ಮೈಸೂರು,ಜೂ.23(ಪಿಎಂ)- ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಪ್ರಕೃತಿ ನಾಶಕ್ಕೆ ಎಡೆಯಾಗುವಂತೆ ನಡೆದುಕೊಳ್ಳು ತ್ತಿದ್ದು, ಕೃಷಿ ಭೂಮಿ ಮಾರಾಟ ಮಾಡಲು ಅನುಕೂಲವಾಗುವಂತೆ ಕಾನೂನಿಗೆ ಹಲವು ಬಾರಿ ತಿದ್ದುಪಡಿಯನ್ನೂ ತಂದಿದೆ ಎಂದು `ವಿಜಯ ಕರ್ನಾಟಕ’ ಸಂಪಾದಕ ಹರಿ ಪ್ರಕಾಶ್ ಕೋಣೆಮನೆ ವಿಷಾದಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಯುಕ್ತ ಪ್ರಕಾಶನದ ಜಂಟಿ ಆಶ್ರಯದಲ್ಲಿ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊಡ ಗಿನ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ 23ನೇ ಕೃತಿ `ಕೊಡಗಿನ ತಲ್ಲಣ-ದುರಂತದ ಹಿಂದಿನ ಸತ್ಯಗಳು’ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಜಮೀನುಗಳನ್ನು ಉದ್ಯಮಿಗಳಿಗೆ ಅಲ್ಲಿನ ಜನತೆ ಮಾರಾಟ ಮಾಡಿ ಕೊಂಡರೆ, ಈ ದೌರ್ಬಲ್ಯ ಬಳಸಿಕೊಂಡ ಅಲ್ಲಿನ ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ಕೊಡಗಿನ ದುರ್ಘಟನೆಗೆ ಕಾರಣ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಕೃಷಿ ಭೂಮಿ ಮಾರಾಟ ಮಾಡಲು ಅನುಕೂಲ ವಾಗುವಂತೆ ಕಾನೂನಿಗೆ ಹಲವು ಬಾರಿ ತಿದ್ದುಪಡಿ ತಂದಿದೆ. ಇದು ಅಲ್ಲಿನ ಕೃಷಿ ಭೂಮಿ ಮಾರಾಟಕ್ಕೆ ಉತ್ತೇಜನ ನೀಡಿತು ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಪ್ರವಾಸೋದ್ಯಮದ ಹೆಸರಿ ನಲ್ಲಿ ಪ್ರಕೃತಿಯನ್ನು ಶೋಷಣೆ ಮಾಡು ತ್ತಿರುವ ಉದ್ಯಮಿಗಳಿಗೆ ಅನುಕೂಲ ವಾವಂತೆ ಸರ್ಕಾರದ ನೀತಿ ನಿಯಮಗಳು ರೂಪುಗೊಳ್ಳುತ್ತಿವೆ. ಅಲ್ಲಿನ ಬೆಳೆ ನೆಚ್ಚಿ ಕೊಂಡು ಬದುಕು ಮಾಡುವ ಸ್ಥಿತಿ ಅಲ್ಲಿಯವರಿಗೆ ಇಂದು ಇಲ್ಲವಾಗಿದೆ. ಎಲಕ್ಕಿ, ಅಡಿಕೆ ಸೇರಿದಂತೆ ಇನ್ನಿತರ ಪದಾರ್ಥ ಗಳು ಕೊಡಗಿಗೆ ಕಾಳಸಂತೆಯಲ್ಲಿ ಆಮದು ಆಗುತ್ತಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲಿದೆ ಎಂದು ದೂರಿದರು.
