ಎಲ್ಲರ ಬೆಂಬಲ ಪಡೆದು ರಘು ಕೌಟಿಲ್ಯರನ್ನು ಗೆಲ್ಲಿಸಿ

ಮುಖಂಡರ ಸಭೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕರೆ

ರಘುಗೆ ಸಂದೇಶ್ ನಾಗರಾಜ್ ಬೆಂಬಲ

ಮೈಸೂರು, ನ.೨೩(ಎಂಕೆ)- ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾ.ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ರಘು ಕೌಟಿಲ್ಯ ಅವ ರನ್ನು ಕ್ಷೇತ್ರದ ಎಲ್ಲಾ ಶಾಸಕರು, ಮಾಜಿ ಶಾಸ ಕರು, ಮುಖಂಡರುಗಳ ಬೆಂಬಲ ಪಡೆದು ಗೆಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕರೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮೈಸೂರು ಮತ್ತು ಚಾ.ನಗರ ಜಿಲ್ಲಾ ಬಿಜೆಪಿ ಮುಖಂಡ ರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ರಘು ಕೌಟಿಲ್ಯ ಅವರು ಗೆಲ್ಲುವ ಎಲ್ಲಾ ಅವ ಕಾಶ ಮತ್ತು ವಾತಾವರಣವಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖಂಡರನ್ನೂ ಭೇಟಿ ಮಾಡಿ, ಬೆಂಬಲ ಪಡೆದು ಗೆಲ್ಲಿಸುವಂತೆ ಕರೆ ನೀಡಿದರಲ್ಲದೆ ೯ ದಿನಗಳ ಕಾಲ ತಾವೂ ಈ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅಭ್ಯರ್ಥಿ ಗಳು ಸ್ಥಳೀಯ ಸಂಸ್ಥೆಗಳಲ್ಲಿನ ಮುಖಂಡ ರನ್ನು ಪರಿಚಯ ಮಾಡಿಕೊಳ್ಳುವಷ್ಟರಲ್ಲೇ ಚುನಾವಣೆ ಬಂದು ಬಿಡುತ್ತದೆ. ರಘು ಕೌಟಿಲ್ಯ ಕಳೆದ ೧ ವರ್ಷದಿಂದ ಪ್ರತಿಯೊಂದು ಗ್ರಾಪಂಗಳಿಗೆ ಭೇಟಿ ನೀಡಿ, ಅಲ್ಲಿನ ಮುಖಂಡರ ವಿಶ್ವಾಸಗಳಿಸುವ ಕೆಲಸವನ್ನು ಈಗಾಗಲೇ ಮಾಡಿದ್ದಾರೆ. ಆದ್ದರಿಂದ ರಘು ಕೌಟಿಲ್ಯ ಶೇ.೧೦೦ಕ್ಕೆ ೧೦೦ರಷ್ಟೂ ಗೆಲ್ಲುವ ವಿಶ್ವಾಸವಿದೆ ಎಂದರು.
ಸAದೇಶ್ ನಾಗರಾಜ್ ಬೆಂಬಲ: ಹಾಲಿ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರನ್ನು ಭೇಟಿ ಮಾಡಿದ್ದು, ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರಿಗೂ ರಘು ಕೌಟಿಲ್ಯ ಪರ ಕೆಲಸ ಮಾಡುವಂತೆ ಸೂಚಿಸಿ ದ್ದಾರೆ. ಅದರ ಜೊತೆಗೆ ಇತರೆ ಮುಖಂಡ ರೊಂದಿಗೂ ಮಾತನಾಡಿದ್ದು, ಬೆಂಬಲ ಪಡೆದುಕೊಳ್ಳಲಾಗಿದೆ. ಚುನಾವಣೆ ಸಂಬAಧ ಯಾವ ವಿಚಾರವನ್ನೂ ನಿರ್ಲಕ್ಷಿಸದೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಮತದಾನದ ತರಬೇತಿ ನೀಡಿ: ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಯ ಮಾತನಾಡಿ, ಪರಿಷತ್ ಚುನಾವಣೆಗೆ ಇನ್ನು ೧೪ ದಿನಗಳು ಬಾಕಿಯಿದ್ದು, ಮತಯಾಚನೆಗಿಂತ ಮುಖ್ಯ ವಾಗಿ ಮತದಾನ ಮಾಡುವ ಪ್ರಕ್ರಿಯೆ ಕುರಿತು ತರಬೇತಿ ನೀಡಬೇಕು. ಕಳೆದ ಬಾರಿ ಸಂಘಟಿತ ಪ್ರಯತ್ನ ಮತ್ತು ಸಮ ನ್ವಯದ ಕೊರತೆಯಿಂದ ಸೋಲಬೇಕಾ ಯಿತು. ಆದರೆ ಈ ಬಾರಿ ಅದಕ್ಕೆ ಅವಕಾಶ ಮಾಡಿಕೊಡದಂತೆ ಜವಾಬ್ದಾರಿ ಪಡೆದ ವರು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಮನವಿ ಮಾಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗ ಗಳ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಕಳೆದ ಒಂದು ವರ್ಷದಿಂದ ಬಹುತೇಕ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿಯ ಮುಖಂಡರ ಮನವಿಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಪಕ್ಷಾತೀತವಾಗಿ ಹಲ ವರು ನನಗೆ ಬೆಂಬಲ ನೀಡಿದ್ದಾರೆ. ಇನ್ನೂ ಮರ‍್ನಾಲ್ಕು ದಿನಗಳಲ್ಲಿ ಇಂತಿಷ್ಟೇ ಮತಗಳು ಬರುತ್ತವೆ ಎಂಬ ವರದಿಯನ್ನು ತಯಾರಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚುನಾವಣಾ ಉಸ್ತುವಾರಿಗಳಿಗೆ ವರದಿ ನೀಡಬೇಕು ಎಂದು ಹೇಳಿದರು.

ನಮ್ಮದೇ ಸರ್ಕಾರವಿದೆ: ಶಾಸಕ ಎನ್. ಮಹೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಪಂಚಾ ಯಿತಿಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸದಸ್ಯರ ಮನೆಯ ಜಗುಲಿ ಮೇಲೆ ಕುಳಿತು ಮನವರಿಕೆ ಮಾಡಿ ಕೊಡಬೇಕು. ಮೊದಲ ಮತ ಪಡೆಯುವ ಮೂಲಕವೇ ಗೆಲ್ಲಬೇಕು. ರಘು ಅವರನ್ನು ಗೆಲ್ಲಿಸಿದರೆ, ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಾಗ ಲಿದೆ ಎಂದರು. ಶಾಸಕ ಎಲ್. ನಾಗೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯರಾದ ಸಿದ್ದ ರಾಜು, ಮಲ್ಲಿಕಾರ್ಜುನಪ್ಪ, ರಮೇಶ್, ಮಾಜಿ ಶಾಸಕಿ ಪರಿಮಳ ನಾಗಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳ ಸೋಮ ಶೇಖರ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ತಿಮ್ಮಯ್ಯ ಎಂಬುವರು ನಮ್ಮಲ್ಲೇ (ಬಿಜೆಪಿ) ಇದ್ದರಂತೆ ಈಗ ಅಲ್ಲಿಗೆ ಹೋಗಿದ್ದಾರೆ. ಬಹುಶಃ ಅವರು ಮೈಸೂರು-ಚಾ.ನಗರ ಕ್ಷೇತ್ರದಲ್ಲಿ ಎಷ್ಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ, ಗ್ರಾಪಂಗಳೆಷ್ಟು, ಸದಸ್ಯರೆಷ್ಟು, ಅಲ್ಲಿ ಯರ‍್ಯಾರು ಲೀಡರ್ ಅಂತ ತಿಳಿದು ಕೊಳ್ಳುವುದರಲ್ಲಿ ಡಿ.೧೦ನೇ ತಾರೀಖು ಮುಗಿಯುತ್ತದೆ. ಇನ್ನೊಬ್ಬರು ಜೆಡಿಎಸ್‌ನ ಮಂಜೇಗೌಡರು. ನನಗೆ ಜೆಡಿಎಸ್ ನವರೇ ಫೋನ್ ಮಾಡಿದ್ದರು. ಏನಣ್ಣಾ, ಮಂಜೇಗೌಡರು ನಿಮ್ಮಲ್ಲಿದ್ದವರು. ಈಗ ನಮ್ಮಲ್ಲಿಗೆ ಬಂದಿದ್ದಾರೆ. ಕಾಂಗ್ರೆಸ್ ನಲ್ಲೂ ಕಾಲಕಳೆದಿದ್ದಾರೆ ಎಂದು ಹೇಳಿ ದ್ದಕ್ಕೆ ನೀವು ಹುಷಾರ್ ಎಂದಿದ್ದೇನೆ.
-ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