ಮೈಸೂರಲ್ಲಿ ಸಿಲುಕಿಕೊಂಡ ಕುಶಾಲನಗರದ ಹೋಟೆಲ್ ಕ್ಲೀನರ್!

ಮೈಸೂರು,ಏ.18-ಕೂಲಿಗಾಗಿ ದೂರದ ಊರು ಗಳಿಂದ ಮೈಸೂರಿಗೆ ಬಂದಿದ್ದ ನೂರಾರು ಕಾರ್ಮಿಕರು ಲಾಕ್‍ಡೌನ್‍ನಿಂದಾಗಿ ವಾಪಸ್ ತೆರಳಲಾಗದೆ ಮೈಸೂ ರಿನಲ್ಲೇ ಉಳಿದಿದ್ದಾರೆ. ಕೆಲವರು ನಿರಾಶ್ರಿತರ ಕೇಂದ್ರ ಗಳಲ್ಲಿ ಆಶ್ರಯ ಪಡೆದಿದ್ದರೆ, ಮತ್ತೆ ಕೆಲವರು ರಸ್ತೆಬದಿ, ಮರದ ಕೆಳಗೆ, ಲಾರಿಗಳಲ್ಲಿ ಆಶ್ರಯ ಪಡೆದು ದಾನಿಗಳು ನೀಡುವ ಆಹಾರ ಸೇವಿಸಿ ದಿನ ದೂಡುತ್ತಿದ್ದಾರೆ.

ಕುಶಾಲನಗರದ ಹೋಟೆಲೊಂದರಲ್ಲಿ ಕ್ಲೀನರ್ ಆಗಿ ರುವ ಹಾವೇರಿ ಮೂಲದ ವ್ಯಕ್ತಿಯೊಬ್ಬ, ಲಾಕ್‍ಡೌನ್ ನಿಂದ ವಾಹನ ಸೌಕರ್ಯವಿಲ್ಲದೆ, ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಅರಮನೆಗಳ ನಗರಿಯಲ್ಲಿ ಮರದಡಿ ಮಲಗಿ ಮುಂದಿನ ತಿಂಗಳು ನಡೆಯಲಿರುವ ಮಗಳ ಮದುವೆಯ ಕುರಿತು ಕನಸು ಕಾಣುತ್ತಾ ಇದ್ದಾರೆ.ಇದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತುಮರಿಕೊಪ್ಪೆ ನಿವಾಸಿ ಅರವಿ ಮಹದೇವಪ್ಪ ಅಳಲು.

