ಸೇವಾ ಭದ್ರತೆಗೆ ಆಗ್ರಹಿಸಿ  ಅತಿಥಿ ಉಪನ್ಯಾಸಕರ ಧರಣಿ 

ಮೈಸೂರು, ಸೆ.22(ಆರ್‍ಕೆಬಿ)- ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದ ಗಿಸಬೇಕು. ಲಾಕ್‍ಡೌನ್ ಅವಧಿ ಯಲ್ಲಿನ ಗೌರವ ಧನ ಬಿಡು ಗಡೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪ ನ್ಯಾಸಕರ ರಾಜ್ಯ ಸಮನ್ವಯ ಸಮಿ ತಿಯ ಜಿಲ್ಲಾ ಘಟಕದ ವತಿಯಿಂದ ಅತಿಥಿ ಉಪನ್ಯಾ ಸಕರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸದೇ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಅತೀ ಶೀಘ್ರವಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಮುಂದು ವರಿಸಬೇಕು. ಎಂಎಚ್‍ಆರ್‍ಡಿ ನಿಯಮ ಪಾಲಿಸಿ, ತುರ್ತಾಗಿ ಲಾಕ್‍ಡೌನ್ ಅವಧಿಯ ಗೌರವಧನ ಬಿಡುಗಡೆಗೊಳಿಸಬೇಕು. ಪಿಎಫ್, ಇಎಸ್‍ಐ, ವೈದ್ಯಕೀಯ ಸೌಲಭ್ಯ ಒದಗಿಸ ಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರಿಗೆ ರೂ.10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಂiÀiನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಾಬುರಾಜು, ಪ್ರಧಾನ ಕಾರ್ಯದರ್ಶಿ ಹನುಮಂತೇಶ್, ಮುಖಂಡರಾದ ಪ್ರದೀಪ್ ಇತರರು ಇದ್ದರು.