ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

ಹುಣಸೂರು:  ಕನ್ನಡ ರಾಜ್ಯೋತ್ಸವ ಆಚರಣೆಗೆ ಅಡ್ಡಿಯಾಗಿರುವ ರಸ್ತೆಗಳ ನಿರ್ಬಂಧವನ್ನು ತೆರವುಗೊಳಿಸಿ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನ.10ರಿಂದ 15ರೊಳಗೆ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕರೆ ಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಅಲಿಸಿದ ನಂತರ ಮಾತನಾಡಿದ ಅವರು, ನ.3ರಂದು ಲೋಕ ಸಭೆ ಉಪಚುನಾವಣೆ ಇದೆ. ಇದರ ನೀತಿ ಸಂಹಿತೆ ನ.8ರ ತನಕ ಜಾರಿಯಲ್ಲಿರುವ ಕಾರಣ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯ ವಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಅಡ್ಡಿಯಾಗಿರುವ ರಸ್ತೆಗಳ ನಿರ್ಬಂಧವನ್ನು ತೆರವುಗೊಳಿಸುವ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ಈ ರೀತಿಯ ಕಾನೂನು ತೊಡಕಿದ್ದರೂ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಂದಲ್ಲ ಒಂದು ಚುನಾವಣೆಗಳ ಶಿಷ್ಟಾಚಾರದ ಸುನಾಮಿ ನಡುವೆ ಸಭೆ ಕರೆದು ತೀರ್ಮಾನಿಸಲು ಸಾಧ್ಯವಾಗಿಲ್ಲ. ಮುಂದೆ ನ.8ರ ನಂತರ ಜಿಲ್ಲಾಡಳಿತದ ಅಧಿಕಾರಿಗಳ ಸಭೆ ನಡೆಸಿ ಹಾಗೂ ಎಲ್ಲಾ ಸಮುದಾಯ, ಸಂಘ ಸಂಸ್ಥೆ ಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದರು.

ನ.23 ಈದ್‍ಮಿಲಾದ್, ಡಿ.20 ಹನುಮ ಜಯಂತಿ ಆಚರಣೆಗಳಿವೆ. ಈ ಹಿನ್ನೆಲೆ ಯಲ್ಲಿ ಚರ್ಚಿಸಿ ಉತ್ತಮ ನಿರ್ಣಯ ಕೈ ಗೊಳ್ಳಬೇಕು. ಹುಣಸೂರಿನಲ್ಲಿ ಮುಕ್ತ ವಾತಾ ವರಣ ನಿರ್ಮಿಸಿ, ನಗರ ಮತ್ತು ತಾಲೂಕಿನ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು ಎಂದರು.
ರಕ್ಷಣಾ ವೇದಿಕೆ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಅನೇಕ ವರ್ಷಗಳಿಂದ ಅದ್ಧೂರಿ ಆಚರಣೆಗಳು ನಡೆಯುತ್ತಾ ಬಂದಿವೆ, ಆದರೆ ಕೆಲವು ಸಣ್ಣಪುಟ್ಟ ವಿಚಾರಕ್ಕೆ ಪ್ರಮುಖ ರಸ್ತೆಗಳಲ್ಲಿ ನಿರ್ಬಂಧ ವಿಧಿಸಿ, ಕನ್ನಡ ರಾಜ್ಯೋತ್ಸವ ಅಚರಣೆ ಮತ್ತು ಸಾರ್ವಜನಿಕ ಹಬ್ಬಗಳ ಆಚರಣೆಗಳಿಗೆ ಅಡ್ಡಿಯುಂಟು ಮಾಡಿರು ವುದು ನೋವಿನ ಸಂಗತಿ. ಇದನ್ನು ತೆರವು ಮಾಡಲು ತಾಲೂಕು ಆಡಳಿತ ಮುಂದಾಗ ಬೇಕು ಎಂದು ಮನವಿ ಮಾಡಿದರು.

ಇಂಟೆಕ್‍ರಾಜು, ವಕೀಲ ಪುಟ್ಟರಾಜ್, ಶಿವಶೇಖರ್, ನಗರಸಭಾ ಸದಸ್ಯರಾದ ಸುನೀತಾ ಜಯರಾಮೇಗೌಡ, ಕೃಷ್ಣರಾಜಗುಪ್ತ, ಹೆಚ್.ಪಿ.ಸತೀಶ್, ಸರವಣ, ಶಿವರಾಜ್, ಅಯುಬ್‍ಖಾನ್, ತಾ.ಪಂ ಉಪಾಧ್ಯಕ್ಷ ಪ್ರೇಮ್‍ಕುಮಾರ್, ಮಿಲಾದ್ ಕಮಿಟಿ ಕಾರ್ಯ ದರ್ಶಿ ಶಾಹಿಜಮಾ, ಬಲ್ಲೇನಹಳ್ಳಿ ಕೆಂಪರಾಜ್, ನಿಂಗರಾಜ್ ಮಲ್ಲಾಡಿ, ರತ್ನಪುರಿ ಪುಟ್ಟಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ ಶಿವಕುಮಾರ್ ಎಂ, ಡಿ.ಕೆ.ಕುನ್ನೇಗೌಡ, ಶಿವಶೇಖರ್, ವಿ.ಎನ್.ದಾಸ್, ಗಣೇಶ್‍ಗೌಡ, ಎಸ್, ಜಯರಾಂ, ನಗರಸಭಾಧ್ಯಕ್ಷ ಹೆಚ್.ವೈ.ಮಹದೇವ್ ಮಾತನಾಡಿದರು.

ತಹಸಿಲ್ದಾರ್ ಸೂರಜ್, ತಾಪಂ ಇಒ ಕೃಷ್ಣಕುಮಾರ್, ಪೌರಾಯುಕ್ತ ಶಿವಪ್ಪನಾಯಕ, ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ ಮಂಜುಳಾ, ಸಮಾಜ ಕಲ್ಯಾಣಾಧಿಕಾರಿ ಮೋಹನ್‍ಕುಮಾರ್, ಡಿವೈಎಸ್‍ಪಿ ಡಿಸೋಜ, ಸಿಪಿಐ ಪೂವಯ್ಯ, ಪಿಎಸ್‍ಐ ಮಹೇಶ್, ಅರ್.ಐ.ಪ್ರಭಾಕರ್, ಹರಿಹರ ಆನಂದಸ್ವಾಮಿ, ತಿಮ್ಮನಾಯಕ, ಪಿ.ಅರ್. ರಾಚಪ್ಪ, ಹೆಚ್.ಪಿ.ಸುಬ್ಬಾರಾವ್, ಹೆಚ್.ವಿ. ಭಾಸ್ಕರ್, ಕಣಗಾಲ್ ರಾಮೇಗೌಡ, ಅಣ್ಣಯ್ಯ ನಾಯಕ, ಹರಳಳ್ಳಿ ಮಾದೇಗೌಡ, ಕನಕರಾಜು, ಫÀಯಾಸ್, ಮುನಾವರ್ ಪಾಷ, ನಾರಾಯಣ ರೈ, ಸನವುಲಾಶಿನೂ ಮತ್ತಿತರರು ಹಾಜರಿದ್ದರು.