ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ಸೇನಾ ಸಮರಾಭ್ಯಾಸದಲ್ಲಿ ಭಾರತ-ಪಾಕಿಸ್ತಾನ!

ನವದೆಹಲಿ:  ರಾಷ್ಟ್ರೀಯವಾಗಿ, ಧಾರ್ಮಿಕ ವಾಗಿ, ಸಾಂಪ್ರದಾಯಿಕವಾಗಿ ಬದ್ಧ ವೈರಿ ರಾಷ್ಟ್ರಗಳಾಗಿರುವ ಪಾಕಿಸ್ತಾನ ಮತ್ತು ಭಾರತ ಜತೆ ಇದೇ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ಸೇನಾ ಸಮರಾಭ್ಯಾಸ ದಲ್ಲಿ ಪಾಲ್ಗೊಳ್ಳಲಿವೆ. ರಷ್ಯಾ ದಲ್ಲಿ ಸೆಪ್ಟೆಂಬರ್‍ನಲ್ಲಿ ವಿವಿಧ ರಾಷ್ಟ್ರಗಳ ಸೇನಾ ಸಮರಾಭ್ಯಾಸ ನಡೆಯಲಿದೆ. ಶಾಂಘೈ ಕಾಪೆರ್Çೀರೇಷನ್ ಈ ಸಮರಾಭ್ಯಾಸವನ್ನು ಆಯೋಜಿಸುತ್ತಿದೆ. ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ. ರಷ್ಯಾದ ಕಣ ವೆ ಪ್ರದೇಶ ಉರಾಲ್ ಬೆಟ್ಟ ಶ್ರೇಣ ಯಲ್ಲಿ ಸೆಪ್ಟೆಂಬರ್‍ನಲ್ಲಿ ಭಯೋತ್ಪಾದನ ವಿರೋಧಿ ಸಮರಭ್ಯಾಸ ನಡೆಯಲಿದ್ದು ಭಾರತ, ರಷ್ಯಾ, ಚೀನಾ, ಪಾಕಿಸ್ತಾನ, ಕಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ತಜಕಿಸ್ತಾನ ರಾಷ್ಟ್ರಗಳು ಈ ಸಮರಾಭ್ಯಾಸ ದಲ್ಲಿ ಪಾಲ್ಗೊಳ್ಳಲಿವೆ. ಕಳೆದ ವಾರ ಬೀಜಿಂಗ್‍ನಲ್ಲಿ ನಡೆದ ಎಸ್ಸಿಒ ರಕ್ಷಣಾ ಸಚಿವ ಸಭೆಯಲ್ಲಿ ಭಾಗಿಯಾಗಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು. ಡೋಕ್ಲಾಂ ವಿವಾದ ನಂತರ ಭಾರತ ಹಾಗೂ ಚೀನಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಹಳಸಿತ್ತು. ಇದೀಗ ಸೇನಾ ಸಮರಾಭ್ಯಸದಿಂದ ಚೀನಾ ಮತ್ತು ಭಾರತ ನಡುವೆ ಮತ್ತೇ ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ.