ಕೋವಿ ಹಿಡಿದು ಕೊಡವರ ಮೆರವಣಿಗೆ

ಮಡಿಕೇರಿ,ಡಿ.17- ಕೊಡವ ಮಹಿಳೆಯ ರಿಗೆ ಭದ್ರತೆ ಹಿನ್ನೆಲೆಯಲ್ಲಿ ಬಂದೂಕು ತರ ಬೇತಿಯನ್ನು ಕಡ್ಡಾಯವಾಗಿ ಸರ್ಕಾರದ ವತಿಯಿಂದ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಆಗ್ರಹಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದ ಅಜ್ಜಮಾಡ ಕುಟುಂಬದ ಐನ್‍ಮನೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅಧ್ಯಕ್ಷತೆಯಲ್ಲಿ 13ನೇ ವರ್ಷದ ಕೋವಿ ನಮ್ಮೆ ಆಯೋಜಿಸಲಾಗಿತ್ತು. ಕೋವಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಗಾಳಿ ಯಲ್ಲಿ ಗುಂಡು ಹಾರಿಸಿ, ಅಜ್ಜಮಾಡ ಐನ್‍ಮನೆ ವ್ಯಾಪ್ತಿಯಲ್ಲಿ ಕೋವಿ ಹಿಡಿದು ಕೊಡವರು, ಕೊಡವತಿಯರು, ಮೆರವಣಿಗೆ ನಡೆಸಿ ಕೋವಿಯ ಮಹತ್ವ ಸಾರಿದರು.
ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತ ನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕೊಡಗಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು, ಕೊಡವರ ಭದ್ರತೆ ದೃಷ್ಟಿಯಿಂದ ಕೊಡವತಿ ಯರಿಗೂ ಬಂದೂಕು ಚಲಾಯಿಸುವ ನಿಟ್ಟಿ ನಲ್ಲಿ ಸೂಕ್ತ ತರಬೇತಿಯನ್ನು ಸರ್ಕಾರದ ವತಿಯಿಂದಲೇ ನೀಡಬೇಕು. ಈ ಮೂಲಕ ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವವರು, ವನ್ಯಜೀವಿಗಳಿಂದ ಪ್ರಾಣ ಸಂರಕ್ಷಣೆ ನಿಟ್ಟಿನಲ್ಲಿ ಕೊಡವ ಮಹಿಳೆಯರಿಗೂ ಸೂಕ್ತ ತರಬೇತಿ ನೀಡಿದಂತಾಗುತ್ತದೆ ಎಂದು ಸರಕಾರವನ್ನು ಒತ್ತಾಯಿಸಿದರು.

ಕೊಡವರು ಕೋವಿ ಹಕ್ಕು ಹೊಂದಿದ್ದರೂ ಈವರೆಗೂ ಅದನ್ನು ಅಶಾಂತಿ ಕಲ್ಪಿಸುವ ಅಥವಾ ಬೇರೆ ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿಲ್ಲ. ಕೋವಿ ದೈವಿ ಸಮಾನವಾಗಿದ್ದು ಹೀಗಾಗಿಯೇ ಸಿಎನ್‍ಸಿ ಯಿಂದ ಕೋವಿ ನಮ್ಮೆಯನ್ನು 13 ವರ್ಷಗಳ ಹಿಂದೆ ಪ್ರಾರಂಭಿಸಿ ಕೋವಿಯ ಮಹತ್ವವನ್ನು ಜಗತ್ತಿಗೆ ತಿಳಿಸಲಾಗುತ್ತಿದೆ ಎಂದೂ ನಾಚಪ್ಪ ಹೇಳಿದರು.

ಹಕ್ಕುಗಳನ್ನು ಮರಳಿ ಪಡೆಯೋಣ: ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಯುವ ಜನಾಂಗಕ್ಕೆ ಕೊಡವರ ಕೋವಿ ಹಕ್ಕು ಸೇರಿ ದಂತೆ ಕೊಡವರ ಹಕ್ಕುಗಳನ್ನು ತಿಳಿಸಿ ಹೇಳುವ ಅಗತ್ಯವಿದೆ. ಭವಿಷ್ಯದ ಪೀಳಿಗೆಗಾಗಿ ಕಳೆದು ಕೊಂಡಿರುವ ಹಕ್ಕುಗಳನ್ನು ಕೊಡವರು ಈಗಿ ನಿಂದಲೇ ಮರಳಿ ಪಡೆಯಬೇಕಾದ ಅನಿವಾ ರ್ಯತೆ ಇದೆ ಎಂದೂ ನಂದಿನೆರವಂಡ ನಾಚಪ್ಪ ಹೇಳಿದರು. ತಮ್ಮ ಜನ್ಮಸಿದ್ಧ ಹಕ್ಕುಗ ಳನ್ನು ಗಳಿಸಿಕೊಳ್ಳುವ ಮೂಲಕ ಕೊಡವರು ಸ್ವಾಭಿಮಾನಿ ಜೀವನವನ್ನು ಮತ್ತೆ ಕಟ್ಟಿಕೊಳ್ಳ ಬೇಕಾಗಿದೆ ಎಂದು ಹೇಳಿದ ನಾಚಪ್ಪ, ಯುದ್ಧ ಮತ್ತು ಬೇಟೆ ಕೊಡವರ ಕುಲಕಸುಬಾ ಗಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಹಕ್ಕುಗಳನ್ನು ಸರ್ಕಾರ ಕೊಡವರ ಬೇಡಿಕೆ ಗಳನ್ನು ಪರಿಗಣಿಸಿ ಮರಳಿಸಲೇಬೇಕು ಎಂದು ಒತ್ತಾಯಿಸಿದರು.

