ಮೈಸೂರಲ್ಲಿ ಕುಷ್ಠ ಅನಿಷ್ಟ ಇನ್ನೂ ಜೀವಂತ

ಮೈಸೂರು, ಜ.27(ಪಿಎಂ)- ಮೈಸೂರು ಜಿಲ್ಲೆ ಕುಷ್ಠರೋಗ ಮುಕ್ತ ಎಂದು ಈಗಾ ಗಲೇ ಘೋಷಣೆ ಆಗಿದೆ. ಆದರೆ ಇತ್ತೀ ಚೆಗೆ ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಲೂಕುಗಳ ಗಡಿ ಭಾಗ ಗಳಲ್ಲಿ ಮತ್ತೆ ಕುಷ್ಠರೋಗ ಕಾಣಿಸಿ ಕೊಂಡಿದೆ ಎಂದು ಆರೋಗ್ಯ ಇಲಾಖೆಯ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣ ದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ತಾಲೂಕು ಹಾಗೂ ನಗರ ವತಿಯಿಂದ `ಐಇಸಿ’ ಕಾರ್ಯಕ್ರಮ ದಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯ ಕ್ರಮಗಳ ಕುರಿತಂತೆ ಬುಧವಾರ ಹಮ್ಮಿಕೊಂ ಡಿದ್ದ ರಸಪ್ರಶ್ನೆ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

`ಜನವರಿ’ ತಿಂಗಳನ್ನು ಇಡೀ ದೇಶದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಮಾಸಾಚರಣೆ ಆಗಿ ಆಚರಿಸಲಾಗುತ್ತಿದೆ. 2000ನೇ ಸಾಲಿನಲ್ಲೇ ಮೈಸೂರು ಜಿಲ್ಲೆ ಕುಷ್ಠರೋಗ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಜಿಲ್ಲೆಯ ಈ 3 ತಾಲೂಕುಗಳ ಗಡಿಭಾಗಗಳಲ್ಲಿ ಕುಷ್ಠ ರೋಗ ಮತ್ತೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಮತ್ತೆ ಕುಷ್ಠರೋಗ ಮುಕ್ತಗೊಳಿಸಬೇಕಿದೆ. ಕುಷ್ಠರೋಗ ಅಂಟಿ 1ರಿಂದ 2 ವರ್ಷ ಗಳಾಗಿದ್ದರೂ ಅದರ ಪರಿಣಾಮ ಕಾಣಿಸಿ ಕೊಳ್ಳುವುದು ಆ ಬಳಿಕವೇ ಎಂದರು.

ನಮ್ಮ ಇಲಾಖೆಯ ಮೈಸೂರು ನಗರ ಮತ್ತು ತಾಲೂಕಿಗೆ 2020-21ನೇ ಸಾಲಿಗೆ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಕಾರ್ಯಕ್ರಮಕ್ಕಾಗಿ 10 ಸಾವಿರ ರೂ. ಅನು ದಾನ ಲಭ್ಯವಾಗಿದೆ. ಇದನ್ನು ಬಳಸಿಕೊಂಡು 5 ಕಾಲೇಜುಗಳಲ್ಲಿ ಕೋವಿಡ್ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಂಬಂಧ ರಸಪ್ರಶ್ನೆ ಸ್ಪರ್ಧೆ ಆಯೋಜಿ ಸುತ್ತಿದ್ದು, ಇದರ ಅಂಗವಾಗಿ ಇಂದು ಮೊದಲ ಸ್ಪರ್ಧೆಯನ್ನು ಈ ಕಾಲೇಜಿನಲ್ಲಿ ಆರಂಭಿಸ ಲಾಗಿದೆ. ನಾಳೆ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶ ದಲ್ಲಿ ಮಾತ್ರವಲ್ಲದೆ, ನಗರ ಪ್ರದೇಶದಲ್ಲೂ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾರ್ವ ಜನಿಕರಿಗೆ ಸಂಪೂರ್ಣ ಅರಿವು ಮೂಡಿ ಸುವುದು ಇಂದಿಗೂ ಸಾಧ್ಯವಾಗಿಲ್ಲ. ಅದ ಕ್ಕಾಗಿಯೇ ಇಂತಹ ಸ್ಪರ್ಧೆಗಳನ್ನು ಆಯೋ ಜಿಸಲಾಗುತ್ತಿದೆ. ಯಾವುದೇ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿ ಯಾಗಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತಹ ಕಾರ್ಯಕ್ರಮಗಳಲ್ಲಿ ಸಾರ್ವ ಜನಿಕರು ಭಾಗವಹಿಸುವುದು ತೀರಾ ಕಡಿಮೆ. ಮಾಹಿತಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚು ತಮ್ಮ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡು ತ್ತಾರೆ. ಆದರೆ ಮಾಹಿತಿ ಮತ್ತು ಜ್ಞಾನವೇ ನಮ್ಮ ನಿಜವಾದ ಸಂಪತ್ತು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಟಿ. ವಿಜಯ್, ಕಾಲೇಜಿನ ಎನ್‍ಎಸ್‍ಎಸ್ ಘಟಕ-1ರ ಸಂಚಾಲಕಿ ಮನೋನ್ಮಣಿ, ಘಟಕ -3ರ ಸಂಚಾಲಕ ಡಾ.ಎಸ್.ಜಿ. ರಾಘವೇಂದ್ರ, ಘಟಕ-2ರ ಸಂಚಾಲಕ ಡಾ.ಚಂದ್ರ ಕುಮಾರ್, ಸಹಾಯಕ ಪ್ರಾಧ್ಯಾಪಕಿ ಡಾ.ಕೆ. ಸರಿತಾ ಮತ್ತಿತರರು ಹಾಜರಿದ್ದರು.