ಬಸ್‍ಪಾಸ್‍ಗೆ ಮನೆಗೆಲಸದವರ ಮನವಿ

ಮೈಸೂರು, ಜೂ.10(ವೈಡಿಎಸ್)- ಮನೆ ಗೆಲಸ ಮಾಡಿ ಬದುಕು ಸಾಗಿಸುವ ಮಹಿಳೆ ಯರಿಗೆ ಶೀಘ್ರವೇ ಬಸ್‍ಪಾಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಎಸ್‍ಯು ಸಿಐ(ಕಮ್ಯುನಿಸ್ಟ್) ಮೈಸೂರು ಜಿಲ್ಲಾ ಸಮಿತಿ ಸದಸ್ಯರು ಕಾರ್ಮಿಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನೆಗೆಲಸದ ಮಹಿಳೆಯರಿಗೆ ಲಾಕ್ ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಎದು ರಾಗಿದೆ. ಸರ್ಕಾರದ ವತಿಯಿಂದ ದಿನಸಿ ಕಿಟ್ ವಿತರಿಸಬೇಕು. ಜತೆಗೆ ಆರ್ಥಿಕ ನೆರವು ನೀಡಬೇಕು. ಮಹಿಳೆಯರು ಮನೆಗೆಲಸಕ್ಕೆ ಬೇರೆ-ಬೇರೆ ಬಡಾವಣೆಗಳಿಗೆ ಹೋಗುವು ದರಿಂದ ಬಸ್‍ಪಾಸ್ ಪಡೆಯುತ್ತಿದ್ದರು. ಆದರೆ, ಲಾಕ್‍ಡೌನ್ ಸಡಿಲಿಕೆಯಾದರೂ ಸಾರಿಗೆ ಇಲಾಖೆ ಬಸ್‍ಪಾಸ್ ನೀಡುತ್ತಿಲ್ಲ. ಇದರಿಂದ ಮನೆಗೆಲಸದವರಿಗೆ ತೊಂದರೆ ಯಾಗಿದ್ದು, ಕೂಡಲೇ ಬಸ್ ಪಾಸ್ ನೀಡ ಬೇಕೆಂದು ಎಸ್‍ಯುಸಿಐ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಮನೆಗೆಲಸದ ಮಹಿಳೆಯರು ಮನವಿ ಮಾಡಿದ್ದಾರೆ.