ನೌಕರಿ ಮೀಸಲಿಡಲಿ: ಕೊಡಗಿನ ಜನತೆ ನಮ್ಮ ನೆಲದಲ್ಲಿ ಬದುಕು ಮಾಡಲು ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕು. ಅಲ್ಲಿನ ಜನತೆಯ ಆರ್ಥಿಕ ಸಬಲೀಕರಣ ಕ್ಕಾಗಿ ಕುಟುಂಬವೊಂದಕ್ಕೆ ಕನಿಷ್ಠ ಒಂದು ಸರ್ಕಾರಿ ನೌಕರಿ ಮೀಸಲಿಡಲು ಸರ್ಕಾರ ಮುಂದಾಗಬೇಕು. ಈ ರೀತಿಯ ಪರ್ಯಾಯ ಮಾರ್ಗಗಳತ್ತ ಸರ್ಕಾರದ ನಡೆ ಇರಬೇಕೇ ಹೊರತು, ಅಭಿವೃದ್ಧಿ ನೆಪದಲ್ಲಿ ಪ್ರಕೃತಿಗೆ ಮಾರಕವಾಗುವಂತೆ ನಡೆದುಕೊಳ್ಳಬಾರದು ಎಂದು ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು.
ಕೃತಿ ಕುರಿತು ಮಾತನಾಡಿದ ಪ್ರಾಧ್ಯಾ ಪಕ ಡಾ.ಬೆಸೂರು ಮೋಹನ ಪಾಳೇ ಗಾರ, ಕೃತಿ ಅವಲೋಕಿಸಿದರೆ ಕೊಡಗಿನ ದುರಂತದ ಬಗ್ಗೆ ಸತ್ಯದ ಹಿನ್ನೆಲೆ ಕಟ್ಟಿ ಕೊಡಲು ಪ್ರಯತ್ನಿಸಿರುವುದು ಇಲ್ಲಿನ 11 ಅಧ್ಯಾಯಗಳಿಂದ ಮನದಟ್ಟಾಗುತ್ತದೆ. ದುರಂತ ಮರುಕಳಿಸದಿರಲು ಸಲಹೆ ಗಳನ್ನು ನೀಡಿದ್ದಾರೆ. ಕೊಡಗಿನಲ್ಲಿ ಬೆಟ್ಟ-ಗುಡ್ಡಗಳನ್ನು ಕಡಿದು ರೆಸಾರ್ಟ್ ಕಟ್ಟಲಾ ಗುತ್ತಿದೆ. ಬೆಟ್ಟದ ತುದಿಯನ್ನು ಸಮತಟ್ಟು ಮಾಡಿದರೆ ಮಣ್ಣಿನ ಪದರಗಳಲ್ಲಿ ಬಿರುಕು ಉಂಟಾಗಲಿದೆ. ಬಿರುಕಿನಲ್ಲಿ ನೀರು ಇಳಿದು ಕುಸಿಯುವ ಸನ್ನಿವೇಶವೇ ನಿರ್ಮಾಣ ಆಗಲಿದೆ. ಕೊಡಗಿನಲ್ಲಿ ವಾಣಿಜ್ಯ ಬೆಳೆಗಳು ಹೆಚ್ಚಾಗುತ್ತಿದ್ದು, ಹಲ ಸಿನ ಮರಗಳಿದ್ದ ತೋಟಗಳಲ್ಲೀಗ ಆಕೇ ಷಿಯಾ, ಸಿಲ್ವರ್ ಹಾಗೂ ನೀಲಗಿರಿ ಮರ ಗಳು ಸ್ಥಾನ ಪಡೆದುಕೊಳ್ಳುತ್ತಿವೆ. ಈ ಮರ ಗಳು ಮಳೆಗೆ ಮಾರಕವಾಗಲಿವೆ. ಸರ್ಕಾ ರಕ್ಕೆ ಕೊಡಗಿನ ಮೂಲ ಸಮಸ್ಯೆ ಗೊತ್ತೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವನ್ಯಜೀವಿ ಛಾಯಾಗ್ರಾಹಕರಾದ ಕೃಪಾ ಕರ ಮತ್ತು ಸೇನಾನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಯುಕ್ತ ಪ್ರಕಾಶನದ ಪ್ರಕಾಶಕ
ಓಂಕಾರಪ್ಪ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಕೃತಿ ಕರ್ತೃ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮತ್ತಿತರರು ಹಾಜರಿದ್ದರು.