ಶಾಸಕ ಹೆಚ್.ಪಿ. ಮಂಜುನಾಥ್ ವಿರುದ್ಧ ಯೋಗಾನಂದಕುಮಾರ್ ಆಕ್ರೋಶ

ಹುಣಸೂರು, ಮೇ 4(ಕೆಕೆ)- ಕೊರೊನಾ ವೈರಸ್ 2ನೇ ಅಲೆಯು ವಿಶ್ವವ್ಯಾಪಿ ತತ್ತರಗೊಳಿಸಿರುವ ಈ ಕೆಟ್ಟ ಪರಿಸ್ಥಿತಿಯಲ್ಲಿ ಯಾವುದೇ ವ್ಯಕ್ತಿಗಳು ಸಾರ್ವಜನಿಕರನ್ನು ದಿಕ್ಕು ತಪ್ಪಿಸಬಾರದು ಹಾಗೂ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೆ ಸರ್ಕಾರವು ಆದೇಶಿಸಿರುವ ಆರೋಗ್ಯ ತುರ್ತು ಪರಿಸ್ಥಿತಿಯ ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸು ವಂತೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾ ನಂದಕುಮಾರ್ ಮನವಿ ಮಾಡಿದ್ದಾರೆ.

ನಗರದ ಪತ್ರಿಕಾ ಕಚೇರಿಯಲ್ಲಿ ಮಾತ ನಾಡಿದ ಅವರು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಮಂಜುನಾಥ್ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಕೋವಿಡ್-19 ಬರುವುದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಏಕ ವಚನದಲ್ಲಿ ಸಂಭೋದನೆ ಮಾಡಿರುವುದು ಪ್ರಚೋ ದನಕಾರಿ ಹೇಳಿಕೆಯಾಗಿದೆ ಎಂದರು.

ರಾಷ್ಟ್ರದ ಪ್ರಧಾನಿ ಮೋದಿ ಅವರ ಬಗ್ಗೆ ಏಕವಚನದಲ್ಲಿ ಹಗುರವಾಗಿ ಮಾತನಾಡಿ ರುವುದಕ್ಕೆ ಶಾಸಕರು ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಹುಣಸೂರು ಪ್ರವೇಶಕ್ಕೆ ನಿರ್ಬಂಧ ಹೇರ ಬೇಕಾಗುತ್ತದೆ ಹಾಗೂ ಪ್ರತಿಭಟಿಸ ಬೇಕಾಗುತ್ತದೆ ಎಂದರು.

ಹಾಗೆಯೇ ಶಾಸಕರು ಕೋವಿಡ್ ನಿಯಮಾ ವಳಿಗಳನ್ನು ಉಲ್ಲಂಘಿಸಿ ಬರಿ ಪ್ರಚಾರಕ್ಕಾಗಿ ತಮ್ಮ ನಾದಿನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮರ್‍ನಾಥ್ ಅವರನ್ನು ಕರೆತಂದಿದ್ದು ತಪ್ಪು. ಮೈಸೂರು ಜಿಲ್ಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಸರಿಯಿಲ್ಲ. ಮೈಸೂರು ಜಿಲ್ಲೆ ವ್ಯಾಪ್ತಿ ಯಲ್ಲಿಯೇ ಕೊರೊನಾ ಸೋಂಕಿತರು ಹೆಚ್ಚಾಗಲು ನೀವು ಮತ್ತು ನಿಮ್ಮ ಕುಟುಂಬವೇ ಕಾರಣರಾಗಿರುತ್ತೀರಿ ಎಂದು ದೂರಿದರು.
ಇನ್ನು ಮುಂದೆ ಶಾಸಕರು ಮತ್ತು ಅವರ ನಾದಿನಿ ಹುಣಸೂರಿಗೆ ಪ್ರವೇಶ ಮಾಡ ಬೇಕಾದರೆ ಪ್ರತಿ ಕ್ಷಣದಲ್ಲಿಯೂ ಕೋವಿಡ್ -19 ದೃಢೀಕರಣ ಪತ್ರವನ್ನು ಪಡೆದು ಹುಣಸೂರು ತಾಲೂಕನ್ನು ಪ್ರವೇಶಿಸ ಬೇಕು. ಇಲ್ಲವೆಂದರೆ ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕು ಆಡಳಿತ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ವಹಿಸ ಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರ ವಹಿಸಿಕೊಂಡ ನಂತರ ಹುಣಸೂರಿನಲ್ಲಿ ತಾಲೂಕು ಅಧಿಕಾರಿಗಳ ಜೊತೆಯಲ್ಲಿ ಹಲವು ಸಭೆಯನ್ನು ನಡೆಸಿ ವ್ಯವಸ್ಥಿತವಾಗಿ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವುದಕ್ಕೆ ಅವಿರತ ಪ್ರಯತ್ನ ಪಟ್ಟಿದ್ದಾರೆ. ಅವರ ವಿರುದ್ಧ ಹಗುರವಾಗಿ ಏಕ ವಚನದ ಶಬ್ದ ಬಳಕೆ ಮಾಡಿರು ವುದು ಸಹ ಖಂಡನಾರ್ಹವಾಗಿದೆ. ಹಾಗೂ ಹುಣಸೂರು ತಾಲೂಕು ಮಟ್ಟದ ಅಧಿಕಾರಿ ಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸಬೇಕಾದ ಶಾಸಕರು ಅವರ ಸ್ಥೈರ್ಯವನ್ನು ಕುಗ್ಗಿಸಿ ತಾಲೂ ಕಿನ ಅಭಿವೃದ್ಧಿಗೆ ಕಂಟಕ ವಾಗುತ್ತಿದ್ದಾರೆ.

