ಮೈಸೂರು ರೈಲ್ವೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಮೈಸೂರು, ಜೂ.21(ಆರ್‍ಕೆಬಿ)- ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ `ಯೋಗದೊಂದಿಗೆ ಇರಿ, ಮನೆಯಲ್ಲೇ ಇರಿ’ ಘೋಷಣೆಯೊಂದಿಗೆ ಯೋಗ ದಿನವನ್ನು ಆಚರಿಸಲಾಯಿತು.

ಚಾಮುಂಡಿ ಅಧಿಕಾರಿಗಳ ಅತಿಥಿಗೃಹ ದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‍ವಾಲ್ ಪತಂಜಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿ, ರೈಲ್ವೆ ನೌಕರರು ಮತ್ತು ಕುಟುಂಬ ಸದಸ್ಯರಿಗೆ ನಿಯಮಿತವಾಗಿ ಯೋಗಾ ಭ್ಯಾಸ ಮಾಡುವಂತೆ ಸಲಹೆ ನೀಡಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವ ಸ್ಥಾಪಕ ಎ.ದೇವಸಹಾಯಂ, ಹೆಚ್ವುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಇನ್ಫ್ರಾ ಮತ್ತು ಕಾರ್ಯಾಚರಣೆ) ಬಿ.ಶ್ರೀನಿ ವಾಸುಲು ಇನ್ನಿತರರು ಉಪಸ್ಥಿತರಿದ್ದರು.

ಮೈಸೂರು ವಿಭಾಗವು ಗೆಜೆಟೆಡ್ ಅಲ್ಲದ ಸಿಬ್ಬಂದಿಗಳಲ್ಲಿ ಉತ್ಸಾಹ ತುಂಬಿ ಉತ್ತೇ ಜಿಸಲು ಅತ್ಯುತ್ತಮ ಯೋಗ ಭಂಗಿ ಕುರಿತು ಛಾಯಾಗ್ರಹಣ ಸ್ಪರ್ಧೆ ಆಯೋಜಿಸಿದೆ. ಈ ಕುರಿತ ಮಾಹಿತಿಯನ್ನು ಮೈಸೂರು ವಿಭಾಗದ ವೆಬ್‍ಸೈಟ್ ಮತ್ತು ಫೇಸ್ ಬುಕ್‍ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.