ತಿ.ನರಸೀಪುರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ತಿ.ನರಸೀಪುರ, ಮಾ.9(ಎಸ್‍ಕೆ)- ಮಹಿಳೆಯರಿಗೆ ಪ್ರೋತ್ಸಾಹ, ಗೌರವ ನೀಡಿ ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ವಾಗಲು ಸಾಧ್ಯ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಮಹದೇಶ್ವರ ಭವನದಲ್ಲಿ ಭಾನುವಾರ ಸಂಜೀವಿನಿ ಗ್ರಾಮ ಪಂಚಾ ಯಿತಿ ಮಟ್ಟದ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಮಹಿಳೆ ಯರು ಆರ್ಥಿಕ, ರಾಜಕೀಯ, ಸಾಮಾ ಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ದೇಶದ ಪ್ರಗತಿಯ ಸಂಕೇತವಾಗಿದೆ ಎಂದರು.

ಸ್ವಾತಂತ್ರ ಬರುವ ಮುನ್ನ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನ ಜಾರಿ ಗೊಂಡ ಬಳಿಕ ಮಹಿಳೆಗೆ ಸಮಾನತೆ, ಮತದಾನದ ಹಕ್ಕು ದೊರಕಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಂಘ-ಸಂಸ್ಥೆಗಳ ಮೂಲಕ ಉಳಿತಾಯ ಮನೋ ಭಾವ ಮೂಡಿದೆ. ಸಂಜೀವಿನಿ ಸಂಘಟನೆ ಒಗ್ಗಟ್ಟಾಗಿದೆ. ಸಂಘದ ವತಿಯಿಂದ ಯಾವುದೇ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಮಾರಾಟ ಮಾಡಿದರೆ ಆರ್ಥಿಕವಾಗಿ ಸಬಲ ರಾಗಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇ ಶಕಿ ಸುಶೀಲ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಜಿಪಂ ಸದಸ್ಯರಾದ ಮಂಗಳಮ್ಮ, ಜಯಪಾಲ್ ಭರಣಿ, ತಾಪಂ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ಸುಂದರಮ್ಮ, ಕಾರ್ಯನಿರ್ವ ಹಣಾ ಅಧಿಕಾರಿ ಜೆರಾಲ್ಡ್ ರಾಜೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಕ್ಕೂರು ಗಣೇಶ್, ಸಾಜಿದ್ ಅಹಮದ್, ರಾಮಲಿಂಗಯ್ಯ, ಎಂ.ರಮೇಶ್, ಶಿವಮ್ಮ ಮತ್ತಿತರರಿದ್ದರು.