ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನವನ್ನು ಸರ್ಕಾರವೇ ಆಚರಿಸುವುದು ಅವಶ್ಯ

ಮೈಸೂರು, ಜ.28(ಆರ್‍ಕೆಬಿ)- ಭಾರತೀಯ ಸೈನಿಕರ ಸ್ಫೂರ್ತಿಯಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನವನ್ನು ಪ್ರತೀ ವರ್ಷ ಸರ್ಕಾರದಿಂದಲೇ ಆಚರಿಸುವಂತಾಗಬೇಕು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122ನೇ ಜನ್ಮ ದಿನಾಚರಣೆ ಅಂಗವಾಗಿ ಮೈಸೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತ (ಮೆಟ್ರೊ ಪೋಲ್ ವೃತ್ತ)ದಲ್ಲಿ ಮೈಸೂರಿನ ವೀರ ಸಾವರ್ಕರ್ ಯುವ ಬಳಗÀದ ವತಿಯಿಂದ ಗುರುವಾರ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ವತಿಯಿಂದ ರಾಜ್ಯದ ಮೂಲೆ ಮೂಲೆಯಲ್ಲೂ, ಶಾಲಾ-ಕಾಲೇಜುಗಳಲ್ಲೂ ಕಾರ್ಯಪ್ಪ ಅವರ ಜನ್ಮದಿನ ಆಚರಿಸುವಂತಾದರೆ ಅವರಿಗೆ ನಾವು ನಿಜವಾದ ಗೌರವ ಸಲ್ಲಿಸಿದಂತಾ ಗುತ್ತದೆ ಎಂದು ಸಲಹೆ ನೀಡಿದರು.

ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ ಕುಮಾರ್ ಗೌಡ ಮಾತನಾಡಿ, ದೇಶದಲ್ಲಿ ಸೈನಿಕರಿಗೆ ವಿಶೇಷ ಗೌರವವಿದೆ. ದೇಶದ ಪ್ರಧಾನಿಗಳಾಗಿ ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಜೊತೆಗೆ ಇಡೀ ವಿಶ್ವ ದಲ್ಲೇ ಭಾರತದ ಸೈನ್ಯಕ್ಕೆ ಅತ್ಯುನ್ನತ ಸ್ಥಾನ ಕಲ್ಪಿಸಿ ಕೊಟ್ಟಿದ್ದಾರೆ. ಅಲ್ಲದೆ ದೇಶದ ಸೈನಿಕರಿಗೆ ಅಪಾರ ಗೌರವ ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ನಗರಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ ಮಾತ ನಾಡಿ, ಕೆ.ಎಂ.ಕಾರ್ಯಪ್ಪ ಅವರಿಗೆ ನಾವು ಸಲ್ಲಿಸುವ ಗೌರವ ಇಡೀ ದೇಶದ ಸೈನಿಕರಿಗೆ ಸಲ್ಲುತ್ತದೆ. ಮೊದಲನೇ ದಂಡನಾಯಕನ ಆದರ್ಶವನ್ನು ಎಲ್ಲರೂ ಅನುಸರಿಸ ಬೇಕು. ದೇಶಭಕ್ತಿ ಮೂಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ರೇಣುಕಾ ರಾಜ್, ಬಳಗದ ಸಂಚಾಲಕ ವಿಕ್ರಮ್ ಅಯ್ಯಂಗಾರ್, ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಅಧ್ಯಕ್ಷ ಪರಮೇಶ್‍ಗೌಡ, ಬಿಜೆಪಿ ಮಾಧ್ಯಮ ಪ್ರಮುಖ್ ಪ್ರದೀಪ್‍ಕುಮಾರ್, ಮುಖಂಡರಾದ ಕುಮಾರ್‍ಗೌಡ, ಅಜಯ್ ಶಾಸ್ತ್ರಿ, ಚಕ್ರಪಾಣಿ, ಎಸ್.ಎನ್.ರಾಜೇಶ್, ಲೋಹಿತ್, ರವಿ ಕುಂಚಿಟಿಗ, ಹರೀಶ್‍ನಾಯ್ಡು, ಮಧು ಎನ್. ಪೂಜಾರ್, ಗುರುರಾಜ್ ಶೆಟ್ಟಿ, ಆನಂದ್, ಶಿವ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು