ಮೈಸೂರು,ಏ.23(ಪಿಎಂ)-ಲಾಕ್‍ಡೌನ್ ಅವಧಿಯಲ್ಲಿ ಜನಸೇವೆ ನಿಟ್ಟಿನಲ್ಲಿ ಮೈಸೂ ರಿನ ಶ್ರೀರಾಮಕೃಷ್ಣ ಆಶ್ರಮದಿಂದ ನಿತ್ಯ ಸೇವಾ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರ 170 ಬಡ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಲ್ಲಿರುವ ವಿವೇಕ ಸ್ಮಾರಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅತಿಥಿಯಾಗಿ ಪಾಲ್ಗೊಂಡು ಫಲಾ ನುಭವಿಗಳಿಗೆ ದಿನಸಿ ಕಿಟ್‍ಗಳನ್ನು ವಿತರಿ ಸಿದರು. ಬಳಿಕ ಮಾತನಾಡಿದ ಸಚಿವರು, ಕೊರೊನಾ ಲಾಕ್‍ಡೌನ್ ಸನ್ನಿವೇಶದಲ್ಲಿ ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾದ ಸ್ವಾಮಿ ಮುಕ್ತಿದಾನಂದ ಜೀ, ಆರ್ಥಿಕ ವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರ, ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆಯು ತ್ತಿದ್ದಾರೆ. ರಾಜ್ಯ ಸರ್ಕಾರದ ಪರ ಹಾಗೂ ವೈಯಕ್ತಿಕವಾಗಿ ಅವರಿಗೆ ವಂದನೆ ಸಲ್ಲಿಸುವೆ ಎಂದರು. ಮೈಸೂರಿನಲ್ಲಿ ಶಾಸಕರೂ ಸೇರಿ ದಂತೆ ಜನಪ್ರತಿನಿಧಿಗಳೂ ಇದೇ ಕಾರ್ಯ ಮಾಡುತ್ತಿದ್ದಾರೆ ಎಂದರು.
ಸ್ವಾಮಿ ಮುಕ್ತಿದಾನಂದ ಜೀ ಮಾತನಾಡಿ, ಕೊರೊನಾ ಭೀತಿ ಇರುವುದರಿಂದ ಎಲ್ಲರೂ ಮನೆಯಲ್ಲೇ ಇರಿ. ಒಬ್ಬರಿಂದೊಬ್ಬ ರಿಗೆ ಅಂತರ ಕಾಯ್ದುಕೊಳ್ಳಿ. ಜನರು ಕೈಗ ಳನ್ನು ಆಗಾಗ್ಗೆ ತೊಳೆದುಕೊಂಡು ಸೋಂಕಿ ನಿಂದ ದೂರ ಇರಬೇಕು. ಬಡವರು ಹಸಿದು ಕೊಂಡು ಇರಬಾರದು ಎಂದು ಆಶ್ರಮದಿಂದ ಧಾನ್ಯಗಳ ಕಿಟ್ ನೀಡಲಾಗುತ್ತಿದೆ. ಕಿಟ್ ನಲ್ಲಿ ಮೈಸೋಪು, ಬಟ್ಟೆ ಸೋಪು, ದಿನಸಿ ಪದಾರ್ಥ ಸೇರಿದಂತೆ ನಿತ್ಯದ ಬದುಕಿಗೆ ಅಗತ್ಯವಿರುವ ಸಾಮಗ್ರಿಗಳಿವೆ ಎಂದರು.
ಬಳಿಕ ಸಚಿವರು ವಿವೇಕ ಸ್ಮಾರಕ ವೀಕ್ಷಿಸಿ, ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಸಕ ಎಲ್.ನಾಗೇಂದ್ರ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮತ್ತಿತರರಿದ್ದರು.