ಕಾನೂನು ಹೋರಾಟ: ಕೊಡವರಿಗೆ ಸಿಗ ಬೇಕಾದ ಹಕ್ಕುಗಳನ್ನು ಮರಳಿ ಪಡೆಯಲು ಸಿಎನ್‍ಸಿ ಕಾನೂನಿನ ಮೂಲಕ ಹೋರಾ ಟಕ್ಕೆ ಮುಂದಾಗಲಿದೆ ಎಂದು ಹೇಳಿದರು. ಕೊಡವ ನ್ಯಾಷನಲ್ ಕೌನ್ಸಿಲ್‍ನ ಹಲವಾರು ವರ್ಷಗಳ ನಿರಂತರವಾದ ಪ್ರಾಮಾಣಿಕ ಶಾಂತಿಯುತ ಹೋರಾಟದ ಫಲವಾಗಿಯೇ ಹೆಸರಾಂತ ವಕೀಲ ಡಾ.ಸುಬ್ರಮಣಿಯನ್ ಸ್ವಾಮಿ ಮುಂದಾಳತ್ವದಲ್ಲಿ ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಸರ್ವೋಚ್ಚ ನ್ಯಾಯಾಲ ಯದ ಹೊಸ್ತಿಲನ್ನು ತಲುಪಿದೆ. ಸದ್ಯದಲ್ಲಿಯೇ ಈ ಬಗ್ಗೆ ನ್ಯಾಯಾಂಗ ಕೂಡ ಗಮನ ಹರಿಸಿ ಕೊಡವರ ಆದ್ಯತೆಯ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆಯಿದೆ ಎಂದೂ ನಾಚಪ್ಪ ಆಶಾಭಾವನೆ ವ್ಯಕ್ತಪಡಿಸಿದರು.

ಪ್ರಮುಖ ಹಕ್ಕೊತ್ತಾಯಗಳು: ಕೊಡವ ಯುವತಿಯರ ಮದುವೆ ಸಂದರ್ಭ ಕಾಣಿಕೆ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಕೋವಿ ಮತ್ತು ಕೊಡವರ ಹಕ್ಕಾದ ಕೋವಿ ಪರವಾ ನಗಿ ವಿನಾಯಿತಿ ಪತ್ರವನ್ನು ಇಡುವಂತಾಗ ಬೇಕು ಎಂದೂ ನಾಚಪ್ಪ 13ನೇ ವರ್ಷದ ಕೋವಿ ನಮ್ಮೆಯ ಹಕ್ಕೊತ್ತಾಯ ಮಂಡಿ ಸಿದರು. ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಕೊಡಗಿನ ಪ್ರತೀ ಐನ್‍ಮನೆ ವತಿ ಯಿಂದ ಕುಟುಂಬಸ್ಥರಿಗೆ ದೊರಕುವಂತೆ ಮಾಡಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಕೋವಿ ಪರ ವಾನಗಿ ವಿನಾಯಿತಿ ಪತ್ರವನ್ನು ಹಕ್ಕು ದಾರರಿಗೆ ವಿಳಂಬ ರಹಿತವಾಗಿ ನೀಡು ವಂತಾಗಬೇಕು ಎಂಬುದೂ ಸೇರಿದಂತೆ ಹಲವು ಪ್ರಮುಖ ಹಕ್ಕೊತ್ತಾಯಗಳನ್ನು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಆಯೋಜಿತ 13ನೇ ವರ್ಷದ ಕೋವಿ ನಮ್ಮೆಯಲ್ಲಿ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಅಜ್ಜಮಾಡ ಕಟ್ಟಿಮಂ ದಯ್ಯ, ಅಜ್ಜಮಾಡ ವೇಣುಸುಬ್ಬಯ್ಯ, ಜಮ್ಮಡ ಮೋಹನ್, ಪುಲ್ಲೇರ ಸ್ವಾತಿ, ಪಟ್ಟಮಾಡ ಕುಶ ಉಪಸ್ಥಿತರಿದ್ದರು.
ಇದೇ ಸಂದರ್ಭ ಕುರ್ಚಿ ಗ್ರಾಮದ ದಕ್ಷಿಣ ಗಂಗೆ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನ ಜರುಗಿತು. ತೋಕ್ ನಮ್ಮೆಯ ಅಂಗವಾಗಿ ಆಯೋಜಿತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಕ್ಕಳೂ, ಮಹಿ ಳೆಯರು ಸೇರಿದಂತೆ ನೂರಾರು ಕೊಡವ, ಕೊಡವತಿಯರು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ಗುರಿ ಪ್ರದರ್ಶಿಸಿದರು.