ಹೈ ಲೈಫ್ ವಸ್ತುಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

ಮೈಸೂರು,ಅ.10(ಆರ್‍ಕೆಬಿ)-ಭಾರತದ ಅತೀ ದೊಡ್ಡ ಮತ್ತು ಅತ್ಯಂತ ಜನಪ್ರಿಯ ಫ್ಯಾಷನ್ ಪ್ರದರ್ಶನ, ‘ಹೈ ಲೈಫ್ ಎಕ್ಸಿಬಿಷನ್’ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೇ ಮೊದಲ ಬಾರಿಗೆ ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ಆವರಣದಲ್ಲಿ ಆಯೋಜಿ ಸಿದ್ದ ಅತ್ಯಂತ ಅಪರೂಪದ ಡಿಸೈನರ್ ಸಂಗ್ರಹಗಳ ಎರಡು ದಿನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಯ ಮತ್ತೂರು, ಸೂರತ್, ನಾಗಪುರ, ದೆಹಲಿ, ಲಕ್ನೋ, ಮುಂಬೈ, ಕ್ಯಾಲಿಕಟ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಖ್ಯಾತ ಪ್ರದರ್ಶಕರು ಮತ್ತು ವಿನ್ಯಾಸಗಾರರು ಪ್ರದರ್ಶನ ದಲ್ಲಿ ಭಾಗವಹಿಸಿ, ಗ್ರಾಹಕರ ಮನವೊಪ್ಪುವ ವಸ್ತುಗಳನ್ನು ಮಾರಾಟ ಮಾಡಿದರು. ಕುರ್ತಿಗಳು, ಡಜ್ಜಲ್ಸ್, ಗೃಹಾ ಲಂಕಾರ ವಸ್ತುಗಳು, ಸೀರೆಗಳು, ಹೇರ್ ಅಸೆಸರೀಸ್ ಇತ್ಯಾದಿ ವಸ್ತುಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಸೋಮ ವಾರವೂ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ವಸ್ತುಪ್ರದ ರ್ಶನ ತೆರೆದಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 10 ಗಂಟೆಗೆ ಹೈ ಲೈಫ್ ಪ್ರದರ್ಶ ನಕ್ಕೆ ನೆಕ್ಟಾರ್ ಫ್ರೆಶ್ ಮತ್ತು ನಮನ್ ಸಂಸ್ಥಾಪಕ ವ್ಯವಸ್ಥಾಪಕ ಪಾಲುದಾರರು, ಮಹಿಳಾ ವಾಣಿಜ್ಯೋಮದ ರಾಷ್ಟ್ರೀಯ ಅಧ್ಯಕ್ಷೆ ಛಾಯಾ ನಂಜಪ್ಪ ಉದ್ಘಾಟನೆ ನೆರವೇರಿಸಿದರು. ಶುಗರ್ಸ್ ರೋಸ್ಡ್‍ನ ಸ್ಥಾಪಕಿ ಮಹಿಮಾ ಹೆಗ್ಡೆ, ಆಲ್‍ಕೆಮಿ ಕಾನ್ಸೆಪ್ಸ್ಟ್ ಸ್ಥಾಪಕಿ ಶೋಮಿಕಾ ಎಸ್.ರಾವ್, ಬೇಕ್ ಹೌಸ್ 101ನ ಸ್ಥಾಪಕಿ ಮೋನಿಷಾ ಹೆಗ್ಸೆ, ಹಾಬ್ಬಿ ಪ್ಲೇಸ್ ಸಂಸ್ಥಾ ಪಕಿ ಸವಿತಾ ಶೆಣೈ ರಂಗ, ಮಿಸಸ್ ಇಂಡಿಯಾ ಯೂನಿ ವರ್ಸ್ ಡಾ.ಹೇಮಾಮಾಲಿನಿ ಲಕ್ಷ್ಮಣ್, ಕೃಷಿ ಜಂಕ್ಷನ್ ಸಂಸ್ಥಾಪಕಿ ಡಾ.ಚೈತ್ರಾ ಭರತ್, ಮೈಸೂರು ಲಿಟರರಿ ಫೆಸ್ಟಿ ವಲ್‍ನ ಶುಭಾ ಸಂಜಯ್ ಅರಸ್, ಫಾರ್ಮಾಫಸ್ಟ್‍ನ ವ್ಯವ ಸ್ಥಾಪಕ ಪಾಲುದಾರರಾದ ಅಪೂರ್ವ ಪವನ್‍ಶೆಟ್ಟಿ, ಹೈ ಲೈಫ್‍ನ ವ್ಯವಸ್ಥಾಪಕ ನಿರ್ದೇಶಕ ಅಭಯ್ ಪಿ.ಡೊಮಿ ನಿಕ್, ಮೋಕ್ಷಾ ಶರ್ಮಾ, ಆಧ್ಯಾ ಸದಾನಂದ್, ರೂಪಾ ನಿತಿನ್ ಇನ್ನಿತರರು ಉಪಸ್ಥಿತರಿದ್ದರು.