ಮೇ 21ರಂದು ಜೆಡಿಎಸ್ ಶಾಸಕಾಂಗ ಪಕ್ಷ ಸಭೆ

ಬೆಂಗಳೂರು: ಲೋಕ ಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲೂ ಮಹತ್ತರ ತಿರುವು ಗಳು ಪಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಶಾಸಕರು ಮತ್ತು ಸಂಸದರ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ.

ಫಲಿತಾಂಶ ಪ್ರಕಟಗೊಳ್ಳುವ 2 ದಿನ ಮುನ್ನವೇ ಅಂದರೆ ಮೇ 21ರಂದು ತಮ್ಮ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆದಿ ದ್ದಾರೆ. ಅಂದು ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಗೆ ತಪ್ಪದೆ ಹಾಜರಾಗು ವಂತೆ ಜೆಡಿಎಸ್‍ನ ಎಲ್ಲ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಸಂಸದರಿಗೆ ಆಹ್ವಾನ ನೀಡಲಾಗಿದೆ.

ಲೋಕಸಭಾ ಚುನಾವಣೆಯ ಫಲಿ ತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾಗಾಂಧಿ ಅವರು ಮೇ 23ರಂದು ಬಿಜೆಪಿ ವಿರೋಧಿ ಶಕ್ತಿಗಳ ಸಭೆ ನಡೆಸುತ್ತಿದ್ದು ಇದಕ್ಕೆ ಪೂರ್ವಭಾವಿಯಾಗಿ ದೇವೇಗೌಡರು ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ.

ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಏನು ಮಾಡಬೇಕು? ಅಥವಾ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಏನು ಮಾಡ ಬೇಕು? ಅನ್ನುವ ಕುರಿತು ಸಭೆ ಚರ್ಚಿಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಧಿಕಾರ ಹಿಡಿಯಲು ಪೂರಕವಾಗಿ ಸ್ವಯಂಬಲ ಬರುವುದಿಲ್ಲ. ಹೀಗಾಗಿ ಮುಂದಿನ ಕೇಂದ್ರ ಸರ್ಕಾರ ರಚನೆಯ ವಿಷಯದಲ್ಲಿ ತೃತೀಯ ಶಕ್ತಿಗಳದ್ದೇ ನಿರ್ಣಾಯಕ ಪಾತ್ರ ಎಂಬುದು ದೇವೇಗೌಡರ ಸದ್ಯದ ಲೆಕ್ಕಾಚಾರ.

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಕೂಟ ಕೇಂದ್ರ ದಲ್ಲಿ ಅಧಿಕಾರ ಗದ್ದುಗೆ ಹಿಡಿದರೆ ಕೇಂದ್ರ ಮಂತ್ರಿ ಮಂಡಲದಲ್ಲಿ ಜೆಡಿಎಸ್ ಕೂಡ ಒಂದು ಮಂತ್ರಿ ಸ್ಥಾನ ಪಡೆಯಬಹುದು ಅನ್ನುವುದು ಅವರ ಯೋಚನೆ. ಅಷ್ಟೇ ಮುಖ್ಯವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದರೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ನಿರುಮ್ಮಳವಾಗಿ ನಡೆದುಕೊಂಡು ಹೋಗುತ್ತದೆ. ಹಾಗಾದಾಗ ಯಾವ ಕಾರಣಕ್ಕೂ ಪರಿಸ್ಥಿತಿ ವ್ಯತಿರಿಕ್ತವಾಗುವುದಿಲ್ಲ ಎಂಬುದು ಅವರ ಯೋಚನೆ.

ಹಾಗೆಯೇ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದರೆ ಆಗ ಇಲ್ಲಿನ ಸರ್ಕಾರವನ್ನು ಅಲುಗಾಡಿಸಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಯತ್ನಿಸಬಹುದು. ಹಾಗಾದಾಗ ಕೇಂದ್ರದ ಕಾಂಗ್ರೆಸ್ ವರಿಷ್ಟರೇ ಇಲ್ಲಿನ ಸರ್ಕಾರವನ್ನು ಉಳಿಸಲು ಹರಸಾಹಸ ಮಾಡುತ್ತಾರೆ. ಯಾಕೆಂದರೆ ಕೇಂದ್ರದಲ್ಲಿ ಅಧಿಕಾರ ಇಲ್ಲದೆ ಇರುವಾಗ ರಾಜ್ಯ ಮಟ್ಟದಲ್ಲಾದರೂ ತಮ್ಮ ಶಕ್ತಿ ಉಳಿಯಬೇಕು ಎಂಬುದು ಅದರ ಲೆಕ್ಕಾಚಾರವಾಗಿರುತ್ತದೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಅಧಿಕಾರ ಹಿಡಿದರೂ ಜೆಡಿಎಸ್ ವೈಯಕ್ತಿಕವಾಗಿ ಗೊಂದಲಗೊಳ್ಳುವ ಅಗತ್ಯವೇನೂ ಇಲ್ಲ ಎಂಬುದು ದೇವೇಗೌಡರ ಅಭಿಪ್ರಾಯ.

ಇಂತಹ ಎಲ್ಲ ಅಭಿಪ್ರಾಯಗಳ ನಡುವೆಯೇ ಪಕ್ಷದ ಶಾಸಕಾಂಗ ಸಭೆಯನ್ನು ಅವರು ಕರೆದಿದ್ದು ಈ ಸಭೆಯಲ್ಲಿ ಪಕ್ಷದ ಇನ್ನಿತರ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.