ಸೆ.1ರ ಅರಣ್ಯಾಧಿಕಾರಿಗಳ ಸಭೆಯಲ್ಲಿ ಜಾಗೇರಿ ಸಮಸ್ಯೆ ಚರ್ಚೆ

ಕೊಳ್ಳೇಗಾಲ, ಆ.27(ನಾಗೇಂದ್ರ)-ಜಾಗೇರಿ ವ್ಯಾಪ್ತಿಯ ಬೂದುಗಟ್ಟೆ ದೊಡ್ಡಿ ಹಾಗೂ ಇನ್ನಿತರ ಗ್ರಾಮಗಳ ಜನರ ಸ್ಥಿತಿ ಗತಿ, ಅರಣ್ಯ ಇಲಾಖೆ ಕೈಗೊಂಡ ಕ್ರಮ ಹಾಗೂ ನಿವಾಸಿಗಳ ವಾಸ್ತವ ಸ್ಥಿತಿ ಕುರಿತು ಸೆ.1ರಂದು ಬೆಂಗಳೂರು ಅರಣ್ಯ ಭವನ ದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವುದಾಗಿ ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು.

ಶುಕ್ರವಾರ ಕೆ.ಗುಡಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಶಾಸಕ ನರೇಂದ್ರ ಅವರ ಜೊತೆ ಚರ್ಚಿಸಿದ ಸಚಿವರು, ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

ಶಾಸಕ ನರೇಂದ್ರ ಮಾತನಾಡಿ, ಜಾಗೇರಿ ವ್ಯಾಪ್ತಿಯಲ್ಲಿನ ಬೂದುಗಟ್ಟೆ ದೊಡ್ಡಿಯ ಲ್ಲಿನ ನಿವಾಸಿಗಳು ಕಳೆದ 60, 70 ವರ್ಷ ಗಳಿಂದಲೂ ಸಹ ಮನೆ ನಿರ್ಮಿಸಿಕೊಂಡು ವ್ಯವಸಾಯ ಮಾಡುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಹಾಗಾಗಿ ಅವರ ಸುಪರ್ದಿ ಯಲ್ಲಿರುವ ಸರ್ವೆ ನಂ. 174ರ 350 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ಡೀಮ್ಡ್ ಫಾರಿಸ್ಟ್ ನಿಂದ ಕೈಬಿಡಲು ಸರ್ಕಾರ ಕ್ರಮ ವಹಿಸ ಬೇಕು ಎಂದು ಸಚಿವರಿಗೆ ವಿವರಿಸಿದರು.
ಈಗಾಗಲೇ 2,893 ಎಕರೆ ಪ್ರದೇಶ ವನ್ನು 2016ರಲ್ಲಿ ಡೀಮ್ಡ್ ಫಾರಿಸ್ಟ್ ವ್ಯಾಪ್ತಿ ಯಿಂದ ಕೈಬಿಡಲಾಗಿದೆ. ಅದೇ ರೀತಿ ಯಲ್ಲಿ ಬೂದುಗಟ್ಟೆದೊಡ್ಡಿ ವ್ಯಾಪ್ತಿ ಯಲ್ಲಿರುವ ನಿವಾಸಿಗಳ ಪ್ರದೇಶವನ್ನು ಸಹ ಸರ್ಕಾರ ಡೀಮ್ಡ್ ಫಾರಿಸ್ಟ್‍ನಿಂದ ಕೈಬಿಡು ವಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು. ಗೋಪಿನಾಥಂ ಡ್ಯಾಂ ಒಡೆದ ಬಳಿಕ ಹಾಗೂ ಮಾರ್ಟಳ್ಳಿಯ ಹಲವ ರನ್ನು ಇಲ್ಲಿ ಕರೆತರಲಾಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸ ಬಾರದು ಎಂದು ಸಚಿವರಿಗೆ ಒತ್ತಾಯಿಸಿ ದರು. ಈ ಸಂದರ್ಭದಲ್ಲಿ ತಾಪಂನ ಮಾಜಿ ಸದಸ್ಯ ಸತ್ತೇಗಾಲ ಅರುಣ್ ಇನ್ನಿತರರಿದ್ದರು.