ಹಳೇಬೀಡಿನಲ್ಲಿ ಕೃಷಿ ವಸ್ತುಪ್ರದರ್ಶನ, ಸಂವಾದ ಕಾರ್ಯಕ್ರಮ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ

ಬೇಲೂರು:  ‘ರೈತರು ರಾಸಾ ಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಬೇಕು’ ಎಂದು ಶಾಸಕ ಕೆ.ಎಸ್. ಲಿಂಗೇಶ್ ಸಲಹೆ ನೀಡಿದರು.ತಾಲೂಕಿನ ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಕೃಷಿ ವಸ್ತುಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಈ ಹಿಂದೆ ಜಮೀನಿನಲ್ಲಿ, ಮನೆಯ ಹಿತ್ತಲಿನಲ್ಲಿ ಸಾವಯವ ಗೊಬ್ಬರವನ್ನು ತಯಾರಿಸಿಕೊಂಡು ಹೊಲ ಗದ್ದೆಗಳಿಗೆ ಬಳಕೆ ಮಾಡುತ್ತಿದ್ದರು. ಇದರಿಂದ ಗುಣಮಟ್ಟದ ಹಾಗೂ ಅಧಿಕ ಇಳುವರಿಯ ಪಡೆದು ನೆಮ್ಮದಿ ಜೀವನ ನಡೆಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆಯ ಹೆಸರಿನಲ್ಲಿ ರಾಸಾ ಯನಿಕ ಗೊಬ್ಬರ ಬಳಕೆ ಹೆಚ್ಚಾಗುತ್ತಿದ್ದು, ಇಳುವರಿ ಕಡಿಮೆಯಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಆತ್ಮಹತ್ಯೆ ಹಾದಿ ಹಿಡಿಯು ತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಸ್ರೇಲ್ ಅಂತಹ ಪುಟ್ಟ ರಾಷ್ಟ್ರ ಹನಿ ನೀರಾ ವರಿ ಪದ್ಧತಿ ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು ವಿಶ್ವದ ಹಲವು ರಾಷ್ಟ್ರಗಳಿಗೆ ಆಹಾರ ಪೂರೈಸುವ ಮೂಲಕ ಮಾದರಿ ಯಾಗಿದೆ. ಆ ದೇಶವನ್ನು ನೋಡಿ ನಾವು ಕಲಿಯಬೇಕು. ಈ ನಿಟ್ಟಿನಲ್ಲಿ ಆಯೋಜಿಸಿ ರುವ ಕೃಷಿ ವಸ್ತುಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮ ಪೂರಕವಾಗಿದ್ದು, ರೈತರು ವಿಷಯ ತಜ್ಞರ ಸಹಕಾರ ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ಜನರು ಮಕ್ಕಳನ್ನು ದೂರದ ಪಟ್ಟಣಗಳಿಗೆ ಕಾಲೇಜು ಶಿಕ್ಷಣ ಪಡೆಯಲು ಕಳುಹಿಸುವ ಬದಲು ಸ್ಥಳೀಯ ಸರ್ಕಾರಿ ಕಾಲೇಜಿಗೆ ಸೇರಿಸಬೇಕು. ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರು ಹಾಗೂ ಉತ್ತಮ ಲ್ಯಾಬ್ ಸೌಲಭ್ಯವಿದ್ದು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ. ಮಂಜಪ್ಪ ಮಾತನಾಡಿ, ರೈತರ ಸಾಲಮನ್ನಾ ಬಗ್ಗೆ ಮಾತನಾಡುವ ಸರ್ಕಾರಗಳು ಇಸ್ರೇಲ್ ನಂತೆ ರೈತನಿಗೆ ವಿದ್ಯುತ್, ನೀರು, ಗೊಬ್ಬರ, ಬೆಳೆಗೆ ತಕ್ಕಬೆಲೆ ನಿಗದಿಪಡಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಸರ್ಕಾರಗಳು ಸಾಲ ಮನ್ನಾ ಹೋರಾಟದಲ್ಲಿ ಗುದ್ದಾಡುವುದನ್ನು ಬಿಟ್ಟು ರೈತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಆಗ ರೈತರೇ ಸರ್ಕಾರಕ್ಕೆ ಸಾಲ ನೀಡುವ ಮಟ್ಟಕ್ಕೆ ಅಭಿವೃದ್ಧಿ ಹೊಂದುತ್ತಾರೆ ಎಂದು ತಿಳಿಸಿದರು.
