ಕೊಡವ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸೇರಿ ೧೨ ಸಾಧಕರ ಆಯ್ಕೆ

ಮಡಿಕೇರಿ, ಸೆ.೯- ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡ ಮಾಡುವ ವಾರ್ಷಿಕ ಗೌರವ ಹಾಗೂ ಪುಸ್ತಕ ಪ್ರಶಸ್ತಿಗೆ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸೇರಿ ೧೨ ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.

ಕೊರೊನಾ ಪರಿಸ್ಥಿತಿ ಇದ್ದ ಹಿನ್ನೆಲೆ ಕಳೆದ ವರ್ಷ ಪ್ರಶಸ್ತಿ ನೀಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ೨ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸೆ.೧೨ರಂದು ಮಕ್ಕಂದೂರು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ.

ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮೊಣ್ಣಂಡ ಶೋಭಾ ಸುಬ್ಬಯ್ಯ, ಬಡಕಡಮ್ಮಂಡ ಕಸ್ತೂರಿ ಗೋವಿಂದಮಯ್ಯ, ಜಾನಪದ, ಕಲಾಕ್ಷೇತ್ರ ದಲ್ಲಿ ದಿ.ಕಾಮೆಯಂಡ ಸಿ.ಅಯ್ಯಣ್ಣ, ಬೊಟ್ಟೋಳಂಡ ಕಾಳಿ ಅಚ್ಚಯ್ಯ, ಸಂಶೋಧನ ಕ್ಷೇತ್ರದಲ್ಲಿ ಕಂಬೀರAಡ ಕಾವೇರಿ ಪೊನ್ನಪ್ಪ, ಭಾಷ, ಶಿಲ್ಪಕಲಾ ಕ್ಷೇತ್ರದಲ್ಲಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಾರ್ಷಿಕ ಪುಸ್ತಕ ಪ್ರಶಸ್ತಿಗೆ ‘ಪೊಂಜಗ್’ ಕವನ ಸಂಕಲನಕ್ಕೆ ಬಾಚ ರಣ ಯಂಡ ಪಿ.ಅಪ್ಪಣ್ಣ, ರಾಣು ಅಪ್ಪಣ್ಣ, ‘ಮಹಾವೀರ ಅಚ್ಚುನಾಯಕ’ ಕಾದಂಬರಿಗೆ ಕಾಡ್ಯಮಾಡ ರೀಟಾ ಬೋಪಯ್ಯ, ‘ಬದ್‌ಕ್ ಪಿಂಞ ದೇಚವ್ವ’ ನಾಟಕ ಪುಸ್ತಕಕ್ಕೆ ಅಡ್ಡಂಡ ಸಿ.ಕಾರ್ಯಪ್ಪ, ‘ನಾಡ ಪೆದ ಆಶಾ’ ಕಾದಂಬರಿಗೆ ನಾಗೇಶ್ ಕಾಲೂರು, ‘ನಂಗದಾರ್ ಕೊಡವ’ ಪುಸ್ತಕಕ್ಕೆ ಮಾಳೇಟಿರ ಸೀತಮ್ಮ ವಿವೇಕ್, ‘ನಾಟಕ ರಂಗ’ ಪುಸ್ತಕಕ್ಕೆ ಉಳುವಂಗಡ ಕಾವೇರಿ ಉದಯ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿ ಪಡೆದವರಿಗೆ ತಲಾ ರೂ. ೫೦ ಸಾವಿರ, ಪುಸ್ತಕ ಪ್ರಶಸ್ತಿ ಪಡೆದವರಿಗೆ ತಲಾ ರೂ. ೨೫ ಸಾವಿರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.

ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣ , ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.