ಚಾಮುಂಡಿಬೆಟ್ಟದ ಸುತ್ತಲು ಪ್ರದೇಶದಲ್ಲಿ ಹೆಚ್ಚಿದ ಪೊಲೀಸ್ ಕಾವಲು

ಮೈಸೂರು, ಆ.೨೯(ಎಂಕೆ)-ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಚಾಮುಂಡಿಬೆಟ್ಟದ ಸುತ್ತಲೂ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಿದೆ. ದಿನದ ೨೪ ಗಂಟೆಯೂ ಗಸ್ತು ವಾಹನಗಳ ಸಂಚಾರದ ಜೊತೆಗೆ ಬಿಗಿಭದ್ರತೆ ಒದಗಿಸಲಾಗಿದೆ.
ಚಾಮುಂಡಿಬೆಟ್ಟದ ತಪ್ಪಲು ಪ್ರದೇಶ ನಗರದ ಕೆ.ಆರ್ ಮತ್ತು ಆಲನಹಳ್ಳಿ ಹಾಗೂ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು, ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಜೆ.ಸಿ.ನಗರ, ನಂದಿ ಮಾರ್ಗ, ಉತ್ತನಹಳ್ಳಿ ಮತ್ತು ಜೆಎಸ್‌ಎಸ್ ಕಾಲೇಜಿನ ಕಡೆಯ ಮೆಟ್ಟಿಲು ಮಾರ್ಗ ಸೇರಿ ಚಾಮುಂಡಿ ಬೆಟ್ಟಕ್ಕೆ ಹೋಗಲು ಇರುವ ನಾಲ್ಕು ಮಾರ್ಗಗಳಲ್ಲೂ ವಾಹನ ತಪಾಸಣೆ ನಡೆಸಲಾ ಗುತ್ತಿದೆ. ರಾತ್ರಿ ವೇಳೆಯ ಗಸ್ತು ವಾಹನಗಳನ್ನೂ ಹೆಚ್ಚಿಸಲಾಗಿದೆ. ಕೆ.ಆರ್ ಮತ್ತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತಲಾ ೨ ಹೆಚ್ಚುವರಿ ಗಸ್ತು ವಾಹನಗಳನ್ನು ನೀಡಲಾಗಿದೆ. ಚಾಮುಂಡಿಬೆಟ್ಟದ ತಪ್ಪಲು ಪ್ರದೇಶದಲ್ಲಿ ಸಂಜೆ ಬಳಿಕ ಯುವಕ-ಯುವತಿಯರು ಸಂಚರಿಸದAತೆ ನಿಗಾ ಇಡಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುವವರು ಕಂಡುಬAದರೆ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಲಾ ಗುತ್ತಿದೆ. ೨ ದಿನಗಳಲ್ಲೇ ಸುಮಾರು ೨೦ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಧಿಕಾರಿಯೊಬ್ಬರು ಮಾಹಿತಿ ನೀಡಿದರು. ಭದ್ರತೆ ಹಿನ್ನೆಲೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಸ್ತು ವಾಹನಗಳ ಸಂಖ್ಯೆ ಹೆಚ್ಚಿಸಲಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರಾತ್ರಿ ವೇಳೆ ಜನರು ಹೆಚ್ಚಾಗಿ ಸಂಚರಿಸುವುದಿಲ್ಲ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಅಂತಹ ದುರುಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಕುಡಿದು ಪಾರ್ಟಿ ಮಾಡುವವ ರನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.