ಕರ್ನಾಟಕ ಬಂದ್‍ಗೆ ಅವಕಾಶ ಇಲ್ಲ

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ

ಹೊಸ ವರ್ಷದ ರಾತ್ರಿ ಕಫ್ರ್ಯೂ ಇರಲ್ಲ

ಉಡುಪಿ,ಡಿ.3-ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಡಿ.5 ಕರ್ನಾ ಟಕ ಬಂದ್ ನಡೆಸಲು ಅವಕಾಶವಿಲ್ಲ. ಆ ದಿನ ಎಲ್ಲಾ ಸರ್ಕಾರಿ ಕಚೇರಿಗಳು ದಿನನಿತ್ಯದಂತೆ ನಡೆಯುತ್ತವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಬಂದ್ ಮಾಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ. ಬಂದ್ ಮಾಡ ಬೇಡಿ ಎಂದು ಸಿಎಂ ಜೊತೆ ನಾನೂ ಮನವಿ ಮಾಡುತ್ತೇನೆ ಎಂದರು. ಹೊಸ ವರ್ಷಾಚರಣೆ ಮತ್ತು ನೈಟ್ ಕರ್ಫ್ಯೂ ಕುರಿತು ಮಾತನಾಡಿದ ಸಚಿವರು, ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಆದರೆ ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ಒಂದು ತೀರ್ಮಾನ ಮಾಡುತ್ತದೆ. ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಹೊಸ ವರ್ಷಾಚರಣೆ ಯಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ನೈಟ್ ಕರ್ಫ್ಯೂ ಹೊರತಾಗಿಯೂ ಕ್ರಮ ಕೈಗೊಳ್ಳಬಹುದಾಗಿದೆ ಎಂದರು. ಶಾಲೆಗಳು ಓಪನ್ ಮಾಡುವಂತೆ ಪೆÇೀಷಕರಿಂದ ಒತ್ತಾಯ ವಿಚಾರವಾಗಿ ಮಾತನಾಡಿ, ಕೊರೊನಾ ಸ್ಥಿತಿಗತಿಯನ್ನು ನೋಡಿಕೊಂಡು ಎಲ್ಲ ನಿರ್ಧಾರ ಆಗುತ್ತೆ, ಮೇಲ್ಮನೆ ಸದಸ್ಯರು ಒತ್ತಡ ಹಾಕುವುದು ಸಹಜ. ಕಾಲಕಾಲಕ್ಕೆ ಶಿಕ್ಷಣ ಸಚಿವರು ಎಲ್ಲಾ ವಿಭಾಗಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದರು. ಸಂಪುಟ ವಿಸ್ತರಣೆ ಹೈಕಮಾಂಡಿಗೆ ಬಿಟ್ಟ ವಿಚಾರ. ಬಿಜೆಪಿಯಲ್ಲಿ ಯಾವುದೇ ಒಳಜಗಳ ಗುಂಪುಗಾರಿಕೆ ತಿಕ್ಕಾಟ ಇಲ್ಲ. ಹೈಕಮಾಂಡ್, ಪ್ರಧಾನಿ, ಮುಖ್ಯಮಂತ್ರಿಗಳು, ಪಕ್ಷ ತೀರ್ಮಾನಿಸಿದಂತೆ ಎಲ್ಲವೂ ನಡೆಯುತ್ತದೆ ಎಂದರು.