12 ವರ್ಷ ಹುಣಸೂರಿನಲ್ಲಿ ಶಾಸಕ ರಾದ ನೀವು ಹುಣಸೂರಿನ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡದೇ ನಿಮ್ಮ ಸ್ವಂತ ಕೆಲಸದ ವಿಚಾರದಲ್ಲಿ ಜಿಲ್ಲಾಧಿಕಾರಿಯವರು ಜಯಪುರ ಗ್ರಾಮದ ನಿಮ್ಮ ಸ.ನಂ ಅನ್ಯ ಕ್ರಾಂತವಾಗಬೇಕಾಗಿರುವ ಕಡತಗಳನ್ನು ತಿರಸ್ಕರಿಸಿರುವುದರಿಂದ ಅವರ ವಿರುದ್ಧ ಸಭೆಗಳಲ್ಲಿ ಅವಾಚ್ಯವಾಗಿ ನಿಂದಿಸಿ ಕೊನೆಗೆ ಕಾಡಿಬೇಡಿ ನಿಮ್ಮ ಕಡತ ಗಳನ್ನು ವಿಲೇವಾರಿ ಮಾಡಿಸಿಕೊಂಡಿರುವುದು ಯಾರಿಗೂ ಗೊತ್ತಿಲ್ಲವೆಂದು ಭಾವಿಸಿದ್ದೀರಾ? ನಿಮ್ಮ ಸ್ವಂತ ಕೆಲಸಕ್ಕೆ ಇರುವ ಕಾಳಜಿ ಸಾರ್ವ ಜನಿಕರ ಕೆಲಸಕ್ಕೇಕಿಲ್ಲ ಎಂದರು.

ನೀವು ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಾಲೂಕಿಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಮೊದಲು ಸ್ಪಷ್ಠಪಡಿಸಬೇಕಾ ಗುತ್ತದೆ ನೀವು ಶಾಸಕನಾಗುವ ಮೊದಲು ಹುಣಸೂರು ಜನತೆಗೆ ಅನುಕೂಲವಾಗು ವಂತೆ ಸಣ್ಣ ಕೈಗಾರಿಕೆಯನ್ನು ಸ್ಥಾಪಿಸು ತ್ತೇನೆ, 2 ಬೋರ್‍ವೆಲ್ ಲಾರಿಗಳನ್ನು 2 ಜೆ.ಸಿ.ಬಿಗಳನ್ನು ವೈಯುಕ್ತಿಕವಾಗಿ ಸಾರ್ವಜನಿಕ ಕೆಲಸ ಮಾಡುವುದಕ್ಕೆ ಬಿಡುತ್ತೇನೆ ಎಂದು ಹೇಳಿದ ಮಾತು ಏನಾಯಿತು? ಎಂದು ಪ್ರಶ್ನಿಸಿದರು.
ನೀರಾವರಿಗೆ ಸಂಬಂಧಪಟ್ಟಂತೆ ಕಟ್ಟೆಮಳಲವಾಡಿ ಕಟ್ಟೆಯ ದುರಸ್ತಿ ಕೆಲಸಕ್ಕೆ ಕೋಟಿಗಟ್ಟಲೇ ರೂಪಾಯಿಗಳನ್ನು ಪಡೆದು ಗುತ್ತಿಗೆ ಕೆಲಸವಾದ 1 ತಿಂಗಳಿನಲ್ಲಿ ಸದರಿ ಕಾಮಗಾರಿಯು ಕಾಣದಂತಾಗಿದೆ. ಇದು ನೀವು ಮಾಡಿರುವ ಅಭಿವೃದ್ಧಿ ಕೆಲಸ. ನಿಲುವಾಗಲು-ರಾಮೇನಹಳ್ಳಿ ಲಕ್ಷ್ಮಣತಿರ್ಥ ನದಿಯಿಂದ ಏತ ನೀರಾವರಿ ಯೋಜನೆಗೆ 4.5 ಕೋಟಿ ಹಣ ಮಂಜೂರು ಮಾಡಿಸಿ ಕೊಂಡ ಯೋಜನೆ ಏನಾಯಿತು? ಮತ್ತೊಮ್ಮೆ ಇದೆ ಯೋಜನೆಗೆ 19.5 ಕೋಟಿ ಮಂಜೂರು ಮಾಡಿಸಿಕೊಟ್ಟಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಬಿಜೆಪಿ ನಗರ ಅಧ್ಯಕ್ಷ ಹಾಗೂ ಹುಣಸೂರು ನಗರಾಭಿ ವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಣೇಶ್‍ಕುಮಾರ ಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿ ಹರವೆ ರವಿಕುಮಾರ್ ಉಪಸ್ಥಿತರಿದ್ದರು.