ಗ್ರಾಮ ಒನ್ ಕೇಂದ್ರ ಸ್ಥಾಪನೆ

ಆನ್‍ಲೈನ್ ಮೂಲಕ ಆಡಳಿತಕ್ಕೆ ಆದ್ಯತೆ

ಸಕಾಲದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಪ್ರಶಸ್ತಿ

ಬೆಂಗಳೂರು, ಮಾ.5(ಕೆಎಂಶಿ)- ಕರ್ನಾಟಕ ಒನ್ ಮಾದರಿಯಲ್ಲೇ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೌಲಭ್ಯ ಮತ್ತು ಇತರೆ ಸೇವೆ ಒದಗಿಸಲು ಗ್ರಾಮ ಒನ್ ಕೇಂದ್ರ ಸ್ಥಾಪಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಂಡಿದ್ದಾರೆ.

ಪ್ರಸಕ್ತ ಮುಂಗಡ ಪತ್ರದಲ್ಲಿ ಈ ಯೋಜನೆ ಪ್ರಕಟಿಸಿ ರುವ ಮುಖ್ಯಮಂತ್ರಿಯವರು ಖಾಸಗಿ ಸಹಭಾಗಿತ್ವದಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಉz್ದÉೀಶಿಸಲಾಗಿದೆ. ಈ ಕೇಂದ್ರಗಳು ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ವಿವಿಧ ಕೃಷಿ ಮಾರು ಕಟ್ಟೆ, ಮಂಡಿ ದರಗಳನ್ನು ಪ್ರಚಾರಪಡಿಸುವುದಲ್ಲದೆ, ಸಕಾಲ ಹಾಗೂ ಸೇವಾಸಿಂಧು ಯೋಜನೆಗಳು, ಸಾರ್ವಜನಿಕ ಕುಂದು ಕೊರತೆಗಳ ಸ್ವೀಕಾರ, ಮಾಹಿತಿ ಹಕ್ಕು ಕಾಯ್ದೆಯಡಿ ಆನ್‍ಲೈನ್ ಪೆÇೀರ್ಟಲ್ ನಲ್ಲಿ ಅರ್ಜಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ. ಜತೆಗೆ ಆನ್‍ಲೈನ್ ಮೂಲಕವೇ ಮಾಹಿತಿ ಪಡೆದುಕೊಳ್ಳಲು ಮಾಹಿತಿ ಕಣಜ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದಾಗಿಯೂ ಪ್ರಕಟಿಸಿದ್ದಾರೆ. ಆರ್‍ಟಿಐ ಅರ್ಜಿ ಸಲ್ಲಿಕೆ ಹಾಗೂ ಮಾಹಿತಿ ಪಡೆಯಲು ಮಾಹಿತಿ ಕಣಜ ಏಕ ರೂಪ ತಂತ್ರಾಂಶವನ್ನು ರೂಪಿಸಿ ಎಲ್ಲಾ ಇಲಾಖೆ ಹಾಗೂ ಸಂಸ್ಥೆಗಳಿಗೆ ವಿಸ್ತರಿಸುವುದಾಗಿ ಹೇಳಿದ್ದಾರೆ. ಸಕಾಲ ಯೋಜ ನೆಯ ಅನುಷ್ಠಾನದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಜನ ಸೇವಕ ಯೋಜನೆ ಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಜನ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಬಹಳಷ್ಟು ಸೇವೆಗಳನ್ನು ಆನ್‍ಲೈನ್‍ಗೊಳಿಸಲಾಗಿದೆ. ಬಹುತೇಕ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದರು. ಸಾರ್ವಜನಿಕರಿಗೆ ಒದಗಿಸಲಾಗುವ ವಿವಿಧ ಪ್ರಮಾಣ ಪತ್ರಗಳನ್ನು ಸಿದ್ಧ ಸೇವೆ ಯೋಜನೆಯಡಿ ತಕ್ಷಣ ಒದಗಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು 3 ಕೋಟಿ ರೂ. ಅನುದಾನ ನೀಡಲಾಗುತ್ತಿದೆ.

