ಮೈಸೂರು, ಜು. 22(ಆರ್‍ಕೆ)- ನಂಜನಗೂಡಿನ ಜುಬಿಲಂಟ್ ಕಾರ್ಖಾ ನೆಯ ಕಾರ್ಮಿಕರಲ್ಲಿ ಆರಂಭದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕು ತಗುಲಿ ಗುಣಮುಖರಾಗುತ್ತಿದ್ದಂತೆಯೇ ಇದೀಗ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಜೆ.ಕೆಟೈರ್ಸ್ ನೌಕರರಿಗೆ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ.
ಪ್ರತೀ ದಿನ ಸುಮಾರು 50 ರಿಂದ 100 ಮಂದಿ ಕಾರ್ಮಿಕರಿಗೆ ಸೋಂಕು ದೃಢಪಡುತ್ತಿರುವ ಹಿನ್ನೆಲೆ ಯಲ್ಲಿ ಜೆಕೆ ಟೈರ್ಸ್‍ನ ವಿಟಿಪಿ-1 ಹಾಗೂ ಓಟಿಆರ್-111 ಸ್ಥಾವರಗಳಲ್ಲಿ ಜುಲೈ 19ರಿಂದ 23ರವರೆಗೆ ಉತ್ಪಾದನೆ ಸ್ಥಗಿತಗೊಳಿ ಸಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ವಿಕ್ರಮ್ ಹೆಬ್ಬಾರ ಸೂಚನಾ ಫಲಕದಲ್ಲಿ ಮಾಹಿತಿ ನೀಡಿದ್ದಾರೆ.
ಕಾರ್ಮಿಕರಲ್ಲಿ ಕೊರೊನಾ ಸೋಂಕು ದೃಢಪಡುತ್ತಿರುವ ಸಂಖ್ಯೆ ಹೆಚ್ಚಾಗು ತ್ತಿರುವುದರಿಂದ ಆ ಯೂನಿಟ್‍ಗಳ ಕಾರ್ಯ ಸ್ಥಗಿತಗೊಳಿಸಿ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸಲಾಗಿದೆ. ಜೆ.ಕೆ. ಟೈರ್ಸ್‍ನ ಉಳಿದ ವಿಭಾಗಗಳು ಎಂದಿನಂತೆ ಕಾರ್ಯನಿರ್ವ ಹಿಸುತ್ತಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಾಗ್ಯೂ ಕಂಪನಿಯ ವಿವಿಧ ವಿಭಾಗಗಳ ಮುಖ್ಯಸ್ಥರು ದೂರವಾಣಿ ಕರೆ ಮಾಡಿ ಕೆಲಸಕ್ಕೆ ಬರುವಂತೆ ಹೇಳುತ್ತಿದ್ದಾರೆ ಎಂದು ಕಾರ್ಮಿಕರು ‘ಮೈಸೂರು ಮಿತ್ರ’ ಕಚೇರಿಗೆ ದೂರವಾಣಿ ಮಾಡಿ ದೂರಿದ್ದಾರೆ.
ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳ ಮೂಲಕ ಜೆಎಸ್‍ಎಸ್ ಮತ್ತು ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಕಾರ್ಮಿಕರ ಸ್ವ್ಯಾಬ್ ಟೆಸ್ಟ್‍ಗಳನ್ನು ಮಾಡಿಸಿ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಹೋಟೆಲ್‍ಗಳು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕೆಂದು ತಿಳಿಸಲಾಗಿದೆ. ಜಿಲ್ಲಾಡಳಿತದಿಂದ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂಬ ಮಾಹಿತಿಯನ್ನೂ ಜೆ.ಕೆ.ಟೈರ್ಸ್ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಡಿಸಿ ನುಡಿದರು