ಕಣ್ಣಾಮುಚ್ಚಾಲೆಯಲ್ಲಿ ಖಾಲಿ ಐಸ್‌ಕ್ರೀಂ ಬಾಕ್ಸ್ನಲ್ಲಿ ಬಚ್ಚಿಟ್ಟುಕೊಂಡ  ಬಾಲಕಿಯರಿಬ್ಬರು ದುರ್ಮರಣ

ನಂಜನಗೂಡು,ಏ.೨೭-ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆ ಖಾಲಿ ಇದ್ದ ಐಸ್‌ಕ್ರೀಂ ಬಾಕ್ಸ್ನಲ್ಲಿ ಅವಿತು ಕೊಂಡ ಇಬ್ಬರು ಬಾಲಕಿಯರು ಅದರ ಮುಚ್ಚಳ ಲಾಕ್ ಆಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಂಜನಗೂಡು ತಾಲೂಕು ಮಸಗೆ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಈ ಗ್ರಾಮದ ನಾಗರಾಜ ನಾಯಕ ಮತ್ತು ಚಿಕ್ಕದೇವಮ್ಮ ದಂಪತಿ ಪುತ್ರಿ ಭಾಗ್ಯ(೧೨) ಹಾಗೂ ರಾಜನಾಯಕ ಮತ್ತು ಗೌರಮ್ಮ ದಂಪತಿ ಪುತ್ರಿ ಕಾವ್ಯ(೭) ಮೃತಪಟ್ಟ ದುರ್ದೆÊವಿ ಗಳು. ತಗಡೂರು ಗ್ರಾಮದ ಹನುಮಂತ ನಾಯಕ ಎಂಬುವರು ಮಸಗೆ ಗ್ರಾಮದ ನಾಗರಾಜನಾಯಕ

ಅವರ ಮನೆ ಮುಂದೆ ಐಸ್‌ಕ್ರೀಂ ವ್ಯಾಪಾರ ಮಾಡು ತ್ತಿದ್ದರೆಂದು ಹೇಳಲಾಗಿದ್ದು, ಕಳೆದ ಸುಮಾರು ೬ ತಿಂಗಳಿAದ ವ್ಯಾಪಾರ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಹೀಗಾಗಿ ನಾಗರಾಜ ನಾಯಕ ಮನೆ ಮುಂದೆ ಐಸ್‌ಕ್ರೀಂ ಇಲ್ಲದ ಖಾಲಿ ಬಾಕ್ಸ್ಗಳು ಇದ್ದವು.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ೧೦ ಗಂಟೆ ಸುಮಾರಿನಲ್ಲಿ ಗ್ರಾಮದ ಬಾಲಕಿಯರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರು. ಈ ವೇಳೆ ಭಾಗ್ಯ ಮತ್ತು ಕಾವ್ಯ ಐಸ್‌ಕ್ರೀಂ ಬಾಕ್ಸ್ ಒಳಗೆ ಬಚ್ಚಿಟ್ಟುಕೊಂಡು, ಅದರ ಮುಚ್ಚಳವನ್ನು ಮುಚ್ಚಿಕೊಂಡಿದ್ದಾರೆ. ಅದರ ಮುಚ್ಚಳ ಹಾಕುತ್ತಿದ್ದಂತೆ ಲಾಕ್ ಆಗಿದೆ. ಲಾಕ್ ಆದ ಐಸ್ ಕ್ರೀಂ ಬಾಕ್ಸ್ನ ಮುಚ್ಚಳವನ್ನು ಒಳಗಿನಿಂದ ತೆರೆಯಲು ಸಾಧ್ಯವಿಲ್ಲ. ಅದನ್ನರಿಯದೇ ಒಳಗೆ ಬಚ್ಚಿಟುಕೊಂಡಿದ್ದ ಬಾಲಕಿಯರು ಮುಚ್ಚಳ ತೆಗೆಯಲು ಸಾಧ್ಯವಾಗದೇ ಉಸಿರುಗಟ್ಟಿ ಅಲ್ಲೇ ಸಾವನ್ನಪ್ಪಿದ್ದಾರೆ.

ಇವರ ಜೊತೆ ಆಟವಾಡುತ್ತಿದ್ದ ಇತರ ಬಾಲಕಿಯರು ಇವರಿಬ್ಬರನ್ನು ಕಾಣದೇ ಅವರವರ ಮನೆಗೆ ತೆರಳಿದರು ಎಂದು ಹೇಳಲಾಗಿದೆ. ಮಧ್ಯಾಹ್ನವಾದರೂ ಮಕ್ಕಳು ಬಾರದ ಕಾರಣ ಅವರ ಪೋಷಕರು ಗ್ರಾಮದಲ್ಲಿ ಹುಡುಕಾಡಿ, ಬಾಲಕಿ ಯರ ಗೆಳತಿಯರನ್ನು ವಿಚಾರಿಸಿದಾಗ ಇವರು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದುದು ತಿಳಿದು ಬಂದಿದೆ. ಎಲ್ಲಾ ಕಡೆ ಹುಡುಕಾಡಿ, ಕೊನೆಗೆ ಅನುಮಾನದ ಮೇರೆಗೆ ಮಧ್ಯಾಹ್ನ ೧ ಗಂಟೆ ಸುಮಾರಿನಲ್ಲಿ ಐಸ್‌ಕ್ರೀಂ ಬಾಕ್ಸ್ ಮುಚ್ಚಳ ತೆರೆದು ನೋಡಿದಾಗ ಇಬ್ಬರೂ ಬಾಲಕಿಯರ ಮೃತದೇಹಗಳು ಪತ್ತೆಯಾಗಿವೆ.

ಮಕ್ಕಳನ್ನು ಕಳೆದುಕೊಂಡ ಪೋಷಕರು ಮತ್ತು ಸಂಬAಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊನೆಗೆ ಬಾಲಕಿಯರ ಅಂತ್ಯಸAಸ್ಕಾರವನ್ನು ಗ್ರಾಮದಲ್ಲೇ ನೆರವೇರಿಸಿದ್ದಾರೆ. ಈ ಸಂಬAಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ನಂಜನಗೂಡು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವನಂಜ ಶೆಟ್ಟಿ, ಈ ಪ್ರಕರಣ ಕುರಿತು ನಮಗೆ ಅಧಿಕೃತವಾಗಿ ಯಾವುದೇ ವಿಚಾರ ತಿಳಿದಿಲ್ಲ. ಆದರೆ ಸಾಮಾಜಿಕ ಜಾಲತಾಣದ ಮೂಲಕ ವಿಷಯ ಗೊತ್ತಾಗಿದೆ. ಬಾಲಕಿಯರ ಅಂತ್ಯಸAಸ್ಕಾರವೂ ಆಗಿದೆ ಎಂಬುದು ತಿಳಿದಿದೆ. ಈ ಸಂಬAಧ ಯಾರೂ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಿಸಿಲ್ಲ ಎಂದರು.