ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ ಭಾರೀ ಅಭಿವೃದ್ಧಿ ಕಾಮಗಾರಿ

ಮೈಸೂರು, ಫೆ.8 (ಆರ್‍ಕೆ)- ಹೆಚ್ಚಿನ ಸಂಖ್ಯೆಯ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಡಲು ರನ್‍ವೇ ವಿಸ್ತ ರಿಸುವ ಪ್ರಸ್ತಾವನೆ ಹಿನ್ನೆಲೆಯಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಅಭಿ ವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ರನ್‍ವೇ ವಿಸ್ತರಿಸಿ ಏಕಕಾಲದಲ್ಲಿ ದೇಶದ ವಿವಿಧ ಭಾಗಗಳಿಗೆ ವಿಮಾನಗಳ ಹಾರಾಟಕ್ಕೆ ಅನುಕೂಲ ಕಲ್ಪಿಸುವ ಬೃಹತ್ ಯೋಜನೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮುಂದಾಗಿ ರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ವಿಮಾನ ನಿಲ್ದಾಣವನ್ನು ಉನ್ನತೀಕರಣ ಗೊಳಿಸಲು ಪ್ರಕ್ರಿಯೆ ಆರಂಭಗೊಂಡಿದೆ.
ಪ್ರಸ್ತುತ ಮೂರು ವಿಮಾನಗಳು ಲ್ಯಾಂಡ್ ಆಗಲು ಅವಕಾಶವಿದ್ದು, 5 ವಿಮಾನಕ್ಕೆ ಅವಕಾಶ, ಜೊತೆಗೆ ಪಾರ್ಕಿಂಗ್ ಸಾಮಥ್ರ್ಯ ಹೆಚ್ಚಿಸುವುದು, ಟರ್ಮಿನಲ್ ನಲ್ಲಿ ಆಸನಗಳ ವ್ಯವಸ್ಥೆ, ಪ್ರವಾಸಿ ಟ್ಯಾಕ್ಸಿಗಳ ನಿಲುಗಡೆ, ರನ್‍ವೇ ಎರಡೂ ಬದಿಯಲ್ಲಿ 140 ಮೀಟರ್‍ವರೆಗೆ ಜಾಗ ಸಮತಟ್ಟು ಮಾಡುವುದೂ ಸೇರಿದಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮಾರ್ಗ ಸೂಚಿಯಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕಾಮಗಾರಿ ಭರದಿಂದ ನಡೆಯುತ್ತಿದೆ.

ಲ್ಯಾಂಡಿಂಗ್ ಮತ್ತು ಟೇಕ್‍ಆಫ್ ಆಗು ವಾಗ ಯಾವುದೇ ಅಡಚಣೆಯಾಗದಂತೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯವಿರುವ ಸೌಲಭ್ಯ ಕಲ್ಪಿಸಿ ವಿಮಾನ ನಿಲ್ದಾಣವನ್ನು ಉನ್ನತೀಕರಣಗೊಳಿಸಲು ಮುಂದಾಗಿರುವ ಪ್ರಾಧಿಕಾರವು, ಆವ ರಣದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

ಈ ಕುರಿತು ಮಾಹಿತಿ ನೀಡಿರುವ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್, ರನ್‍ವೇ ವಿಸ್ತರಣೆ ಮೂಲಕ ವಿಮಾನ ನಿಲ್ದಾಣವನ್ನು ಹೆಚ್ಚಿನ ವಿಮಾನಗಳ ಹಾರಾಟ ಸಾಮಥ್ರ್ಯಕ್ಕೆ ಸಜ್ಜುಗೊಳಿಸುವ ಉದ್ದೇಶವಿರುವುದರಿಂದ ಅದಕ್ಕೆ ಪೂರಕ ಸೌಲಭ್ಯ ಒದಗಿಸಲು ಕಾಮಗಾರಿ ಕೈಗೊಂಡಿದ್ದೇವೆ ಎಂದರು.

ಇಡೀ ನಿಲ್ದಾಣದ ಆವರಣವನ್ನು ಸಮತಟ್ಟುಗೊಳಿಸಿ ಲ್ಯಾಂಡ್ ಸ್ಕೇಪಿಂಗ್ ಮಾಡುವ ಜೊತೆಗೆ ಹಸಿರೀಕರಣಕ್ಕೂ ಒತ್ತು ನೀಡುತ್ತೇವೆ. ಟರ್ಮಿನಲ್ ಅಭಿ ವೃದ್ಧಿ, ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಉನ್ನತೀಕರಣ, ಗೋಡೆಯಿಂದ ಗೋಡೆಗೆ (ವಾಲ್ ಟು ವಾಲ್) ಗ್ರೇಡಿಂಗ್, ಗೂಡ್ಸ್ ಟರ್ಮಿನಲ್ ಸಾಮಥ್ರ್ಯ ಹೆಚ್ಚಿಸುವುದೂ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವ ಕಾರ್ಯ ತೀವ್ರಗತಿಯಿಂದ ನಡೆಯುತ್ತಿದೆ ಎಂದು ಮಂಜುನಾಥ್ ತಿಳಿಸಿದರು.