ಲಾಕ್‍ಡೌನ್ ಹಿನ್ನೆಲೆ ಸ್ವಗ್ರಾಮಕ್ಕೆ ತೆರಳಲು ಸಾಧ್ಯ ವಾಗದೆ, ಉಳಿದುಕೊಳ್ಳಲು ನೆಲೆಯೂ ಇಲ್ಲದೇ ಮರದ ಕೆಳಗೆ ಮಲಗಿ ದಿನ ದೂಡುತ್ತಿದ್ದಾರೆ. ಮುಂದಿನ ತಿಂಗಳು ಮಗಳ ಮದುವೆ ಮಾಡಲು ತೀರ್ಮಾನಿಸಿದ್ದು, ಅದ ಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದೆ. ಆದರೆ, ಸದ್ಯದ ಪರಿಸ್ಥಿತಿ ಯಲ್ಲಿ ಸ್ವಗ್ರಾಮಕ್ಕೆ ಹೋಗಲು ಸಾಧ್ಯವಿಲ್ಲವಾಗಿದೆ. ಊರಿಗೆ ಹೋಗಲು ಯಾರಾದರೂ ಸಹಾಯ ಮಾಡಿದರೆ ಅನುಕೂಲವಾಗುತ್ತದೆ… 20 ವರ್ಷಗಳಿಂದ ಕುಶಾಲ ನಗರದ ಹೋಟೆಲ್‍ನಲ್ಲಿ ಕ್ಲೀನರ್ ಆಗಿದ್ದು, 15 ದಿನ ಅಥವಾ ತಿಂಗಳಿಗೊಮ್ಮೆ ಹಾವೇರಿಗೆ ತೆರಳಿ 3-4 ದಿನ ಕುಟುಂಬದೊಂದಿಗಿದ್ದು ವಾಪಸ್ಸಾಗುತ್ತಿದ್ದರು. ಮಾ.14 ರಂದು ರೈಲಿನಲ್ಲಿ ಹಾವೇರಿಯಿಂದ ಅರಸೀಕೆರೆಗೆ ಬಂದು ನಂತರ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲಿನಲ್ಲಿ ರಾತ್ರಿ 10 ಗಂಟೆಗೆ ಮೈಸೂರಿಗೆ ಬಂದ ಮಹದೇವಪ್ಪ, ಸಬರ್ಬನ್ ಬಸ್ ನಿಲ್ದಾಣದ ಬಳಿಯಿರುವ ಟಾಂಗಾ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದಾರೆ. ಮರುದಿನ ಕೊರೊನಾ ಭೀತಿ ಹಿನ್ನೆಲೆ ಸಂಚಾರ ಬಂದ್ ಆದ್ದರಿಂದ ಕುಶಾಲನಗರಕ್ಕೆ ಹೋಗಲು ಸಾಧ್ಯವಾಗದೆ ದಿಕ್ಕು ತೋಚದೆ ಸಂಗಂ ಚಿತ್ರಮಂದಿರದ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ರಮೇಶ್ ಎಂಬವರು, `ತಳ್ಳುವ ಗಾಡಿಯಲ್ಲಿ ಕಬ್ಬಿನ ಜ್ಯೂಸ್ ಮಾಡುತ್ತೀಯ?’ ಎಂದು ಕೇಳಿದ್ದಾರೆ. ದಿಕ್ಕು ತೋಚದೆ ನಿಂತಿದ್ದ ಮಹದೇವಪ್ಪ ಕೂಡಲೇ `ಬರುತ್ತೇನೆ’ ಎಂದು ಅವರೊಂದಿಗೆ ತೆರಳಿ ಒಲಿಂಪಿಯಾ ಚಿತ್ರಮಂದಿರ, ವಿಷ್ಣುವರ್ದನ್ ಉದ್ಯಾನವನದ ಬಳಿ ತಳ್ಳುವ ಗಾಡಿ ಯಲ್ಲಿ ಕಬ್ಬಿನಜ್ಯೂಸ್ ಮಾರಾಟ ಮಾಡುತ್ತಿದ್ದರು.

ಮದುವೆಗೆ ತೀರ್ಮಾನ: ಮಾ.22ರಂದು ದೇಶಾ ದ್ಯಂತ ಜನತಾ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ಸಂಚಾರ ಪೂರ್ಣ ಬಂದ್ ಆದ್ದರಿಂದ ಉಳಿಯಲು ಜಾಗವಿಲ್ಲದಂತಾಗಿದೆ. ದಾನಿಗಳು ನೀಡುವ ಆಹಾರ ಸೇವಿಸಿದ ಬಳಿಕ ರೇಸ್‍ಕೋರ್ಸ್ ರಸ್ತೆಯಲ್ಲಿ ಲಾರಿ ನಿಲ್ದಾಣದ ಬಳಿ ಮರದ ಕೆಳಗೆ ಮಲಗಿ ದಿನ ದೂಡುತ್ತಿದ್ದಾರೆ. ಮುಂದಿನ ತಿಂಗಳು ಮಗಳ ಮದುವೆ ಮಾಡಲು ತೀರ್ಮಾನಿಸಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ವಾಪಸ್ ಊರಿಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಸ್ವಗ್ರಾಮಕ್ಕೆ ಹೋಗಲು ಯಾರಾದರೂ ಸಹಾಯ ಮಾಡಿದರೆ ತುಂಬಾ ಅನು ಕೂಲವಾಗುತ್ತದೆ ಎಂದು ಮಹದೇವು ಮನವಿ ಮಾಡಿದರು.

ವೈ.ಡಿ.ಶೇಖರ್