ಮೈಸೂರು, ಮಂಡ್ಯ, ಕೊಡಗು, ಚಾ.ನಗರ, ಹಾಸನಕ್ಕೆ ಬಜೆಟ್‍ನಲ್ಲಿ ಅರ್ಧಚಂದ್ರ!
ಬೆಂಗಳೂರು, ಮಾ.5-ಹಳೇ ಮೈಸೂರು ವಿಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ಬಜೆಟ್‍ನಲ್ಲಿ ಯಾವುದೇ ಮಹತ್ವದ ಯೋಜನೆ, ಕೊಡುಗೆಯಾಗಲಿ, ಅನುದಾನವನ್ನು ಮೀಸಲಿಡದೆ, ಮುಖ್ಯಮಂತ್ರಿ ಯಡಿಯೂರಪ್ಪ ಈ ಭಾಗದ ಜನರ ಭಾರೀ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣ ವಿಸ್ತರಣೆಗೆ 240 ಎಕರೆ ಭೂ ಸ್ವಾಧೀನ, ಮೈಸೂರು-ಕುಶಾಲನಗರ ಹೆದ್ದಾರಿ ಹಾಗೂ ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಬೇಕೆಂದು ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದ್ದರು. ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ರೂಪಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಘೋಷಿಸಿದ್ದರು. ಇಲ್ಲಿನ ಜನತೆ ಪಾರಂ ಪರಿಕ ಕಟ್ಟಡಗಳ ಸಂರಕ್ಷಣೆಗೆ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲದೆ ಮೈಸೂರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಅಗತ್ಯವಾದ ಯೋಜನೆ ರೂಪಿಸಲಾಗುತ್ತದೆ. ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ದೊರೆಯುತ್ತದೆ. ಪ್ರವಾಸೋದ್ಯಮ ಬೆಳವಣಿಗೆಗಾಗಿ ಅನುದಾನ ದೊರೆಯುತ್ತದೆ ಎಂಬೆಲ್ಲಾ ನಿರೀಕ್ಷೆ ಇತ್ತು. ಆದರೆ ಈ ಯಾವುದೇ ಯೋಜನೆಗೆ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿಲ್ಲ. ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಚಾಮರಾಜ ನಗರ-ಕೊಳ್ಳೇಗಾಲ-ಬೆಂಗಳೂರು ರೈಲು ಮಾರ್ಗಕ್ಕೆ ಭೂ ಸ್ವಾಧೀನ, ಕೃಷಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ. ಸರ್ಕಾರಿ ಕಾನೂನು ಕಾಲೇಜಿಗೆ ಅಗತ್ಯ ಹುದ್ದೆಗಳ ಭರ್ತಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ. ಚಾಮರಾಜನಗರದ 193 ಕೋಟಿ ರೂ. ಕುಡಿಯುವ ನೀರು ಯೋಜನೆಗೆ ಅನುದಾನವನ್ನು ಇಲ್ಲಿನ ಜನತೆ ನಿರೀಕ್ಷಿಸಿದ್ದರು. ಆದರೆ ಈ ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟಿಲ್ಲ.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಪ್ಯಾಕೇಜ್, ಕ್ರೀಡಾ ಚಟುವಟಿಕೆ ಹೆಚ್ಚಳಕ್ಕೆ ಪ್ರೋತ್ಸಾಹ. ವನ್ಯ ಮೃಗಗಳ ಹಾವಳಿ ತಡೆಯಲು ಶಾಶ್ವತ ಯೋಜನೆ, ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲಾಗುತ್ತದೆ ಎಂಬುದು ಅಲ್ಲಿನ ಜನರ ನಿರೀಕ್ಷೆಯಾಗಿತ್ತು. ಈ ಸಂಬಂಧ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕೊಡಗಿನ ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಗೋಣಿಕೊಪ್ಪದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿರುವುದನ್ನು ಬಿಟ್ಟರೆ ಅಲ್ಲಿನ ಜನರ ನಿರೀಕ್ಷೆಗೆ ತಕ್ಕಂತೆ ಯಾವ ಯೋಜ ನೆಗೂ ಬಜೆಟ್‍ನಲ್ಲಿ ಅನುದಾನ ಒದಗಿಸಿಲ್ಲ. ಮಂಡ್ಯದಲ್ಲಿ ಕೃಷಿಗೆ ಪೂರಕವಾದ ಯೋಜನೆಗಳ ಅನುಷ್ಠಾನ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಅನುದಾನ ದೊರೆಯುತ್ತದೆ. ಕೃಷಿ ಯೋಜನೆ ಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ಯೋಜನೆ ಸೇರ್ಪಡೆಯಾಗುತ್ತದೆ. ಬಸರಾಳು, ಕುದುರೆ ಗುಂಡಿ ಹಾಗೂ ಪಂಡಿತಹಳ್ಳಿ ಕೈಗಾರಿಕಾ ಪ್ರದೇಶಗಳ ಸ್ಥಾಪನೆಯಾಗಲಿವೆ. ಮಂಡ್ಯ ನಗರಕ್ಕೆ ವರ್ತುಲ ರಸ್ತೆ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದೊರೆಯುತ್ತದೆ ಎಂಬ ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿಗಳು ಹುಸಿ ಮಾಡಿದ್ದಾರೆ. ಕುಡಿಯುವ ನೀರಿನ ಯೋಜನೆ ಹೊರತು ಇನ್ನೇನು ದಕ್ಕಿಲ್ಲ. ಇನ್ನು ಹಾಸನ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಜನರು ನಿರೀಕ್ಷಿಸಿದ್ದ ಯಾವುದೇ ಯೋಜನೆಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಇದು ಈ ಭಾಗದ ಜನತೆಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ.