ವೈಭವದ ಮಾದಪ್ಪ ರಥೋತ್ಸವ

ಸುತ್ತೂರು: ನಂಜನಗೂಡು ತಾಲೂಕು ಹದಿನಾರು ಗ್ರಾಮಕ್ಕೆ ಸೇರಿದ ಬಿಳಿಕೆರೆಯಲ್ಲಿ ಮಾದಪ್ಪನ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಮುಂಜಾನೆ ಯಿಂದಲೇ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ನಂತರ ಉತ್ಸವ ಮೂರ್ತಿ ಹೊತ್ತ ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು `ಉಘೇ ಮಾದಪ್ಪ’ ಘೋಷಣೆ ಕೂಗುತ್ತಾ, ತೇರನ್ನು ಎಳೆದು ಪುನೀತ ರಾದರು. ಹರಕೆ ಹೊತ್ತಿದ್ದ ಭಕ್ತಾದಿಗಳು ತೇರಿಗೆ ಹಣ್ಣು-ದವನ ಎಸೆದು ಭಕ್ತಿ ಭಾವ ಪರವಶರಾದರು. ರಥೋತ್ಸವಕ್ಕೆ ಆಗಮಿ ಸಿದ್ದ ಎಲ್ಲಾ ಭಕ್ತಾದಿಗಳಿಗೂ ದೇವಾಲಯದ ಸಮಿತಿಯಿಂದ ಅನ್ನ ಸಂತರ್ಪಣೆ ಏರ್ಪ ಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್, ಹದಿನಾರು ಗ್ರಾಮದ ಗೌಡರಾದ ಸೋಮಣ್ಣ, ಜಿಪಂ ಮಾಜಿ ಸದಸ್ಯ ಹೆಚ್.ಎನ್.ನಂಜಪ್ಪ, ಬಿಳಿಕೆರೆ ಮಾದಪ್ಪ ದೇಗುಲ ಸಮಿತಿ ಎಲ್ಲಾ ಮುಖಂಡರು, ಗ್ರಾಮದ ಎಲ್ಲಾ ಜನಾಂಗದ ಮುಖಂಡರು, ಯಜಮಾನರು, ಹದಿ ನಾರು ಗ್ರಾಮ ಸೇರಿದಂತೆ ಹದಿನಾರು ಮೋಳೆ, ಮೂಡಹಳ್ಳಿ, ಬೊಕ್ಕಹಳ್ಳಿ, ಹುಳಿಮಾವು, ಇಮ್ಮಾವು, ಮಲ್ಲರಾಜಯ್ಯನಹುಂಡಿ, ಕಿರಾಳು, ಆಯರಹಳ್ಳಿ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದರು.