ಸಂಘಟನೆಗಳಿಂದ ಕಪಿಲಾ ನದಿ ಸ್ವಚ್ಛತೆ

ಸರಗೂರು, ಜು. 14(ನಾಗೇಶ್)- ಪಟ್ಟಣದ ಸಮೀಪ ಹರಿಯುವ ಕಪಿಲಾ ನದಿಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಪಂಚಾಯಿತಿ ಸದಸ್ಯರು, ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‍ನ ಕಾರ್ಯಕರ್ತರು ಹಾಗೂ ಪಟ್ಟಣ ಪಂಚಾ ಯಿತಿ ಸದಸ್ಯ ಶ್ರೀನಿವಾಸ್ ಮತ್ತಿತರರು ಸೇರಿ ಸ್ವಚ್ಛತಾ ಕಾರ್ಯ ನಡೆಸಿದರು.

ಕಪಿಲಾ ನದಿಯ ಸುತ್ತಮುತ್ತ ಗಿಡ-ಗಂಟಿ ಬೆಳೆದಿದ್ದು, ನದಿಗೆ ಹೋಗಲು ಸಾರ್ವಜನಿಕರಿಗೆ ತುಂಬಾ ಅನಾನುಕೂಲ ವಾಗಿತ್ತು. ಬಟ್ಟೆ ಸ್ವಚ್ಛತೆ ಹಾಗೂ ದೇವತಾ ಕಾರ್ಯಗಳನ್ನು ಮಾಡಲು ನದಿಗೆ ತೆರ ಳಲು ಪ್ರಯಾಸಪಡುವಂತಾಗಿತ್ತು. ಇದನ್ನು ಮನಗಂಡ ಪಟ್ಟಣ ಪಂಚಾಯಿತಿ ಸದಸ್ಯರು ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಸೇರಿ ಗಿಡಗಂಟಿಗಳ ತೆರವು ಗೊಳಿಸಿದರು. ನಂತರ ಚರಂಡಿಗೆ ದೊಡ್ಡ ಪೈಪ್ ಹಾಕಿಸಿ ಕಲುಷಿತ ನೀರು ಬೇರಡೆಗೆ ಹರಿಯುವಂತೆ ಹಾಗೂ ನದಿಗೆ ಸಾರ್ವಜನಿಕರು ಹೋಗಿ ಬರಲು ಅನುಕೂಲ ವಾಗುವಂತೆ ಮಾಡಿ ದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾದಿ üಕಾರಿ ಜೆಸಿಬಿ ಕಳುಹಿಸಿದ್ದರಿಂದ ಯುವಕರು ಸ್ವಚ್ಛತೆ ಮಾಡಲು ಸಹಕಾರಿಯಾಯಿತು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ತಿಳಿಸಿದ್ದಾರೆ.
ಚಿಕ್ಕ ಯಜಮಾನ ಭೈರನಾಯಕ, ರಾಜೇಶ್, ನಿಂಗರಾಜು, ಬಸವರಾಜು, ಭೀಮನಾಯಕ, ಮಂಜು, ಮಹೇಶ್, ಚಿಕ್ಕಯ್ಯ, ಕಾಳನಾಯಕ, ಚನ್ನಪ್ಪ, ಎಸ್.ಆರ್.ನಾಗರಾಜು, ರಾಖಿ, ಇನ್ನಿತರರು ಈ ವೇಳೆ ಇದ್ದರು.