ಕಸದಿಂದ ಸಾಂಕ್ರಾಮಿಕ ರೋಗ ಭೀತಿ: ನಿವಾಸಿಗಳ ಪ್ರತಿಭಟನೆ

ಮೈಸೂರು, ಸೆ.22(ಆರ್‍ಕೆಬಿ)- ಮೈಸೂ ರಿನ ಮಹದೇವಪುರ ಬಡಾವಣೆಯಲ್ಲಿ ಕಸದ ರಾಶಿ ಕೊಳೆತು, ಕೊರೊನಾ ಸಾಂಕ್ರಾ ಮಿಕ ರೋಗ ಹರಡಲು ಒತ್ತಾಸೆಯಾಗಿ ದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲವೆಂದು ಆರೋಪಿಸಿ ಮಾನಂದವಾಡಿ ರಸ್ತೆಯ ಮಹದೇವಪುರ ಬಡಾವಣೆಯ ನಿವಾಸಿಗಳು ಇಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜನಸಾಮಾನ್ಯರು ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ಪೌರ ಕಾರ್ಮಿಕರನ್ನು ಕೇಳಿದರೆ ನಮಗೆ ಕಸ ತೆಗೆ ಯಲು ಅಧಿಕಾರಿಗಳಿಂದ ಸೂಚನೆ ಇಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು.

ಶ್ರೀರಾಂಪುರ ಪಟ್ಟಣ ಪಂಚಾಯಿತಿ ಯಾಗಿ ಮೇಲ್ದರ್ಜೆಗೇರಿದೆ. ಈಗ ನಾವು ಯಾರನ್ನು ಕೇಳಬೇಕು. ನಮ್ಮ ಗೋಳು ಕೇಳುವವರ್ಯಾರು? ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಯಾರಿಂ ದಲೂ ಯಾವ ಮಾಹಿತಿಯೂ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಸಂಬಂಧಿಸಿದವರು ತಕ್ಷಣವೇ ಕಸದ ರಾಶಿಯನ್ನು ತೆಗೆಸಲು ಮುಂದಾಗದಿದ್ದರೆ ನಿವಾಸಿಗಳು ಅನಿವಾರ್ಯವಾಗಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕಸ್ತೂರಿ ಕನ್ನಡ ಸಂಘದ ಸಂಚಾಲಕ ಕಬಿನಿ ಗೌಡ, ಗ್ರಾಪಂ ಮಾಜಿ ಸದಸ್ಯರಾದ ಶ್ರೀಕಂಠ, ಮಹದೇವ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಸಚ್ಚಿನ್, ಕಿರಣ್, ಚೆಲುವರಾಜ್, ನಾಗರಾಜ್, ಸುರೇಶ್, ಚಂದ್ರು, ಶಿವು, ಕಣ್ಣನ್, ನವೀನ್ ಇನ್ನಿತರರು ಭಾಗವಹಿಸಿದ್ದರು.