ವಿವಿಧ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಮಳವಳ್ಳಿ,ಏ.28- ಸರ್ಕಾರದ ನಾನಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ತಾಲೂಕಿನ ರಾಷ್ಟ್ರೀಯ ಹೆದ್ದಾರಿ-209ಯಿಂದ ದಬ್ಬಳ್ಳಿ, ನಿಡಘಟ್ಟ ಗಾಜನೂರು ಮಾರ್ಗ ಸೇರುವ ರಸ್ತೆ, ಪಿಎಸ್ ರಸ್ತೆಗೆ ಕೂನನಕೊಪ್ಪಲು, ಚೊಟ್ಟನಹಳ್ಳಿ, ನೆಟ್ಕಲ್ ಸೇರುವ ರಸ್ತೆ, ಮಳವಳ್ಳಿ-ಪೂರಿಗಾಲಿ ರಸ್ತೆಯ ಆಯ್ದ ಭಾಗಗಳು, ಬಿಎಂ ರಸ್ತೆಯಿಂದ ಸುಜ್ಜ ಲೂರು, ಮಲಿಯೂರು, ಮಾರ್ಗವಾಗಿ ಎಸ್-3 ಸೇರುವ ರಸ್ತೆಗಳ ಆಯ್ದ ಭಾಗಗಳ 12 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಸಮಗ್ರ ಅಭಿವೃದ್ಧಿಯ ಭಾಗವಾಗಿ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ 36 ಕೋಟಿ ಅನುದಾನ ತರ ಲಾಗಿದೆ. ಮೊದಲ ಹಂತದಲ್ಲಿ 12 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಉಳಿದ ಕಾಮ ಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಗ್ರಾಮೀಣ ಭಾಗ ಅಭಿವೃದ್ಧಿಯಾದರೆ ಕ್ಷೇತ್ರ ಅಭಿವೃದ್ಧಿಯಾದಂತೆ, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಆಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುಣಮಟ್ಟದ ಕಾಮ ಗಾರಿಯನ್ನು ಗುತ್ತಿಗೆದಾರರು ಮಾಡಬೇಕು. ಕಾಮಗಾರಿ ನಡೆಯುವ ವೇಳೆ ಸ್ಥಳೀಯರು ಗಮನಿಸಬೇಕು. ಕ್ಷೇತ್ರಕ್ಕೆ ಸಾಕಷ್ಟು ಅನು ದಾನವನ್ನು ತಂದಿರುವುದರಿಂದ ಹಳ್ಳಿ ಗಳಿಗೆ ಕಾಂಕ್ರೀಟ್ ಮತ್ತು ಡಾಂಬ ರೀಕರಣವಾಗುತ್ತಿದೆ ಎಂದರು.

ತಾಲೂಕಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಆರೈಕೆಗೆ ಹಾಗೂ ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸ ಲಾಗುತ್ತಿದೆ. ತಾಲೂಕಿ ನಲ್ಲಿ ಈಗ ಇರುವ 200 ಹಾಸಿಗೆಯ ಜತೆ ವಡ್ಡರಹಳ್ಳಿ ವಸತಿ ಶಾಲೆಯಲ್ಲಿ 200 ಹಾಸಿಗೆ ಯುಳ್ಳ ಕೋವಿಡ್ ಕೇಂದ್ರ ಆರಂಭವಾಗಿದ್ದು, ಸೋಂಕಿತರ ಆರೈಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲೇಗೌಡ, ಲೋಕೋಪ ಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ ಸೇರಿದಂತೆ ಹಲವರು ಇದ್ದರು.

ಕೊರೊನಾ ಲಸಿಕೆ ಪಡೆದ ಶಾಸಕ: ಪ್ರತಿಯೊಬ್ಬರು ಮುನ್ನಚ್ಚರಿಕಾ ಕ್ರಮವಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಕೋವಿಡ್ ಲಸಿಕೆ ಪಡೆಯುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡು ನಂತರ ಕೋವಿಡ್ ಲಸಿಕೆ ಪಡೆದು ಮಾತನಾಡಿದರು.

ಉಚಿತವಾಗಿ ಲಭ್ಯವಿರುವ ಲಸಿಕೆಯನ್ನು ಎಲ್ಲರೂ ತಪ್ಪದೇ ಪಡೆದುಕೊಳ್ಳುವ ಮೂಲಕ ಕೋವಿಡ್ ವೈರಸ್‍ನಿಂದ ಮುಕ್ತರಾಗಬೇಕು. ನಾನು ಪ್ರಥಮ ಲಸಿಕೆ ಪಡೆದಿದ್ದು, ತಾಲೂಕಿ ನಲ್ಲಿ ಬಹಳಷ್ಟು ಜನರು ಇನ್ನೂ ಲಸಿಕೆ ಪಡೆಯದಿರುವುದು ನನ್ನ ಗಮನಕ್ಕೆ ಬಂದಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ, ತಕ್ಷಣವೇ ಎಲ್ಲರೂ ಲಸಿಕೆ ಪಡೆದು ಕೊಳ್ಳಬೇಕು ಎಂದು ಕರೆ ನೀಡಿದರು.
ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ನಿಮ್ಮ ಗ್ರಾಮಗಳ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯಬೇಕು. ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಭಯಬಿಟ್ಟು ಎಲ್ಲರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು ಲಸಿಕೆ ಪಡೆದು ಕೊಂಡರು. ಉಪಾಧ್ಯಕ್ಷ ಟಿ.ನಂದ ಕುಮಾರ್, ಸಾರ್ವಜನಿಕ ಆಸ್ಪತ್ರೆಯ ಪ್ರಭಾರ ಆಡಳಿತಾಧಿಕಾರಿ ಡಾ.ಶಿವ ಕುಮಾರ್ ಸೇರಿದಂತೆ ಇತರರಿದ್ದರು.