಧಿಯಲ್ಲಿ ಉತ್ತಮ ಪರಿಣಾಮ ಬೀರು ತ್ತವೆ ಎಂಬುದು ವೈಯಕ್ತಿಕವಾಗಿ ನನಗೆ ನಂಬಿಕೆ ಇದೆ ಎಂದು ಹೇಳಿದರು.

ದೇವರಲ್ಲಿ ಅಪಾರ ಭಕ್ತಿ ಹೊಂದಿರುವ ಶ್ರೀಗಳು ವಿವಿಧ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಶಕ್ತಿ ಮತ್ತು ಭಕ್ತಿ ಇಡೀ ರಾಜ್ಯದ ಜನರ ಒಳಿತಿಗೆ ನೆರವಾಗಲಿದೆ ಎಂದು ಆಶಿಸಿದರು.

ತಾವೂ ಕೂಡ ಭಗವಾನ್ ದತ್ತಾತ್ರೇಯನ ಭಕ್ತ ಎಂದು ಬಹಿರಂಗಪಡಿಸಿದ ಅವರು, ಭಕ್ತಿ ಎಂದರೆ ಪ್ರತಿಯಾಗಿ ಏನನ್ನೂ ನಿರೀ ಕ್ಷಿಸದೆ ಬೇಷರತ್ತಾಗಿ ದೇವರಲ್ಲಿ ಪ್ರೀತಿ ಕಾಣು ವುದು. ನಾವು ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ದೇವರನ್ನು ಪ್ರಾರ್ಥಿಸಬೇಕು. ಏಕೆಂದರೆ ನಮಗೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಭಗವಂತ ತಿಳಿಸಿರುತ್ತಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಸತ್ಯವೇ ಜೀವನ, ಸತ್ಯವೇ ಪ್ರಾಣ. ಮನುಷ್ಯ ಹೆಚ್ಚಿನ ಪಾಪ ಮಾಡಿ ಅಧೋಗತಿಗೆ ಹೋಗುತ್ತಾನೆ. ಹಾಗಾಗಿ ದತ್ತನ ಅವತಾರವಾಗುತ್ತದೆ. ದತ್ತಾತ್ರೇಯ ನಿಗೆ ಮೂರು ತಲೆಗಳಿವೆ. ಇದು ಸೃಷ್ಟಿ, ಸಂರ ಕ್ಷಣೆ ಮತ್ತು ವಿನಾಶದ ಮೂರು ವಿಭಿನ್ನ ಅಂಶಗಳನ್ನು ಸೂಚಿಸುತ್ತದೆ. ಎಲ್ಲಾ ಅವತಾರ ಗಳಲ್ಲಿ ಅತೀ ಶ್ರೇಷ್ಠ ಅವತಾರವೇ ದತ್ತಾ ತ್ರೇಯನ ಅವತಾರ ಎಂದರು. ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್‍ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ ಇನ್ನಿತರರು ಉಪಸ್ಥಿತರಿದ್ದರು.