ರೈತರಿಂದ ಹೆದ್ದಾರಿ ತಡೆ: ಅರ್ಧದಿನ ವಾಹನಗಳ ಸಂಚಾರ ಅಸ್ತವ್ಯಸ್ತ

ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಜನರ ಪರದಾಟ ರಸ್ತೆಗಿಳಿದ ಜಾನುವಾರುಗಳು,
ಮೃತ ರೈತರಿಗೆ ಪರಿಹಾರಕ್ಕೆ ಆಗ್ರಹ ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ
––––
ಶ್ರೀರಂಗಪಟ್ಟಣ/ಮೈಸೂರು,ನ.೨೬ (ವಿನಯ್ ಕಾರೇಕುರ/ಎಂಟಿವೈ)- ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾ ಯಿಸಿ ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ರಾಷ್ಟಿçÃಯ ಹೆದ್ದಾರಿ ಬಂದ್ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರೈತರು ಜಾನುವಾರುಗ ಳೊಂದಿಗೆ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಮಾರ್ಗದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಗೊಂಡು ವಾಹನ ಸವಾರರು ಮತ್ತು ಸಾರ್ವ ಜನಿಕರು ಪರದಾಡುವಂತಾಯಿತು.
ನಂಜನಗೂಡು ರಸ್ತೆ ಬಂದ್: ಮೈಸೂರು-ನಂಜನಗೂಡು ರಸ್ತೆಯ ಬಂಡೀಪಾಳ್ಯದ ಬಳಿ ರೈತರು ಜಾನುವಾರುಗಳೊಂದಿಗೆ ಇಂದು ಬೆಳಗ್ಗೆ ೧೧ರಿಂದ ಮಧ್ಯಾಹ್ನ ೨ ಗಂಟೆವರೆಗೆ ಹೆದ್ದಾರಿ ತಡೆದು ಪ್ರತಿಭಟಿಸಿದ್ದ ರಿಂದ ಮೈಸೂರು-ನಂಜನಗೂಡು ಮಾರ್ಗದಲ್ಲಿ ಎರಡು ಕಡೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಆಗಮಿಸಿದ ನೂರಾರು ರೈತರು ಎಪಿಎಂಸಿ ಮಾರುಕಟ್ಟೆ ಸಮೀಪದ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗೆ ಅಡ್ಡಲಾಗಿ ಜಾನುವಾರುಗಳನ್ನು ಕಟ್ಟಿಹಾಕಿ ಪ್ರತಿಭಟನೆ ನಡೆಸಿದರು. ಇದರಿಂದ ಪೊಲೀಸರು ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕುರುಬೂರು ಶಾಂತಕುಮಾರ್ ಮಾತ ನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿ ಕೃಷಿ ಕಾಯ್ದೆಗಳನ್ನು ಹಿಂಪಡೆ ದಿದೆೆ. ಆದರೆ, ಬೆಳೆಗಳಿಗೆ ಶಾಸನ ಬದ್ಧ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ಜಾರಿಗೊಳಿಸಿಲ್ಲ. ಕಾನೂನು ಜಾರಿಗೆ ಆಗ್ರಹಿಸಿ ದೇಶಾದ್ಯಂತ ರಾಷ್ಟಿçÃಯ ಹೆದ್ದಾರಿ ಬಂದ್ ಚಳವಳಿ ನಡೆಸಲಾಗುತ್ತಿದ್ದು, ರಾಸು ಗಳನ್ನು ರಸ್ತೆಗೆ ಕಟ್ಟಿ ಪ್ರತಿಭಟನೆ ನಡೆಸಲಾ ಗಿದೆ. ಕರ್ನಾಟಕದಲ್ಲಿ ಅತಿವೃಷ್ಟಿ, ಅಕಾಲಿಕ ಮಳೆಯಿಂದ ೭ ಲಕ್ಷ ಹೆಕ್ಟೇರ್ ಬೆÉಳೆ ನµ À್ಟವಾಗಿದೆ. ಎನ್‌ಡಿಆರ್‌ಎಫ್ ಪರಿಹಾರ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕ ಬೆಲೆ ನೀಡಬೇಕು. ಸರ್ಕಾರ ಜನಪರ, ರೈತಪರ ತೀರ್ಮಾನ ಕೈಗೊಂಡು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ದೆಹಲಿಯ ರೈತರ ಚಾರಿತ್ರಿಕ ಹೋರಾಟ ದಿಂದ ಕೃಷಿ ಕಾಯ್ದೆಗಳು ರದ್ದಾಗಿರುವುದು ದೇಶದ ರೈತರ ಶಕ್ತಿ ಹೆಚ್ಚಿಸಿದೆ. ಈ ಹೋರಾಟ ದಲ್ಲಿ ಚಳಿ ಮಳೆ ಬಿಸಿಲು ಗಾಳಿ ಲೆಕ್ಕಿಸದೆ ಹೋರಾಟ ಮಾಡಿ ಬಲಿದಾನ ಮಾಡಿದ ೭೦೦ಕ್ಕೂ ಹೆಚ್ಚು ರೈತರ ಆತ್ಮಕ್ಕೆ ಈ ಜಯ ಅರ್ಪಣೆಯಾಗಿದೆ. ಕೇಂದ್ರ ಸರ್ಕಾರದ ನಿರ್ಲಕ್ಷö್ಯತನದಿಂದ ತಮ್ಮ ಪ್ರಾಣ ಬಲಿ ದಾನ ಮಾಡಿದ ರೈತರ ಕುಟುಂಬಗಳಿಗೆ ತಲಾ ೨೫ ಲಕ್ಷ ರೂ.ಪರಿಹಾರ ನೀಡ ಬೇಕು. ಹುತಾತ್ಮರಾದ ರೈತರ ಕುಟುಂಬ ಗಳಿಗೆ ತೆಲಂಗಾಣ ಸರ್ಕಾರ ೩ ಲಕ್ಷ ರೂ.ನಂತೆ ೨೨ ಕೋಟಿ ರೂ.ಬಿಡುಗಡೆ ಮಾಡಿದೆ. ಈಗಲಾದರೂ ಪ್ರಧಾನಿಗಳು ಎಚ್ಚೆತ್ತು ಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಯಲ್ಲಿ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಹಾಡ್ಯ ರವಿ, ಸಾತಗಳ್ಳಿ ಬಸವರಾಜು, ಶಿವರುದ್ರಪ್ಪ, ಸುರೇಶ್, ರಾಜು, ಸೋಮ ಶೇಖರ್, ಮಾದಪ್ಪ, ಜಯರಾಮು, ಸಿದ್ದಪ್ಪ, ಮಂಜುನಾಥ್, ಅಪ್ಪಣ್ಣ, ಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶ್ರೀರಂಗಪಟ್ಟಣ ವರದಿ: ತಾಲೂಕಿನ ಕಿರಂಗೂರು ವೃತ್ತದ
ಬೆಂಗಳೂರು-ಮೈಸೂರು ಹಾಗೂ ಚಾಮರಾಜನಗರ- ಜೇವರ್ಗಿ ಹೆದ್ದಾರಿಗಳನ್ನು ಬಂದ್ ಮಾಡಿ, ಹೆದ್ದಾರಿಯಲ್ಲಿ ಹಸು, ಎತ್ತುಗಳ ಕಟ್ಟಿಹಾಕಿ, ಟ್ರಾ÷್ಯಕ್ಟರ್, ಟಿಲ್ಲರ್‌ಗಳನ್ನು ನಿಲ್ಲಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು. ರೈತ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯದಾದ್ಯಂತ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಚಾರಿತ್ರಿಕ ದೆಹಲಿ ರೈತ ಆಂದೋಲನಕ್ಕೆ ಒಂದು ವರ್ಷದ ಹಿನ್ನೆಲೆಯಲ್ಲಿ ಮಂಡ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಸಹಸ್ರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು. ಬೆಳಗ್ಗೆ ೯ ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ ೪ ರವರೆಗೆ ನಡೆಯಿತು. ಪ್ರತಿಭಟನಾ ನಿರತರಿಗೆ ಸಂಘಟನೆಗಳ ಪದಾಧಿಕಾರಿಗಳು ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆರಗೋಡು ಗುರುಪ್ರಸಾದ್ ಮಾತನಾಡಿ, ಕೇಂದ್ರದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳು ರದ್ದಾಗಬೇಕು, ವಿದ್ಯುತ್ ತಿದ್ದುಪಡಿ ಮಸೂದೆ-೨೦೨೧ನ್ನು ವಾಪಸ್ಸು ಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಯಾಗಬೇಕು. ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. ೧ ಟನ್ ಕಬ್ಬಿಗೆ ೪೫೦೦ ರೂ. ಬೆಲೆ ನಿಗದಿ ಮಾಡಬೇಕು ಮತ್ತು ಕಬ್ಬಿನ ಬಾಕಿಯನ್ನು ರೈತರ ಖಾತೆಗೆ ಜಮಾ ಮಾಡಬೇಕು. ಭತ್ತಕ್ಕೆ ವ್ಶೆಜ್ಞಾನಿಕ ಬೆಲೆ ನೀಡಬೇಕು ಮತ್ತು ಶಾಶ್ವತ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ಇತರೆ ರೈತ ಹಾಗೂ ಕಾರ್ಮಿಕರ ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರೆಸು ವುದಾಗಿ ತಿಳಿಸಿದರು. ಸಿಪಿಐ ರಾಜ್ಯ ಕಾರ್ಯದರ್ಶಿ ಜಿ.ಎನ್. ನಾಗರಾಜ್, ಸುನೀತಾ ಪುಟ್ಟಣ್ಣಯ್ಯ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ದೇವಿ, ಜಿಲ್ಲಾಧ್ಯಕ್ಷ ಕೆಂಪುಗೌಡ, ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು, ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಟಿ.ಯಶವಂತ್, ರವಿ ಪೂಣಚ್ಚ, ಮಧು ಚಂದನ್ ಇತರ ಪ್ರಮುಖರು ಸೇರಿದಂತೆ ಸಹಸ್ರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.