ನಂಜನಗೂಡಿನಲ್ಲಿ ಗಾಪಂ ನೌಕರರ ಪ್ರತಿಭಟನೆ

ನಂಜನಗೂಡು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ತಾಪಂ ಕಚೇರಿ ಎದುರು ತಾಲೂಕಿನ ಗ್ರಾಪಂ ನೌಕರರು ಪ್ರತಿಭಟಿಸಿದರು.

ತಾಲೂಕಿನ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಡಿ.ಬಿ.ನಂಜುಂಡಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಗಳಲ್ಲಿ ಕೈಬಿಟ್ಟಿರುವ 18,000 ಸಿಬ್ಬಂದಿಗೆ ಇಎಫ್‍ಎಂಎಸ್‍ನಲ್ಲಿ ಸೇರಿಸಲು ಅ.5 ರಂದು ಆದೇಶ ಹೊರಡಿಸಿ ತಿಂಗಳು ಕಳೆದರೂ ರಾಜ್ಯದ ಪಿಡಿಓಗಳು ಮತ್ತು ಇಓ ಅವರು ಈವರೆಗೆ ನೌಕರರ ವಿವರ ಸಂಗ್ರಹಿಸಿ ಸಂಬಂಧಪಟ್ಟ ಜಿಲ್ಲಾ ಪಂಚಾ ಯಿತಿಗೆ ತಲುಪಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರಲ್ಲದೆ, ಇನ್ನಿತರ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜು, ಕಾರ್ಯದರ್ಶಿ ಆರ್.ಮುರುಗೇಶ್ ಸೇರಿ ದಂತೆ ತಾಲೂಕಿನ ನೂರಕ್ಕೂ ಹೆಚ್ಚು ಗ್ರಾಪಂ ನೌಕರರು ಭಾಗವಹಿಸಿದ್ದರು.