ಎಂಎಂಕೆ-ಎಸ್‍ಡಿಎಂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಪುರಸ್ಕಾರ

ಮೈಸೂರು, ಜು. 14- ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಮತ್ತು ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ.

ಕುಮಾರಿ ಮೃದುಲಾ ಘೋರೆ ಬಿ.ಎಸ್ಸಿ ಪದವಿ ವಿಭಾಗದಲ್ಲಿ 2 ಚಿನ್ನದ ಪದಕ, 2 ನಗದು ಪರಸ್ಕಾರ, ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಚಿನ್ನದ ಪದಕ, ಎಚ್.ರಾಮಾ ನುಜ ಅಯ್ಯಂಗಾರ್ ಚಿನ್ನದ ಪದಕ ಹಾಗೂ ದಿ.ಲೇಡಿ ಮಿಜ್ರಾಪ್ರೈಜ್ ನಗದು ಬಹುಮಾನ, ಪೆÇ್ರ.ಜೆ ಶಶಿಧರಪ್ರಸಾದ್ ಅಭಿನಂದನಾ ಸಮಿತಿ ನಗದು ಬಹುಮಾನ ಪಡೆದಿದ್ದಾರೆ.

ಕುಮಾರಿ ರಶ್ಮಿ ಕೆ.ಬಿ. ಸಂಸ್ಕೃತ ಭಾಷೆಯಲ್ಲಿ ಗಳಿಸಿದ ಅಧಿಕ ಅಂಕಗಳಿಗೆ ದಿ.ಪಂಡಿತ ನವೀನಂ ರಾಮಾನುಜಚಾರ್ಯ ನಗದು ಬಹುಮಾನ ಪಡೆದಿದ್ದಾರೆ. ಈ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ದಲ್ಲಿ ಪದವಿ ಪ್ರಮಾಣ ಪತ್ರ ಹಾಗೂ ಬಹುಮಾನ ಸ್ವೀಕರಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಪೆÇ್ರ ಸಾಯಿನಾಥ್ ಮಲ್ಲಿಗೆಮಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.