ಬಜೆಟ್‍ನಲ್ಲಿ ಸಾಲಮನ್ನಾ ಘೋಷಿಸಿದ ಸಿಎಂ ಕುಮಾರಸ್ವಾಮಿ ಬನ್ನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ

ಬನ್ನೂರು:  ಸಿಎಂ ಕುಮಾರಸ್ವಾಮಿ ಯವರು ರೈತರ ಸಾಲವನ್ನು ಮನ್ನಾ ಮಾಡಿದ್ದ ರಿಂದ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜಯ್, ಇಂದು ರಾಜ್ಯದ ರೈತಾಪಿ ಕುಟುಂಬದವರು ಆರ್ಥಿಕ ವಾಗಿ ಜರ್ಜರಿತವಾಗಿದ್ದು, ಅವರು ಬದುಕು ನಡೆಸುವುದು ಕಷ್ಟವಾಗಿದೆ. ರಾಜ್ಯದ ರೈತರ ನೋವನ್ನು ಕಣ್ಣಾರೆ ಕಂಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಚುನಾವಣೆಗೂ ಮೊದಲೇ ನೀಡಿದ್ದ ಆಶ್ವಾಸನೆ ಯಂತೆ ರೈತರ ಸಾಲವನ್ನು ಮನ್ನಾ ಮಾಡುವ ದೃಢ ನಿರ್ಧಾರವನ್ನು ಕೈಗೊಂಡು ನುಡಿ ದಂತೆ ನಡೆದಿದ್ದಾರೆ ಎಂದು ತಿಳಿಸಿದರು.

ರಾಜ್ಯದ ರೈತರ ಸಾಲ ಮನ್ನಾದಿಂದ ಇಂದು ಕೃಷಿಗಾಗಿ ಸಾಲ ಮಾಡಿಕೊಂಡು ಜೀವನ ನಡೆಸುವುದಕ್ಕೆ ಹೆದರುತ್ತಿದ್ದ ರೈತರ ಬಾಳಿನಲ್ಲಿ ನಗುವನ್ನುಂಟು ಮಾಡಿದ್ದಾರೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬಡಜನರ ಸಮಸ್ಯೆಗಳನ್ನು ಅರಿತುವ ಅವರ ಪರವಾಗಿ ಜೆಡಿಎಸ್ ಸರ್ಕಾರ ಸ್ಪಂದಿಸಲಿದ್ದು, ಕುಮಾರಸ್ವಾಮಿಯವರು 5 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸು ತ್ತಾರೆ. ಅವರಿಂದ ಮತ್ತಷ್ಟು ಉತ್ತಮ ಕಾರ್ಯ ಗಳು ಮೂಡಿಬರಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿಯನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸಿಸಿ ರಮೇಶ್, ಆರೀಫ್, ಸಂಜಯ್, ಆನಂದ್, ಕಿರಣ್, ನಾಗರಾಜು, ಪಾರ್ಥಸಾರಥಿ, ಗಿಡ್ಡಪ್ಪ ರಮೇಶ್ ಸೇರಿದಂತೆ ಜೆಡಿಎಸ್ ಸ್ವಯಂ ಸೇವಕರು ಕಾರ್ಯಕರ್ತರು ಇದ್ದರು.