ಕೋವಿಡ್ ಕೇರ್ ಸೆಂಟರ್‍ಗೆ ಶಾಸಕ ನಿರಂಜನಕುಮಾರ್ ಭೇಟಿ

ಗುಂಡ್ಲುಪೇಟೆ, ಮೇ 3 (ಸೋಮ್.ಜಿ)- ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ನಿರಂ ಜನಕುಮಾರ್ ತಾಲೂಕಿನ ವೀರನಪುರ ಗೇಟ್ ಬಳಿಯ ಮೊರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಧಿಕಾರಿಗಳ ಸಭೆ ನಡೆಸಿ, ವಿವರ ಪಡೆದರು.

ಶಾಸಕರಿಗೆ ಮಾಹಿತಿ ನೀಡಿದ ತಹಸೀ ಲ್ದಾರ್ ರವಿಶಂಕರ್, ತಾಲೂಕಿನ ವೀರನ ಪುರ ಗೇಟ್, ಮೇಲುಕಾಮನಹಳ್ಳಿಯ ಮೊರಾರ್ಜಿ ವಸತಿ ಶಾಲೆಗಳು ಹಾಗೂ ಬೇಗೂರಿನ ಕಿತ್ತೂರು ಚೆನ್ನಮ್ಮ ಶಾಲೆಯಲ್ಲಿ ತಲಾ 100 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದು, ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಿ ಸಿದ್ಧತೆ ಕೈಗೊಳ್ಳಲಾಗಿದೆ. ನೆರೆಯ ರಾಜ್ಯಗಳಿಂದ ಬರುವ ಎಲ್ಲರನ್ನೂ ಆರ್‍ಟಿಪಿಸಿಆರ್ ಪರೀಕ್ಷೆಗೊಳಪಡಿಸಿ ಫಲಿತಾಂಶ ಬರು ವವರೆಗೆ ಇಲ್ಲಿ ಇರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.

ನಂತರ ಮಾತನಾಡಿದ ಶಾಸಕ ನಿರಂ ಜನ್, ಲಸಿಕೆ ವಿತರಣೆ ಹಾಗೂ ಸೋಂಕಿ ತರ ವಿವರ ಪಡೆದು ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡುವಂತೆ ಸೂಚಿಸಿದರು. ಬೊಮ್ಮಲಾಪುರ ಹಾಗೂ ಬಾಚಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ರೋಗಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಕಿಟಕಿಗಳಿಂದಲೇ ಔಷಧಿ ಕೊಡುತ್ತಿರು ವುದು ಆ ಭಾಗದ ಜನರಿಗೆ ಸಮಸ್ಯೆ ಯಾಗುತ್ತಿದೆ ಎಂಬ ದೂರುಗಳಿವೆ. ಇದನ್ನು ಪರಿಶೀಲಿಸಿ ಹಂಗಳ ಹಾಗೂ ಬರಗಿ ಆಸ್ಪತ್ರೆಗಳಿಗೆ ವೈದ್ಯರನ್ನು ನಿಯೊ ೀಜಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜು ನಾಥ್ ಮಾತನಾಡಿ, ನರ್ಸ್‍ಗಳ ಕೊರತೆ ಹೆಚ್ಚಾಗಿದ್ದು, ಹೆಚ್ಚಿನ ನರ್ಸಿಂಗ್ ಸಿಬ್ಬಂದಿ ನೇಮಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಗ್ರಾಪಂ ಪಿಡಿಓಗಳ ಸಭೆ ಕರೆದು ಬೇರೆಡೆಗಳಿಂದ ಬಂದಿರುವ ಸೋಂಕಿತರ ಪತ್ತೆ, ಚಿಕಿತ್ಸೆ, ಕಂಟೈನ್ ಮೆಂಟ್ ವಲಯ ನಿರ್ಮಾಣ ಹೊಣೆ ನೀಡುವಂತೆ ತಾಪಂ ಇಓ ಶ್ರೀಕಂಠರಾಜೇ ಅರಸ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಕುಮಾರ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಮುಖ್ಯಾಧಿಕಾರಿ ಎ.ರಮೇಶ್, ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಮಹದೇವಸ್ವಾಮಿ, ಲಕ್ಷ್ಮಿಕಾಂತ, ಸಿಡಿಪಿಒ ಚೆಲುವರಾಜು ಸೇರಿದಂತೆ ಹಲವರು ಇದ್ದರು.