ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ

ಚಾಮರಾಜನಗರ, ಆ.13-75ನೇ ಸ್ವಾತಂತ್ರ್ಯೋ ತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತದಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.

ಸ್ವಾತಂತ್ರ ಹೋರಾಟಗಾರರಾಗಿರುವ ಚಾಮರಾಜನಗರ ತಾಲೂಕಿನ ಕರಿನಂಜನ ಪುರ ಗ್ರಾಮದ ಕೆ.ಎಂ.ತೋಟಪ್ಪ, ಕಾಗಲ ವಾಡಿ ಗ್ರಾಮದ ಡಿ.ಬಸವಯ್ಯ ಹಾಗೂ ಚಾಮರಾಜನಗರ ಪಟ್ಟಣ ವಾಸಿ ಲಲಿತಾ ಜಿ.ಟಾಗೆಟ್ ಅವರ ನಿವಾಸಗಳಿಗೆ ಜಿಲ್ಲಾಧಿ ಕಾರಿ ಡಾ.ಎಂ.ಆರ್. ರವಿ ಇಂದು ಭೇಟಿ ನೀಡಿ, ಜಿಲ್ಲಾಡಳಿತದಿಂದ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ಮನೆಯಲ್ಲಿ ಕುಳಿತು ಅವರ ಆರೋಗ್ಯ ವಿಚಾರಿಸಿದ ಜಿಲ್ಲಾಧಿ ಕಾರಿ, ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡ ಅನುಭವ ಕುರಿತ ಮಾತುಗಳನ್ನು ಆಲಿಸಿದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಿಲ್ಲೆಯ ಜನರ ಪ್ರತಿಕ್ರಿಯೆ, ಚಳವಳಿ ಕಾವು, ಸೆರೆವಾಸ, ಅಂದಿನ ಪರಿಸ್ಥಿತಿ ಕುರಿತು ಹೋರಾಟಗಾರರು ತಮ್ಮ ಅನುಭವವನ್ನು ಮೆಲುಕು ಹಾಕಿದರು.

ವಿಶೇಷವಾಗಿ ಜಿಲ್ಲೆಯ ಮೂವರು ಸ್ವಾತಂತ್ರ್ಯ ಹೋರಾಟಗಾರರು ವಿದ್ಯಾರ್ಥಿ ದೆಸೆಯಿಂ ದಲೇ ಸ್ವಾತಂತ್ರ್ಯ ಚಳವಳಿಗೆ ತಾವು ಧುಮು ಕಿದ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಹೋರಾ ಟದ ಕಿಚ್ಚು ಕಾರಣವಾಗಲು ಪ್ರೇರೇಪಿತ ವಾದ ಸಂಗತಿಗಳ ಬಗ್ಗೆಯೂ ತಮ್ಮ ಮನ ದಾಳದ ಮಾತುಗಳನ್ನು ಬಿಚ್ಚಿಟ್ಟರು.

ಸ್ವಾತಂತ್ರ್ಯ ಸಂಗ್ರಾಮದ ಜಿಲ್ಲೆಯ ಹೋರಾಟ ನೇತಾರರು ಹಂಚಿಕೊಂಡ ಅನುಭವದ ನುಡಿಗಳನ್ನು ಆಲಿಸಿದ ಬಳಿಕ ಮಾತನಾ ಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ನಿಮ್ಮ ಅನುಭವವೇ ನಮ್ಮೆಲ್ಲರಿಗೂ ಸ್ಪೂರ್ತಿ. ನಿಮ್ಮ ಜೀವನ ಮೌಲ್ಯ ಆದರ್ಶಗಳು ಎಲ್ಲ ರಿಗೂ ಮುನ್ನೆಡೆಯಲು ಸಹಕಾರಿ ಎಂದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಇಂತಹ ಅಮೂಲ್ಯ ವಿಶೇಷ ಸಂದರ್ಭದ ಆಚರಣೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾ ಡಿದ ಜಿಲ್ಲೆಯ ಹಿರಿಯ ಚೇತನ ಹೋರಾಟ ಗಾರರನ್ನು ಸನ್ಮಾನಿಸಿ ಗೌರವಿಸುವುದು ಸರ್ಕಾ ರದ ಉದ್ದೇಶ. ಜಿಲ್ಲೆಯ ಜನರನ್ನು ತಾವು ಹರಸಬೇಕೆಂದು ಜಿಲ್ಲಾಧಿಕಾರಿ ನುಡಿದರು.

ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ಇತರೆ ಮುಖಂಡರು ಈ ಸಂದರ್ಭದಲ್ಲಿದ್ದರು.