ಅಮೆರಿಕಾದಲ್ಲಿ ಕೈಗಾರಿಕೆ ಸ್ಥಾಪಿಸಲು ಭಾರತೀಯರಿಗೆ ಉತ್ತಮ ಅವಕಾಶವಿದೆ

ಮೈಸೂರು:  ಅಮೇರಿಕಾದಲ್ಲಿ ಭಾರತೀಯರು ಕೈಗಾರಿಕೆ ಸ್ಥಾಪ ನೆಗೆ ಉತ್ತಮ ವಾತಾವರಣವಿದೆ ಎಂದು ಇಂಡಿಯನ್-ಅಮೇರಿಕನ್ ಛೇಂಬರ್ಸ್ ಆಫ್ ಕಾಮರ್ಸ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಕೆ.ವಿ.ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಖಾಸಗಿ ಹೊಟೇಲ್‍ನಲ್ಲಿ ಶನಿವಾರ ಅನಿವಾಸಿ ಭಾರತೀಯರು (ಕನ್ನಡಿಗರು) `4ನೇ ನಾವಿಕೋತ್ಸವ’ ವಿಶ್ವ ಕನ್ನಡ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ `ಬಿಸಿನೆಸ್ ಫೋರಮ್’ನಲ್ಲಿ ಮಾತನಾ ಡಿದ ಅವರು, ಅಮೇರಿಕಾದಲ್ಲಿ ಪ್ರಸ್ತುತ ಚೀನಾದ ಉತ್ಪನ್ನಗಳ ಟ್ರೆಂಡ್ ಇದೆ. ಇದೀಗ ಚೀನಾವನ್ನು ಹಿಂದಿಕ್ಕುವ ಅವಕಾಶ ಒದಗಿ ಬಂದಿದೆ. ಭಾರತೀಯ ಕೈಗಾರಿಕೋದ್ಯಮಿಗಳು ಅಮೇರಿಕಾದಲ್ಲಿ ಉದ್ಯಮ ಆರಂಬಿಸಲು ಉತ್ತಮವಾದ ವಾತಾವರಣವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಲು ನಾವೆಲ್ಲಾ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಜಾತಿ, ಧರ್ಮ ಎಂಬ ಭೇದಭಾವವನ್ನು ಬದಿ ಗೊತ್ತಿ, ಒಗ್ಗಟ್ಟಾಗಿ ಪ್ರಯತ್ನಿಸಿದರೆ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ಎನ್‍ಆರ್‍ಐ ಫೋರಮ್ ಸದಸ್ಯ ಕಾರ್ಯದರ್ಶಿ ಕೆ.ಮುರುಳೀಧರ ಮಾತನಾಡಿ, ಅಮೇ ರಿಕಾದ ಭಾರತೀಯರು (ಅನಿವಾಸಿ) ಕರ್ನಾಟಕದಲ್ಲಿಯೂ ವಿವಿಧ ಉದ್ಯಮಗಳನ್ನು ಸ್ಥಾಪಿಸಲು ವಿಫುಲವಾದ ಅವಕಾಶವಿದೆ. ಹೊಸದಾಗಿ ಕೈಗಾರಿಕೆ ಆರಂಭಿಸುವವರು ರಾಜಧಾನಿ ಬೆಂಗಳೂರಿನ ಸುತ್ತ ಗಿರಕಿ ಹೊಡೆಯುತ್ತಾರೆ. ಆದರೆ ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ. ಇದೀಗ ಕೈಗಾರಿಕೋದ್ಯಮಿಗಳು ಬೆಂಗಳೂರನ್ನು ಹೊರತು ಪಡಿಸಿ ಮೈಸೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕು. ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಶೇ.50ರಷ್ಟು ಸಬ್ಸಿಡಿ ದೊರೆಯುತ್ತದೆ. ಕೆಲವು ಉದ್ಯಮಗಳಿಗೆ ಶೇ.90ರಷ್ಟು ಸಬ್ಸಿಡಿ ಸಿಗುತ್ತದೆ. ಈ ಸಬ್ಸಿಡಿ ಸದುಪಯೋಗ ಮಾಡಿಕೊಂಡು ಬೆಂಗಳೂರು ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಲ್ಲಿ ಉದ್ಯಮ ಆರಂಭಿಸುವಂತೆ ಅವರು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಮಹಾದೇವಪ್ಪ ಮಾತನಾಡಿ, ವಿಜ್ಞಾನ-ತಂತ್ರಜ್ಞಾನವನ್ನು ಕೃಷಿ ಕ್ಷೇತ್ರದಲ್ಲಿಯೂ ಅಳವಡಿಸಿಕೊಂಡು, ರೈತ ರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ನಮ್ಮಲ್ಲಿ ನೈಸ ರ್ಗಿಕ ಸಂಪತ್ತು ಹೇರಳವಾಗಿ ದೊರೆಯು ತ್ತದೆ. ಅವುಗಳ ಸದುಪಯೋಗಪಡಿಸಿ ಕೊಂಡು ಕೃಷಿ ಅವಲಂಬಿತ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು. ವೇದಿಕೆ ಕಾರ್ಯ ಕ್ರಮದ ನಂತರ ಮಧ್ಯಾಹ್ನದವರೆಗೂ ತಂತ್ರ ಜ್ಞಾನ ಬಳಕೆ, ಕರ್ನಾಟಕದಲ್ಲಿ ಕೈಗಾರಿಕೆ ಗಳ ಸ್ಥಾಪನೆ, ಅಮೇರಿಕಾದಲ್ಲಿ ಕೈಗಾರಿಕೆಗಳ ಸ್ಥಾಪನೆ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಮತ್ತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ನಾವಿಕ ಸಂಸ್ಥೆಯ ಅಧ್ಯಕ್ಷ ಸುರೇಶ್ ರಾಮಚಂದ್ರ, ಸಂಚಾ ಲಕ ಪ್ರಕಾಶ್, ದೀಪಕ್ ಸೂದ್, ಬಿಸಿನೆಸ್ ಫೋರಮ್ ಕಾರ್ಯಕ್ರಮದ ಸಂಚಾಲಕ ರಾದ ಸ್ಮೃತಿ ಮನೋಜ್, ಗಿರೀಶ್ ನಿಂಬೇ ಕಾಯಿ ಇನ್ನಿತರರು ಪಾಲ್ಗೊಂಡಿದ್ದರು. ಸುಮಾರು 120 ಹೆಚ್ಚು ಮಂದಿ ಕಾರ್ಯ ಕ್ರಮದಲ್ಲಿ ಭಾಗವಹಿಸಿ, ಕೈಗಾರಿಕೆಗಳ ಸ್ಥಾಪ ನೆಗೆ ಪೂರಕವಾದ ಮಾಹಿತಿ ಪಡೆದು ಕೊಂಡರು. ಭಾನುವಾರ ಕಲಾಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ..