ಯಕ್ಷಗಾನದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಿ

`ಯಕ್ಷಗಾನ ನಾಟ್ಯ ತರಗತಿ’ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಸದಸ್ಯ ದಿವಾಕರ್ ಹೆಗಡೆ ಸಲಹೆ
ಮೈಸೂರು,ಡಿ.27(ವೈಡಿಎಸ್)-ಯಕ್ಷಗಾನ ಕೇವಲ ಪ್ರದರ್ಶನಕ್ಕೆ ಸೀಮಿತವಾಗದೇ ಅದ ರಲ್ಲಿರುವ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಯಕ್ಷಗಾನ ಅಕಾ ಡೆಮಿ ಸದಸ್ಯ ದಿವಾಕರ್ ಹೆಗಡೆ ಹೇಳಿದರು. ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಕರಾವಳಿ ಯಕ್ಷಗಾನ ಕೇಂದ್ರ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಯಕ್ಷಗಾನ ನಾಟ್ಯ ತರಗತಿ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯಕ್ಷ ಗಾನದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕೆಲಸವನ್ನು ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರ ಮಾಡಿಕೊಂಡು ಬರುತ್ತಿದೆ. ಕರ್ನಾಟಕದಲ್ಲಿ ಪ್ರಾತಿನಿಧಿಕ ಕಲೆ ಎನಿಸಿಕೊಂಡಿ ರುವ ಯಕ್ಷಗಾನ ನಮ್ಮ ರಕ್ತದಲ್ಲಿ ಹರಿದು ಬಂದಿದೆ. ನಾವು ಎಲ್ಲಿ ಹೋದರೂ ಯಕ್ಷಗಾನ ವನ್ನು ಯಜ್ಞದಂತೆ ನಡೆಸುತ್ತೇವೆ. ಯಕ್ಷಗಾನ ಅತ್ಯಂತ ಆತ್ಮನಿರ್ಭರವಾದ ಕಲೆ ಎಂದರು.

ಮಕ್ಕಳಿಗೆ ಮೊಬೈಲ್ ನೀಡಬೇಡಿ ಎಂದು ಹೇಳುತ್ತಿದ್ದರು. ಆದರೆ, ಪ್ರಸ್ತುತ ಮೊಬೈಲ್ ನೀಡಿ ಅಭ್ಯಾಸ ಮಾಡಿಸುವ ಸ್ಥಿತಿ ಬಂದಿದೆ. ಮಕ್ಕಳಿಗೆ ಯಕ್ಷಗಾನದ ಎಲ್ಲಾ ಸಂಗತಿಗಳನ್ನು ತೋರಿಸಿ ಯಕ್ಷಗಾನದಲ್ಲಿ ಹೆಚ್ಚು ಶಿಕ್ಷಿತರನ್ನಾಗಿಸುವ ಸಾಧ್ಯತೆ ಇದ್ದು, ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.

ಯಕ್ಷಗಾನ ಚಿಂತಕ ಜಿ.ಎಸ್.ಭಟ್ ಮಾತನಾಡಿ, ಯಕ್ಷಗಾನಕ್ಕೂ ಮೈಸೂರಿಗೂ ಅವಿನಾ ಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಧರ್ಮಸ್ಥಳದಿಂದ ಯಕ್ಷಗಾನ ಕಲಾವಿದರನ್ನು ಮೈಸೂರಿಗೆ ಕರೆಸಿ ಪ್ರದರ್ಶನ ಏರ್ಪಡಿಸಿದ್ದರು. ನಾನೂ ಮೈಸೂ ರಿನಲ್ಲಿ ನೆಲೆಸಿ 50 ವರ್ಷವಾಗಿದ್ದು, ಅಂದಿನಿಂದ ಪ್ರತಿವರ್ಷ 2 ಯಕ್ಷಗಾನ ಪ್ರದರ್ಶಿಸಿ ಕೊಂಡು ಬರುತ್ತಿದ್ದೇವೆ ಎಂದರು. ವಿದ್ಯಾರ್ಥಿಗಳು ಸಂಸ್ಕಾರÀವಂತರಾಗಲು ಯಕ್ಷಗಾನದಿಂದ ಸಾಧ್ಯ. ಈ ಕಲೆಯನ್ನು ಕರಾವಳಿ ಮಾತ್ರವಲ್ಲದೆ ಹಳೇ ಮೈಸೂರು ಭಾಗದ ವಿದ್ಯಾರ್ಥಿ ಗಳೂ ಕಲಿಯಬೇಕು. ವಿದ್ಯಾರ್ಥಿ ದಿಸೆಯಲ್ಲೇ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆದರೆ ಮುಂದಿನ ದಿನಗಳಲ್ಲಿ ಖಂಡಿತಾ ಕಲಿಯುತ್ತಾರೆ ಎಂದು ಅಭಿಪ್ರಾಯಪಟ್ಟರು. ಕೇಂದ್ರದ ಬುಡಗುತಿಟ್ಟು ಗುರುಗಳಾದ ಮನೋಜ್ ಭಟ್ ಮತ್ತಿತರರು ಉಪಸ್ಥಿತರಿದ್ದರು.