ಜಮ್ಮು-ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂದು ಮಾಡಿ ತೋರಿಸಿದವರು ಮೋದಿ

ಮೈಸೂರು, ಫೆ.12(ಆರ್‍ಕೆಬಿ)- ಜಮ್ಮು- ಕಾಶ್ಮೀರವನ್ನು ಭಾರತದ ಉಳಿದ ಭಾಗ ಗಳೊಂದಿಗೆ ಸಂಯೋಜಿಸಲು 370ನೇ ವಿಧಿಯನ್ನು ತೆಗೆದು ಹಾಕಲಾಯಿತು. ಇದರ ನಂತರ, ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನವನ್ನು ಕೇಂದ್ರಾಡಳಿತ ಪ್ರದೇ ಶಕ್ಕೆ ಬದಲಾಯಿಸಲಾಯಿತು. ಭಾರತದ ರಾಷ್ಟ್ರಪತಿಗಳು ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನುಷ್ಠಾನ) ಆದೇಶ, 2019 ಅನ್ನು 5 ಆಗಸ್ಟ್ 2019ರಂದು ಹೊರಡಿಸಿ ದರು. ಭಾರತೀಯ ಸಂವಿಧಾನದ 370ನೇ ವಿಧಿಯ ಷರತ್ತು (1)ರ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ಪೂರ್ವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿ ಸುವ ಮೂಲಕ ಜಮ್ಮು-ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂಬುದನ್ನು ಮಾಡಿ ತೋರಿಸಿದವರು ಪ್ರಧಾನಿ ನರೇಂದ್ರ ಮೋದಿ ಎಂದು ವಕೀಲ, ಸಾಂಸ್ಕøತಿಕ ಚಿಂತಕ ಸಿ.ವಿ.ಕೇಶವಮೂರ್ತಿ ತಿಳಿಸಿದರು.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆ ಯಲ್ಲಿರುವ ದಿ ಅನಾಥಾಲಯದ ಅನ್ನ ಪೂರ್ಣ ಸಭಾಂಗಣದಲ್ಲಿ ತಾತಯ್ಯ ಸ್ಮರ ಣಾರ್ಥ ಉಪನ್ಯಾಸ ಮಾಲೆಯಲ್ಲಿ `ಸಂವಿ ಧಾನದ ಹಂದರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಗಳು’ ಕುರಿತು ಅವರು ಮಾತನಾಡಿದರು. ಜಮ್ಮು-ಕಾಶ್ಮೀರ ದೇಶದ ಭಾಗವಾಗಲಿಲ್ಲ. ಇದಕ್ಕೆ ನೆಹರು ಕಾರಣ. ಜಮ್ಮು-ಕಾಶ್ಮೀರ ಸೇರಿದಂತೆ ತುಂಡು ತುಂಡಾಗಿದ್ದ ದೇಶೀಯ ಸಂಸ್ಥಾನಗಳನ್ನು ಒಂದುಗೂಡಿಸಿದವರು ಸರ್ದಾರ್ ವಲ್ಲಭ ಬಾಯಿ ಪಟೇಲ್. ಅಂದಿನ ಪ್ರಧಾನಿ ಜವಾ ಹರ್‍ಲಾಲ್ ನೆಹರು ಮಾಡದ ಕೆಲಸವನ್ನು ಪಟೇಲರು ಮಾಡಿದರು. ಇತ್ತೀಚೆಗೆ ಸಂವಿ ಧಾನದ 370ನೇ ವಿಧಿಯನ್ನು ರದ್ದು ಪಡಿಸಿ, ಜಮ್ಮು-ಕಾಶ್ಮೀರವನ್ನು ಉಳಿಸಿ ಕೊಳ್ಳಲು ಸಾಧ್ಯ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ದಲ್ಲಿ ನೀಡಿದ್ದ ಪ್ರಣಾಳಿಕೆಯಲ್ಲಿ ನಮ್ಮ ಆಳ್ವಿಕೆ ಯಲ್ಲಿ ಭಾಷಾವಾರು ಪ್ರಾಂತ್ಯ ಮಾಡುತ್ತೇವೆ ಎಂದಿತ್ತು. ಹಾಗಾಗಿ ಕನ್ನಡ, ತೆಲುಗು, ತಮಿಳು ಸೇರಿದಂತೆ ಭಾಷಾವಾರು ಪ್ರಾಂತ್ಯದ ಕೂಗೆದ್ದಿತು. ಅದಕ್ಕೆ ನೆಹರು ನೇಮಕ ಮಾಡಿದ ಸಮಿತಿ ಭಾಷಾ ಪ್ರಾಂತ್ಯ ರಚನೆ ಸೂಕ್ತವಲ್ಲ ಎಂಬ ವರದಿ ನೀಡಿತ್ತು. ಆ ನಂತರ ಭಾಷಾವಾರು ಪ್ರಾಂತ್ಯ ರಚನೆ ಹೋರಾಟ ತೀವ್ರವಾದಾಗ ಹೊಸ ಆಯೋಗ ರಚಿಸಲಾಯಿತು. ಅದರ ವರದಿ ಪ್ರಕಾರ ಭಾಷಾವಾರು ಪ್ರಾಂತ್ಯ ರಚನೆ ಮಾಡಲಾ ಯಿತು. ಇದರಿಂದ ಹೊಸ ಹೊಸ ಸಮಸ್ಯೆ ಗಳು ಉದ್ಭವವಾಗತೊಡಗಿತು. ಅದರ ಫಲವೇ ಕರ್ನಾಟಕ-ತಮಿಳುನಾಡು ನಡು ವಿನ ಕಾವೇರಿ ವಿವಾದ. ಇಂತಹ ಹತ್ತಾರು ಸಮಸ್ಯೆಗಳು ಉಂಟಾದವು ಎಂದರು.

ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆಯಿತೇ ಹೊರತು ನಾವೆಲ್ಲರೂ ಒಂದೇ ಧ್ವಜ, ಇರುವುದೊಂದು ಭಾರತ. ನಮಗೆಲ್ಲರಿಗೂ ಇರುವುದು ಒಂದೇ ಪೌರತ್ವ. ದೇಶದಲ್ಲಿ ರಾಷ್ಟ್ರಪತಿ, ಪ್ರಧಾನಿ ಆಡಳಿತ. ರಾಜ್ಯಪಾಲರನ್ನು ರಾಷ್ಟ್ರಪತಿಗಳೇ ನೇಮಕ ಮಾಡುತ್ತಾರೆ. ಹಾಗಾಗಿ ರಾಜ್ಯದಲ್ಲಿ ಕೇಂದ್ರದ ಪ್ರತಿನಿಧಿಯಾಗಿ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಾರೆ. ಇವೆಲ್ಲವೂ ಸಂವಿಧಾನದಿಂದ ಸಾಧ್ಯವಾಯಿತು ಎಂದು ಕೇಶವಮೂರ್ತಿ ತಿಳಿಸಿದರು.

ಈ ನಡುವೆ ದೇಶ ವಿರೋಧಿ ಭಾವನೆ ಬಿತ್ತುವ ಹಾಗೂ ಕಾನೂನು ಪ್ರಕಾರ ರಚಿತವಾದ ಸರ್ಕಾರವನ್ನು ಬುಡಮೇಲು ಮಾಡುವ ಯತ್ನಗಳು ನಡೆದರೆ, ಅಂಥ ವುಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರದ ಕೆಲಸ. ಸಂವಿಧಾನದ 355ನೇ ವಿಧಿ ಪ್ರಕಾರ ಒಕ್ಕೂಟದ ಕರ್ತ ವ್ಯವು ಪ್ರತಿ ರಾಜ್ಯವನ್ನು ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಡಚಣೆಯಿಂದ ರಕ್ಷಿ ಸಲು ಮತ್ತು ಪ್ರತಿ ರಾಜ್ಯದ ಸರ್ಕಾರವು ನಿಬಂಧನೆಗಳಿಗೆ ಅನುಸಾರವಾಗಿ ನಡೆಸಲ್ಪ ಡುತ್ತದೆ ಎಂಬುದು ಒಕ್ಕೂಟದ ಕರ್ತವ್ಯ ವಾಗಿರುತ್ತದೆ. ಪ್ರತಿಯೊಂದು ರಾಜ್ಯ ಸರ್ಕಾರ ಒಂದು ಸಂವಿದಾನದದಲ್ಲಿ ಅಡಕವಾಗಿ ರುವ ನಿಯಮಗಳಡಿ ಕೆಲಸ ನಿರ್ವಹಿಸ ಬೇಕು. ಇದು ಸಂವಿಧಾನದ ಹಂದರ. ಭಾಷಾವಾರು ಪ್ರಾಂತ್ಯ ಅಂದಾಕ್ಷಣ ನಾವು ಬೇರೆ ಆಗುವುದಿಲ್ಲ. ಎಲ್ಲರೂ ಭಾರತೀ ಯರೇ ಆಗಿರುತ್ತೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಎಸ್‍ಎಸ್ ಯೋಗ ಫೌಂಡೇಶನ್‍ನ ವ್ಯವಸ್ಥಾಪಕ ಟ್ರಸ್ಟಿ ಡಿ.ಶ್ರೀಹರಿ ಮಾತನಾಡಿ, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಗರದ ರಕ್ಷಣೆಗಾಗಿ 2 ಲಕ್ಷ ಜನರನ್ನು ಒಳಗೊಂಡ `ಅಲರ್ಟ್ ಸಿಟಿಜನ್ ಟೀಮ್’ ಸಿದ್ಧಗೊಳಿಸಿದ್ದೇವೆ. ಮೈಸೂರಿನ ರಕ್ಷಣೆ ಮತ್ತು ಸುರಕ್ಷತೆಯ ಪ್ರಚಾರಕ್ಕೆ ಒಂದು ಲಕ್ಷ ಶಾಲಾ ವಿದ್ಯಾರ್ಥಿಗಳ ಸೇನೆ ತಯಾರುಗೊಳಿಸಿದ್ದೇವೆ ಎಂದರು.

ದೇಶವಿರೋಧಿ ಶಕ್ತಿಗಳು ನಗರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಬಯಸಿದರೆ, ಅದಕ್ಕೆ ಹೆಚ್ಚಿನ ಶ್ರಮ ಬೇಕಿಲ್ಲ. ಡಿಡಿಗೆ ಗುಂಡು ಹೊಡೆದು, ಪೊಲೀಸ್ ಆಯುಕ್ತ ಕಚೇರಿಯನ್ನು ವಶಪಡಿಸಿಕೊಂಡರೆ ಸಾಕು. ಇಂತಹ ಪರಿಸ್ಥಿತಿ ಬರಬಾರದು ಎಂದರೆ ನಾವು ಸದಾ ಒಗ್ಗಟ್ಟಿನಿಂದ ಸನ್ನದ್ಧರಾಗಿರು ವುದು ಮುಖ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ನಮ್ಮ ಭವಿಷ್ಯ, ಜೊತೆಗೆ ಅವರೇ ನಮಗೆ ಪ್ರಸ್ತುತ. ಹಿರಿ ಯರ ಅನುಭವಯುಕ್ತ ಸಲಹೆಗಳನ್ನು ಸ್ವೀಕ ರಿಸುವ ಹಾಗೂ ಜವಾಬ್ದಾರಿ ಹೊರಲು ಅವರು ಜಾತಿ ಭೇದ ತೊರೆದು ಸಿದ್ಧರಿರ ಬೇಕು. ಹಿಂದುಳಿದ ಜಾತಿಯಿಂದ ಬಂದ ಪ್ರಧಾನಿ ಮೋದಿ ಅವರ ಗುರಿ ಮತ್ತು ಉದ್ದೇಶ ಶ್ರೇಷ್ಠವಾಗಿತ್ತು. ಆಸೆ ಆಮಿಷಕ್ಕೆ ಬಲಿಯಾ ದರೆ ಮತ್ತೊಮ್ಮೆ ದಾಸ್ಯಕ್ಕೆ ಒಳಗಾಗಬೇ ಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ಅನಾಥಾಲಯ ಆಡಳಿತ ಮಂಡಳಿ ಅಧ್ಯಕ್ಷ ಗೋಪಿನಾಥ್, ಸದಸ್ಯ ಡಾ.ಸತ್ಯನಾರಾಯಣ ಉಪಸ್ಥಿತರಿದ್ದರು.