ಕುಂದುಕೊರತೆ ನಿವಾರಣಾ ಸಭೆ

ಮೈಸೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಸಮಸ್ಯೆ ಮತ್ತು ಕುಂದುಕೊರತೆ ನಿವಾರಣಾ ಸಭೆಯನ್ನು ಬೆಂಗಳೂರು ನಗರದಲ್ಲಿ ಜು26 ಹಾಗೂ 27ರಂದು ನಡೆಸಲು ಉದ್ದೇಶಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯ ವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರುಗಳಿದ್ದಲ್ಲಿ ದೂರುಗಳನ್ನು ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಾನವ ಅಧಿಕಾರ ಭವನ, ಬ್ಲಾಕ್-ಸಿ, ಜಿಪಿಓ, ಕಾಂಪ್ಲೆಕ್ಸ್, ಐಎನ್‍ಎ, ನವದೆಹಲಿ-110023 ಇಲ್ಲಿಗೆ ನೋಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್, ಆಯೋಗದ ಇ-ಮೇಲ್ ವಿಳಾಸ jrlawnhrc@nic.in ಅಥವಾ ಫ್ಯಾಕ್ಸ್ ಸಂಖ್ಯೆ 011-24651334 ಮೂಲಕ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದ್ದು, ಅರ್ಜಿಯನ್ನು ಜೂ.30ರೊಳಗಾಗಿ ಸಲ್ಲಿಸುವುದು. ದೂರುದಾರರು ಸಂಪರ್ಕಕ್ಕಾಗಿ ತಮ್ಮ ದೂ.ಸಂಖ್ಯೆ, ಇ-ಮೇಲ್ ವಿಳಾಸವನ್ನು ನಮೂದಿಸುವುದು.