ಗ್ರಹಣ ಕಾಲದಲ್ಲೇ ಬಡವರಿಗೆ ದಿನಸಿ  ಕಿಟ್ ವಿತರಿಸಿದ ಮಾಜಿ ಶಾಸಕ ಎಂಕೆಎಸ್

ಮೈಸೂರು,ಜೂ.21(ಆರ್‍ಕೆಬಿ)-ಸೂರ್ಯಗ್ರಹಣ ಭೀತಿಯಿಂದ ಜನರು ಮನೆಯೊಳಗೇ ಇರುವಾಗ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಗ್ರಹಣ ಕಾಲದಲ್ಲೇ ಕೃಷ್ಣರಾಜ ಕ್ಷೇತ್ರದ ಕೆಲ ಪ್ರದೇಶಗಳ ಬಡ ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ಪಡಿತರ ಧಾನ್ಯ ವಿತರಿಸಿ ಮೌಢ್ಯ ತೊಡೆಯಲೆತ್ನಿಸಿದರು. 54ನೇ ವಾರ್ಡ್ ವ್ಯಾಪ್ತಿಯ ಕನಕಗಿರಿ, ಗುಂಡುರಾವ್ ನಗರ, ಮುನೇಶ್ವರ ನಗರ ಭಾಗದ ಬಡ ಕೂಲಿ ಕಾರ್ಮಿಕರು, ಮನೆಗೆಲಸದ ಮಹಿಳೆ ಯರು ಸೇರಿದಂತೆ ನೂರಾರು ಮಂದಿಗೆ ದಿನಸಿ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಪುಟ್ಟನಿಂಗಮ್ಮ, ಕಾಂಗ್ರೆಸ್ ಮುಖಂಡ ಶೇಖರ್ ಇನ್ನಿತರು ಇದ್ದರು