ಐಟಿಆರ್ ಫಾರ್ಮ್ ಪರಿಷ್ಕರಿಸಲು ಆದಾಯ ತೆರಿಗೆ ಇಲಾಖೆ ನಿರ್ಧಾರ

ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್ ನಿಂದಾಗಿ ಸರ್ಕಾರವು ನೀಡುವ ಪರಿಹಾರ ಕ್ರಮಗಳ ಪ್ರಯೋಜನಗಳನ್ನು ತೆರಿಗೆದಾರರು ಪಡೆಯು ವುದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್‍ಗಳನ್ನು ಪರಿಷ್ಕರಿಸುವುದಾಗಿ ಆದಾಯ ತೆರಿಗೆ ಇಲಾಖೆ ಇಂದು ಪ್ರಕಟಿಸಿದೆ.

ಭಾರತ ಸರ್ಕಾರವು ನೀಡಿರುವ ವಿವಿಧ ಟೈಮ್ ಲೈನ್ ವಿಸ್ತರಣೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಆದಾಯ ತೆರಿಗೆದಾರರಿಗೆ ಅನುವು ಮಾಡಿಕೊಡುವ ಸಲುವಾಗಿ, ಸಿಬಿಡಿಟಿ 2019-20ನೇ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ರಿಟರ್ನ್ ಫಾರ್ಮ್‍ಗಳನ್ನು ಪರಿಷ್ಕರಿ ಸುತ್ತಿದೆ. ಅದನ್ನು ಈ ತಿಂಗಳ ಅಂತ್ಯದ ವೇಳೆಗೆ ತಿಳಿಸ ಲಾಗುವುದು ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಪರಿಷ್ಕೃತ ರೂಪಗಳು ತೆರಿಗೆ ದಾರರಿಗೆ 2020ರ ಏಪ್ರಿಲ್ 1ರಿಂದ 2020ರ ಜೂನ್ 30ರವರೆಗೆ ನಡೆಸಿದ ವಹಿವಾಟಿನ ಪ್ರಯೋಜನ ಗಳನ್ನು ಅನುವು ಮಾಡಿಕೊಡುತ್ತದೆ ಎಂದು ಅದು ಹೇಳಿದೆ. ಕೋವಿಡ್-19 ಏಕಾಏಕಿ ಮತ್ತು ಮಾರ್ಚ್ 25ರಿಂದ ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್‍ಡೌನ್ ಕಾರಣದಿಂದಾಗಿ, ಸೆಕ್ಷನ್ 80ಸಿ ಅಡಿಯಲ್ಲಿ ಹೂಡಿಕೆ ಗಳು ಮತ್ತು ವೆಚ್ಚಗಳಿಗೆ ಸಂಬಂಧಿಸಿದ ವಿವಿಧ ಕಾಲಮಿತಿಗಳನ್ನು ಸರ್ಕಾರ ವಿಸ್ತರಿಸಿದೆ.