ಕೃಷಿ ಚಟುವಟಿಕೆಯ ಬಗ್ಗೆ ವಿಜ್ಞಾನಿ ಗಳು ರೈತರಿಗೆ ಕಾಲ ಕಾಲಕ್ಕೆ ತಕ್ಕಂತೆ ಉಪ ಯುಕ್ತ ಸಲಹೆಗಳನ್ನು ನೀಡಬೇಕು. ಆ ಮೂಲಕ ರೈತರಿಗೆ ನೆರವಾಗಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್, ಜಿಪಂ ಸದಸ್ಯೆ ಲತಾ ದಿಲೀಪ್‍ಕುಮಾರ್, ತಾಪಂ ಸದಸ್ಯೆ ಸುಮಾ ಪರಮೇಶ್, ಕೃಷಿ ವಿಜ್ಞಾನಿ ಗಳಾದ ಚೆನ್ನಕೇಶವ, ಎಂ.ಎಸ್. ನಾಗರಾಜ್ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಹಳೇಬೀಡಿನ ರಾಜನಶಿರಿಯೂರು ವೃತ್ತದಿಂದ ಮಹಿಳೆಯರ ವೀರಗಾಸೆ, ಡೊಳ್ಳು ಕುಣಿತ, ನೂರಾರು ಮಹಿಳೆಯರಿಂದ ಪೂರ್ಣ ಕುಂಭ, ನೇಗಿಲಹೊತ್ತ ರೈತ ಯೋಗಿ, ಎತ್ತಿನ ಗಾಡಿಗಳಲ್ಲಿ ವಸ್ತು ಪ್ರದರ್ಶನದ ಫಲಕಗಳ ಮೆರವಣಿಗೆ ನಡೆಯಿತು. ಬಳಿಕ, ವಿದ್ಯಾರ್ಥಿನಿ ಡಿ.ಎಂ.ಪೃಥ್ವಿ ನೃತ್ಯ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕೃಷಿಸಮಾಜ ಅಧ್ಯಕ್ಷ ಜಯರಾಮ್, ಉಪಾಧ್ಯಕ್ಷರಾದ ಗೋವಿಂದಪ್ಪ, ಎಚ್.ಎಂ.ಸವಿತಾ ಮಹೇಶ್, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಹರೀಶ್, ಬೇಲೂರು ಸಹಾಯಕ ಕೃಷಿ ನಿರ್ದೇಶಕ ಮಲ್ಲೇಶ ಗೌಡ, ಬೇಲೂರು ತಾಪಂ ಕಾರ್ಯನಿರ್ವ ಹಣಾಧಿಕಾರಿ ಮಲ್ಲೇಶಪ್ಪ, ಉಪಪ್ರಾಂಶು ಪಾಲ ಮುಳ್ಳಯ್ಯ, ಹಳೇಬೀಡು ಕೃಷಿ ಅಧಿಕಾರಿಗಳಾದ ಸಿದ್ದಪ್ಪ, ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ರೈತರ ಬೆಳೆಗಳಿಗೆ ನಿಗದಿತ ಬೆಂಬಲ ಬೆಲೆ ನೀಡುವ ಯೋಜನೆ ಹಾಕಿಕೊಂಡಿ ದ್ದಾರೆ. – ಕೆ.ಎಸ್.ಲಿಂಗೇಶ್, ಶಾಸಕ